ವಾರ ಭವಿಷ್ಯ 14.04.2024 ರಿಂದ 20.04.2024 ರ ವರೆಗೆ

Picture of RB NEWS

RB NEWS

Bureau Report


ವಿಶೇಷ ದಿನಗಳು :

14.04.2024…..ಸ್ಕಂದ ಷಷ್ಟಿ ,ಸೌರ ಯುಗಾದಿ [ವಿಷು]
17.04.2024…..ಶ್ರೀ ರಾಮ ನವಮೀ


ಮೇಷ : ನೀವು ಈ ವಾರ ಬಹಳ ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇರುತ್ತದೆ .ಯಾಕೆಂದರೆ
ವ್ಯಯದಲ್ಲಿ ಬುಧ ,ಶುಕ್ರ, ರವಿ, ರಾಹು ಇದ್ದಾರೆ , ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿರಿ. ಹಣದ
ವ್ಯವಹಾರದಲ್ಲಿ ಎಚ್ಚರವಿರಲಿ ಆಧಾರವಿಲ್ಲದ ಬೇರೆಯವರ ಮಾತನ್ನು ನೇರವಾಗಿ ನಂಬಲು
ಹೋಗಬೇಡಿರಿ .ವಿದ್ಯಾರ್ಥಿಗಳು ಯಶಸ್ವಿಯಾಗುವರು . ದೇವರಿಲ್ಲ ಎಂಬ ವಿತಂಡವಾದ ನಿಮಗೆ
ಒಪ್ಪುತ್ತಿಲ್ಲ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಪ್ರಾಣಾಯಾಮ ಅಗತ್ಯವಿದೆ .
ಸಧ್ಯದಲ್ಲಿ ದೇವರ ಅನುಗ್ರಹ ನಿಮ್ಮ ಪಾಲಿಗೆ ಒದಗಿ ಬರಲಿದೆ .ಬರುವ ಆದಾಯಕ್ಕೆ ಯಾವುದೇ ಕೊರತೆ
ಇರುವುದಿಲ್ಲ ಉದ್ಯೋಗ ಕ್ಷೇತ್ರದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಮುಂದುವರಿಯಿರಿ.


ವೃಷಭ : ಗುರುವಿನ ಅನುಗ್ರಹದ ಕೊರತೆಯ ನಡುವೆಯೂ ಲಾಭ ಕ್ಷೇತ್ರದಲ್ಲಿ ಶುಕ್ರ ಬುಧ ರಾಹು ರವಿ
ಇರುವುದರಿಂದ ಧಾರಾಳವಾಗಿ ವಿವಿಧ ಮೂಲಗಳಿಂದ ಆದಾಯ ಹರಿದುಕೊಂಡು ಬರಲಿದೆ .ಮಾಡಿರುವ
ಸಾಲಕ್ಕೆ ಬರುತ್ತಿರುವ ಹಣದ ಹರಿವು ,ಬಕಾಸುರನ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬಂತಾಗಲಿದೆ .” ಓಂ
ಕ್ಷಿಪ್ರ ಪ್ರಸಾದಾಯ ನಮ : “ಶ್ರೀ ಗಣಪತಿ ದೇವರ ಈ ಮಂತ್ರದ 108 ಬಾರಿ ಪಾರಾಯಣದ ನಂತರವೇ
ಮನೆಯಿಂದ ಹೊರಡಿರಿ . ಹಿರಿಯರೊಂದಿಗೆ ಹೊಂದಾಣಿಕೆಯೇ ನಿಮಗೆ ಸಮಸ್ಯೆ ಆಗಲಿದೆ . ಸಿಟ್ಟಿನಿಂದ
“ನನಗೆ ಏನೂ ಬೇಡ “ ಎಂದು ತಪ್ಪಿಯೂ ಹೇಳ ಬೇಡಿ . ರಾಜಕೀಯದಲ್ಲಿ ಉನ್ನತ ಹುದ್ದೆ
ಪಡೆಯಲಿದ್ದೀರಿ . ಕುಲ ದೇವರ ಪ್ರಾರ್ಥನೆ ಅಗತ್ಯವಿದೆ.


ಮಿಥುನ : ಗುರುವಿನ ಅನುಗ್ರಹ ಇನ್ನೂ ಕೆಲವೇ ದಿನಗಳಲ್ಲಿ ಮುಗಿಯಲಿದೆ .ನಿತ್ಯವೂ ವಿಷ್ಣು ಸಹಸ್ರ ನಾಮ
ಪಾರಾಯಣ ಮಾಡಲು ಆರಂಭಿಸಿರಿ . ಉದ್ಯೋಗ/ವ್ಯವಹಾರ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು
ಬರಲಿವೆ .ನಾಲ್ಕು ಪರಸ್ಪರ ವಿರೋಧ ಸ್ವಭಾವದ ಗ್ರಹರು ,ಶುಕ್ರ ಉಚ್ಚ ಗ್ರಹನಾಗಿ ಮೀನ ರಾಶಿಯಲ್ಲಿ
ಸೇರಿದ್ದಾರೆ . ಮಾತಿನಲ್ಲಿ ಎಚ್ಚರವಿರಲಿ ಉದ್ಯೋಗದಲ್ಲಿ ಮಹಿಳೆಯ ಸಹಕಾರದಿಂದ ಬಡ್ತಿಯ ಅವಕಾಶ
ಸಿಗಲಿದೆ .ದೇವಿಯ ಅನುಗ್ರಹಕ್ಕಾಗಿ ಪ್ರಾರ್ಥನೆ ಅಗತ್ಯವಿದೆ .ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ತೇರ್ಗಡೆ
ಹೊಂದಲಿದ್ದಾರೆ . ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲತೆ ಒದಗಿ ಬರಲಿದೆ .ವಾಹನ ಮನೆ ಭೂಮಿ
ಕೊಳ್ಳುವಾಗ ಎಚ್ಚರ ಇರಲಿ . ಚಾಮುಂಡಿಯ ಆರಾಧನೆ ಮಾಡಿರಿ.


ಕರ್ಕಾಟಕ : ಅಷ್ಟಮದಲ್ಲ ಇರುವ ಕುಜ ಶನಿ [23 ರಂದು ಕುಜ ಮೀನ ರಾಶಿಗೆ ಹೋಗಲಿದ್ದಾನೆ ]ನಿಮ್ಮಿಂದ
ಸರಿಯಾದ ಪರಿಹಾರವನ್ನು ನಿರೀಕ್ಷೆ ಮಾಡುತ್ತಿದ್ದಾನೆ .ನರಸಿಂಹ ದೇವರ ಮಂತ್ರವನ್ನು 108 ಬಾರಿ
ಪ್ರತಿನಿತ್ಯ ಪಾರಾಯಣ ಮಾಡುವ ಅಗತ್ಯವಿದೆ .ನಿಮ್ಮ ಪ್ರತಿಯೊಂದು ಉದ್ಯೋಗ ವ್ಯವಹಾರದಲ್ಲಿ ,ಹಣದ
ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸೂಚನೆ ಕೊಡುತ್ತಿದ್ದಾನೆ .ಸಾಲ ಕೊಡುವುದು
,ತೆಗೆದುಕೊಳ್ಳುವುದು ,ಜಾಮೀನು ಸಹಿ ಹಾಕುವುದು ಬೇಡವೇ ಬೇಡ . ಆರೋಗ್ಯದ ಕಡೆಗೆ ಗಮನವಿರಲಿ ವಾದ ವಿವಾದಗಳಿಂದ ಆದಷ್ಟು ದೂರವಿರುವುದು ಒಳ್ಳೆಯದು . ಮದ್ಯ ಸೇವನೆಯಿಂದ ದೂರವಿರುವುದು
ಒಳ್ಳೆಯದು .


ಸಿಂಹ: ಸಪ್ತಮದಲ್ಲಿ ಕುಜ ಮತ್ತು ಶನಿ ಇರುವುದರಿಂದ ಕುಟುಂಬದಲ್ಲಿ ಬೀಗುವಿನ ವಾತಾವರಣ
ಇರುತ್ತದೆ . ವಿದೇಶಕ್ಕೆ ಹೋಗುವ ಯೋಗವನ್ನು ರವಿ ನೀಡುತ್ತಿದ್ದಾನೆ .ಅಷ್ಟಮದಲ್ಲಿ ರವಿ ಶುಕ್ರ ರಾಹು
ಬುಧ ಇರುವುದು ನಿಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಸೂಚನೆ ನೀಡುತ್ತಿದ್ದಾರೆ. ಮನಸ್ಸನ್ನು
ಹತೋಟಿಯಲ್ಲಿ ಇಟ್ಟು ಕೊಂಡು ನಿತ್ಯದ ಕೆಲಸಗಳನ್ನು ಮಾಡುತ್ತಾ ಮುನ್ನೆಡೆಯಿರಿ .ಉನ್ನತ ಸ್ಥಾನ
ಮಾನ ಪಡೆಯಲಿದ್ದೀರಿ. ಪ್ರೀತಿ ಪ್ರೇಮಕ್ಕೆ ಬಲಿಯಾಗದಿರಿ . ಯಾರಲ್ಲಿಯೂ ಅತಿಯಾದ ಆತ್ಮ ವಿಶ್ವಾಸ
ಬೇಡ . ತನ್ನಮರ್ಯಾದೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ .ವಿದ್ಯಾರ್ಥಿಗಳು ಯಶಸ್ಸನ್ನು
ಸಾಧಿಸುವರು.


ಕನ್ಯಾ : ನೀವು ನಿರಂತರ ಕುಜನಿಗೆ ಪರಿಹಾರ ಮಾಡಬೇಕಿದೆ . ಈಗ ಕುಂಭರಾಶಿಯಲ್ಲಿ ಮತ್ತೆ ಒಂದೂವರೆ
ತಿಂಗಳು ಮೀನ ರಾಶಿಯಲ್ಲಿ ,ಮತ್ತೆ ಒಂದೂವರೆ ತಿಂಗಳು ಮೇಷ ರಾಶಿಯಲ್ಲಿ;ನರಸಿಂಹ ದೇವರ ನಿತ್ಯ
ಪಾರಾಯಣ ಮಾಡಬೇಕು ,ಗುರು ಮೇ ಒಂದರಂದು ಭಾಗ್ಯಕ್ಕೆ ಬಂದರೂ ಕುಜ ನಿಮ್ಮನ್ನು ಬಿಡುವುದಿಲ್ಲ
,ಹೆಂಡತಿ ,ಸಹೋದರ ,ಕುಟುಂಬದವರೊಂದಿಗೆ ನಿತ್ಯವೂ ಕಲಹದ ಸೂಚನೆ ಇರುತ್ತದೆ ,ನಿಮ್ಮ ಜಾತಕವನ್ನು
ಒಮ್ಮೆ ಪರೀಶೀಲನೆ ಪರಿಣತರಲ್ಲಿ ತೋರಿಸಬೇಕು .ಬೆಂಕಿ ,ವಿದ್ಯುತ್ ,ಆಯುಧ ,ವಾಹನ ಇವುಗಳಲ್ಲಿ
ಜಾಗ್ರತೆ .ವಿಪರೀತ ಒತ್ತಡವನ್ನು ತಂದುಕೊಳ್ಳುವಿರಿ ,ಮಾತಾಡುವ ಮೊದಲು ಯೋಚನೆ ಮಾಡಿರಿ .
ಅನಾವಶ್ಯಕ ಖರ್ಚು ವೆಚ್ಚಗಳ ಬಗ್ಗೆ ಎಚ್ಚರವಿರಲಿ . ಚಾಡಿ ಹೇಳಲು ಆರಂಭಿಸಬೇಡಿರಿ.


ತುಲಾ : ಆರನೆಯ ಮನೆಯ ಶುಕ್ರ ರಾಹು ರವಿ ಬುಧ , ಸಪ್ತಮದಲ್ಲಿ ಇರುವ ಗುರು ನಿಮ್ಮ ಆದಾಯದ
ಮಟ್ಟವನ್ನು ಉತ್ತುಂಗಕ್ಕೆ ಒಯ್ಯಲಿದ್ದಾನೆ. ವಿಶ್ರಾಂತಿ ಇಲ್ಲದ ದುಡಿಮೆ ಬೇಸರವನ್ನು ಉಂಟು
ಮಾಡಲಿದೆ . ಪಂಚಮದಲ್ಲಿ ಇರುವ ಕುಜ ಮತ್ತು ಶನಿ ಮನಸ್ಸಿನಲ್ಲಿ ವೈರಾಗ್ಯದ ಭಾವನೆಯನ್ನು
ಮೂಡಿಸಲಿದ್ದಾರೆ . ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಲಿದ್ದೀರಿ .ವಿದ್ಯಾರ್ಥಿಗಳು ಉನ್ನತ
ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಯೋಚನೆ ಮಾಡಲಿದ್ದಾರೆ . ಮೇ ಒಂದರಂದು ಗುರು ಅಷ್ಟಮಕ್ಕೆ
ಬರಲಿದ್ದು ಈಗದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣ ಆರಂಭ ಮಾಡಿರಿ . ವಿರೋಧಿಗಳ ಬಗ್ಗೆ
ಗಮನವಿರಲಿ .ಸಹೋದರಿಯ ಮಾತುಕತೆಯನ್ನು ಗುರು ಮಾಡಿಸಲಿದ್ದಾನೆ.


ವೃಶ್ಚಿಕ : ಎಪ್ರಿಲ್ 23, ಮೇ 01 ನಿಮ್ಮ ಜೀವನದಲ್ಲಿಯೇ ನೆನಪಿನಲ್ಲಿ ಇಟ್ಟುಕೊಳ್ಳುವ ದಿನಗಳು ,ಕುಜ
ಮೀನ ರಾಶಿಗೆ ಹೋಗುವ ದಿನ ,ಹಾಗೆಯೇ ಗುರು ವೃಷಭ ರಾಶಿಗೆ ಹೋಗುವ ದಿನವನ್ನು ಕಾಯಬೇಕಿದೆ,
ಎಪ್ರಿಲ್ 13 ರಂದು ರವಿ ಮೇಷ ರಾಶಿಗೆ ಬರುತ್ತಾನೆ . ಅಂತೂ ಕುಜ ಮತ್ತು ಶನಿ ಒಟ್ಟು ಸೇರಿ ಅನಾವಶ್ಯಕ
ವಾದ ವಿವಾದಗಳನ್ನು ಸೃಷ್ಟಿ ಮಾಡಿ ಮಾನಸಿಕ ಒತ್ತಡವನ್ನು ಹೆಚ್ಚುವಂತೆ ಮಾಡಿದ್ದಾರೆ . ನರಸಿಂಹ
ದೇವರನ್ನೇ ಮೊರೆ ಹೋಗಬೇಕಿದೆ . [ಮಂತ್ರ ಬೇಕಿದ್ದರೆ ತಿಳಿಸಿ } ವಾಹನ ಚಾಲನೆಯಲ್ಲಿ ಎಚ್ಚರವಿರಲಿ
.ಆರೋಗ್ಯದಲ್ಲಿ ಎಚ್ಚರವಿರಲಿ ಕಿಡ್ನೀ ಸ್ಟೋನ್ ಉಂಟಾಗಬಹುದು ,ದಿನಕ್ಕೆ 2 ಲೀಟರ್ ಬಿಸಿನೀರು
ಕುಡಿಯಲೇ ಬೇಕು .

ಧನು : ಸುಖ ಸ್ಥಾನದಲ್ಲಿ ಶುಕ್ರ ,ರಾಹು ರವಿ ಬುಧ ಇದ್ದು ಪ್ರಸ್ತುತ ಅನಾವಶ್ಯಕವಾಗಿ ಕುಟುಂಬದಲ್ಲಿ
ಮನಸ್ತಾಪಕ್ಕೆ ಕಾರಣರಾಗಲಿದ್ದಾರೆ . ಪಂಚಮದಲ್ಲಿ ಇರುವ ಗುರು ಮೇ ಒಂದರಂದು ಆರನೆಯ ಮನೆಗೆ
ಹೋಗುತ್ತಿದ್ದಾನೆ ,ಈಗದಿಂದಲೇ ವಿಷ್ಣು ಸಹಸ್ರನಾಮ ಪಾರಾಯಣ ಆರಂಭಿಸಿರಿ .ಆತ್ಮೀಯರೊಂದಿಗೆ
ಚರ್ಚಿಸಿ ನೀವು ತೆಗೆದು ಕೊಳ್ಳುವ ತೀರ್ಮಾನಗಳು ಯಶಸ್ವಿಯಾಗಲಿವೆ. ಕುಟುಂಬದಲ್ಲಿ ಕೆಲವೊಂದು
ಬದಲಾವಣೆಗಳು ನಿರೀಕ್ಷಿತ . ಹಣ ಕಾಸಿನ ವಿಚಾರದಲ್ಲಿ ಒಳ್ಳೆಯ ತೀರ್ಮಾನವನ್ನು ತೆಗೆದು ಕೊಳ್ಳಿರಿ
.ಫುಡ್ ಪಾಯಿಸನ್ ಆಗುವ ಸಾಧ್ಯತೆ ಇದೆ .ಉಷ್ಣದ ತೊಂದರೆ ಕಂಡು ಬರಲಿದೆ . ಕುಟುಂಬದ
ಸದಸ್ಯರೊಂದಿಗೆ ವಿಷ್ಣು ಕ್ಷೇತ್ರಕ್ಕೆ ಭೇಟಿಯಾಗುವಿರಿ . ನಿಮ್ಮ ಆಸ್ತಿಯ ಒಂದು ಭಾಗವನ್ನು ಮಾರಾಟ
ಮಾಡುವರೇ ಯೋಚನೆ ಮಾಡಲಿದ್ದೀರಿ .


ಮಕರ : ಸಾಡೇ ಸಾತ್ ಶನಿಯ ಕೊನೆಯ ಭಾಗದಲ್ಲಿ ಇದ್ದೀರಿ ದ್ವಿತೀಯಾಲ್ಲಿ ಕುಜ ಮತ್ತು ಶನಿ ಇದ್ದಾರೆ
.ವ್ಯರ್ಥ ಖರ್ಚು ,ನಿಷ್ಟುರದ ಮಾತು ಕುಟುಂಬದಲ್ಲಿ ಮನಸ್ತಾಪ ಇರುತ್ತದೆ ಕೆಲಸ ,ಕಾರ್ಯಗಳಲ್ಲಿ
,ಉದ್ಯೋಗದಲ್ಲಿ ಆತುರದ ನಿರ್ಧಾರ ಬೇಡ ,.ಮನೆ ಬದಲಾವಣೆಯ ಸಾಧ್ಯತೆ ಇದೆ .ದಾನ ಧರ್ಮ
ಮಾಡುವಾಗ ನಿಮ್ಮ ಪರಿಸ್ಥಿತಿಯನ್ನು ಕೂಡಾ ಗಮನದಲ್ಲಿ ಇಟ್ಟುಕೊಳ್ಳಿರಿ . ಎಲ್ಲರಲ್ಲಿಯೂ
ಅನುಮಾನದ ಭಾವನೆ ನಿಮ್ಮದಾಗಲಿದೆ .ಮೇ ಒಂದರ ನಂತರ ಗುರುವಿನ ಅನುಗ್ರಹ ನಿಮ್ಮದಾಗಲಿದೆ . ಆ
ನಂತರದಲ್ಲಿ ಮಂಗಳ ಕಾರ್ಯವೊಂದು ನಿಮ್ಮಲ್ಲಿ /ನಿಮ್ಮವರಲ್ಲಿ ನಡೆಯಲಿದೆ .ಕೆಲಸದ ಮಧ್ಯೆ ವಿಶ್ರಾಂತಿ
ಅಗತ್ಯವಿದೆ . ಮೂರನೆಯ ಮನೆಯಲ್ಲಿ ಇರುವ ಶುಕ್ರ ರವಿ ಬುಧ ರಾಹು ಅನೇಕ ಮೂಲಗಳಿಂದ ಆರ್ಥಿಕ
ಆದಾಯವನ್ನು ನೀಡಲಿದ್ದಾರೆ . ಆದರೆ ಜೊತೆಯಲ್ಲಿ ಶನಿ ವ್ಯರ್ಥ ಖರ್ಚು ಮಾಡಿಸುತ್ತಾನೆ.


ಕುಂಭ : ಜನ್ಮದಲ್ಲಿ ಕುಜ ಮತ್ತು ಶನಿ ,ದ್ವಿತೀಯಾದಲ್ಲಿ ರವಿ,ಬುಧ ,ರಾಹು ಶುಕ್ರ ಇವರ ಕಾರಣದಿಂದ
ಕುಟುಂಬದಲ್ಲಿ ಹಣಕಾಸಿನ ಅವ್ಯವಸ್ಥೆ ಕಂಡು ಬರಲಿದೆ ,.ವಾದ ವಿವಾದ ,ಸಿಟ್ಟು ಕ್ರೋಧ ,ಇನ್ನೊಬ್ಬರ
ಮಧ್ಯೆ ಮದ್ಯಸ್ತಿಕೆ ವಹಿಸುವುದು ನಿಮಗೆ ಶ್ರೇಯಸ್ಕರವಲ್ಲ. ಅತಿಯಾದ ಮಾನಸಿಕ ಒತ್ತಡ ನಿಮ್ಮಲ್ಲಿ
ಇರುತ್ತದೆ .ರಾಜಕೀಯ ಸಧ್ಯಕ್ಕೆ ನಿಮಗೆ ಬೇಡ .ಮೇಷ ಸಂಕ್ರಮಣದ ನಂತರ ಅದರ ಬಗ್ಗೆ ಯೋಚಿಸಿರಿ .
ಆಹಾರ ಸೇವನೆಯಲ್ಲಿ ಇತಿಮಿತಿ ಇರಲಿ .ಸಹೋದರನ ಜೊತೆಯಲ್ಲಿ ವಾದ ವಿವಾದ ಬರಲಿದೆ. ಯಾರಿಗೂ
ಹೊಡೆಯುವ ಸಾಹಸ ಬೇಡ. ದನಗಳಿಗೆ ,ಹಕ್ಕಿಗಳಿಗೆ ನೀರುಣಿಸುವ ಕೆಲಸವನ್ನು ಮಾಡಿರಿ .ಸಾಧ್ಯವಿದ್ದರೆ
ಶಂಖ ದಾನ ಮಾಡಿರಿ . ಆತ್ಮ ಸಂತೋಷದ ಕೊರತೆ ಇರುತ್ತದೆ.


ಮೀನ : ಜನ್ಮ ರಾಶಿಯಲ್ಲಿ ಶುಕ್ರ,ರಾಹು,ರವಿ,ಬುಧ, ವ್ಯಯದಲ್ಲಿ ಇರುವ ಕುಜ ಮತ್ತು ಶನಿ ಸಾಡೇ ಸಾತ್
ಶನಿಯ ಪ್ರಭಾವವನ್ನು ನಿಮ್ಮ ಮೇಲೆ ತೋರಿಸಲಿದ್ದಾರೆ . ಖರ್ಚಿನ ಮೇಲೆ ನಿಯಂತ್ರಣ ಅತೀ ಅಗತ್ಯವಿದೆ .
ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರಿಸಲಿದ್ದಾರೆ ಉದ್ಯೋಗದಲ್ಲಿ ವರ್ಗಾವಣೆ/ಬದಲಾವಣೆ
ಸಾಧ್ಯತೆ ಕಂಡು ಬರಲಿದೆ . ಭೂಮಿ ನಷ್ಟ ಯೋಗವಿದೆ .ಕಲಹ ಸಾಧ್ಯತೆ ಇದೆ .ಗಂಟಲಿನ ಸೋಂಕು
ಬರಲಿರುವುದರಿಂದ ತಂಪು ಪಾನೀಯಗಳಿಂದ ದೂರವಿರುವುದು ಒಳ್ಳೆಯದು. ಮನಸ್ಸಿನ ನೆಮ್ಮದಿಯ
ಕೊರತೆಯಿಂದ ಬಳಲುವಿರಿ ವಿಷ್ಣು ಸಹಸ್ರನಾಮ ಪಾರಾಯಣ ಅತೀ ಅಗತ್ಯವಾಗಿದೆ .ಮೇ ಒಂದರಂದು
ಗುರು ತೃತೀಯಾಕ್ಕೆ ಪಾದಾರ್ಪಣೆ ಮಾಡಲಿದ್ದಾನೆ ,ಗುರುವಿನ ಅನುಗ್ರಹ ನಷ್ಟವಾಗಲಿದೆ .

ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿ ಕೊಡಲಾಗುವುದು , .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ನಡೆಯುವ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು .ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ತಿಳಿಸಲಾಗುವುದು .

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top