[t4b-ticker]

ವಾರ ಭವಿಷ್ಯ ದಿನಾಂಕ 3.03.2024 ರಿಂದ 9.03.2024 ರವರೆಗೆ

Picture of RB NEWS

RB NEWS

Bureau Report

  

ವಿಶೇಷ ದಿನಗಳು :

08.03.2024…….ಮಹಾ ಶಿವರಾತ್ರಿ
07.03.2024…….ಮೀನ ರಾಶಿಗೆ ಬುಧನ ಮತ್ತು ಶುಕ್ರನ ಪ್ರವೇಶ


ಮೇಷ : ಗುರು ಜನ್ಮ ರಾಶಿಯಲ್ಲಿ ಮೇ 01 ರವರೆಗೆ ಇರುತ್ತಾನೆ .ಅಗತ್ಯಕ್ಕಿಂತ ಅಧಿಕ ಮಾನಸಿಕ ಒತ್ತಡವನ್ನು ತಂದು ಕೊಳ್ಳುತ್ತೀರಿ. ಮನೆ ,ಸೈಟ್,ವಾಹನ ಕೊಳ್ಳುವ ಕನಸು ನನಸಾಗಲಿದೆ .ಕೆಲಸಗಳೆಲ್ಲವೂ ಲೀಲಾಜಾಲವಾಗಿ ನೆರವೇರಲಿದೆ .ಕುಜ ಕರ್ಮ ಸ್ಥಾನದಲ್ಲಿ ಇದ್ದುಕೊಂಡು ಉದ್ವೇಗ ಸಿಟ್ಟು ಬರುವಂತೆ ಮಾಡಲಿದ್ದಾನೆ . ಬುಧ ಮತ್ತು ರಾಹು ವ್ಯಯದಲ್ಲಿ ಇದ್ದುಕೊಂಡು ಇನ್ಫೆಕ್ಷನ್ ಫುಡ್ ಪಾಯಿಸನ್ ಬರುವಂತೆ ಮಾಡಬಹುದು.ಹೊರಗಿನ ಆಹಾರ ಬೇಡ .ನಿಧಾನವಾಗಿ ಊಟ ಮಾಡಿರಿ.ಸರಿಯಾಗಿ ಬೇಯಿಸಿದ ಆಹಾರವನ್ನೆ ಸ್ವೀಕರಿಸಿರಿ. ಬರುತ್ತಿರುವ ಸಂಪಾದನೆಗೆ ಈ ವಾರ ಯಾವುದೇ ಕೊರತೆ ಇರುವುದಿಲ್ಲ.


ವೃಷಭ :ಕಳೆದ ವಾರಕ್ಕಿಂತ ಈ ವಾರ ಕೆಲವೊಂದು ಬದಲಾವಣೆಗಳನ್ನು ಕಾಣುವಿರಿ .ಲಾಭ ಕ್ಷೇತ್ರದಲ್ಲಿ ರಾಹು ಮತ್ತು ಬುಧ ಇದ್ದಾರೆ ,ನೀವು ಮಾಡಬೇಕೆಂದಿರುವ ಕೆಲಸ ಯಶಸ್ವಿಯಾಗಿ ನಡೆಯಲಿದೆ .ಈ ವಾರ ನಿಮ್ಮ ಮಂತ್ರ “ಓಂ ನಮ: ಶಿವಾಯ “ ವ್ಯಯದಲ್ಲಿರುವ ಗುರುವಿಗೆ ಇದುವೇ ಪರಿಹಾರವಾಗಿದೆ . ಸಂತೋಷ ಧನಲಾಭ ಬರಲಿದೆ .ಕರ್ಮ ಕ್ಷೇತ್ರದಲ್ಲಿ ರವಿ,ಶನಿ ,ಶುಕ್ರ ಇರುವುದರಿಂದ ,ಆಗಬೇಕಿರುವ ಕೆಲಸಗಳೆಲ್ಲವೂ ಒಳ್ಳೆಯ ರೀತಿಯಲ್ಲಿ ಆದರೂ ಏನೋ ಒಂದು ಚಿಂತೆ ಮನಸ್ಸನ್ನು ಕಾಡುತ್ತಿರುತ್ತದೆ .ಹಿತ ಶತ್ರುಗಳ ಕಾಟ ಇರುತ್ತದೆ .ತಾಯಿಯವರ ಆರೋಗ್ಯದ ಕಡೆಗೆ ಗಮನವಿರಲಿ .


ಮಿಥುನ : ಉತ್ತಮವಾದ ದೈವಾನುಗ್ರಹ ಮೇ 01 ರವರೆಗೆ ಇರುವುದರಿಂದ ಬೇರೆ ಎಲ ತೊಂದರೆಗಳನ್ನು ಸಹಿಸಿ ಕೊಳ್ಳುವ ಶಕ್ತಿ ನಿಮ್ಮಲ್ಲಿ ಇರುತ್ತದೆ . ಕೇತು ನಿಮ್ಮಲ್ಲಿ ನಕಾರಾತ್ಮಕ ಭಾವನೆಯನ್ನುತರಲಿದ್ದಾನೆ. ಉದ್ಯೋಗದ ಅನ್ವೇಷಣೆಯಲ್ಲಿ ಇರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ . ಮಕ್ಕಳ ಬಗ್ಗೆ ,ಅವರ ವಿದ್ಯಾರ್ಜನೆಯ ಬಗ್ಗೆ ಮನಸ್ಸಿಗೆ ಚಿಂತೆ ಬರಲಿದೆ ಭಾಗ್ಯದಲ್ಲಿ ಶುಕ್ರ,ರವಿ ಶನಿ ಇರುವುದರಿಂದ ನಮ್ಮ ಸಲಹೆಗಳನ್ನು ಮಕ್ಕಳು ಸ್ವೀಕರಿಸಲು ತಯಾರಾಗಿರುವುದಿಲ್ಲ. ಅಷ್ಟಮದಲ್ಲಿ ಕುಜ ಇರುವುದರೆಯಿಂದ ಶತ್ರು ಭಯ ,ಆರೋಗ್ಯದ ಚಿಂತೆ ಮನಸ್ಸಿನಲ್ಲಿ ಇರುತ್ತದೆ ಶಿವ ಕ್ಷೇತ್ರದಲ್ಲಿ ಯಥಾ ಶಕ್ತಿ ಸೇವೆಯನ್ನು ಸಲ್ಲಿಸಿರಿ .


ಕರ್ಕಾಟಕ : ಅಷ್ಟಮದಲ್ಲಿ ಶುಕ್ರ ರವಿ ಶನಿ ಇರುವುದನ್ನು ಗನಿಸಿರಿ .ನೀವು ಮಾಡುವ ಯಾವುದೇ ವ್ಯವಹಾರದಲ್ಲಿ ವಿಘ್ನಗಳು ಶಾರೀರಿಕ ತೊಂದರೆಗಳು ಆರೋಗ್ಯ ಸಮಸ್ಯೆಗಳು ಬರುತ್ತಿರುತ್ತವೆ. ಬಿ‌ಪಿ ಷುಗರ್ ಸಮಸ್ಯೆ ಇರುವವರು ಎಚ್ಚರ ವಹಿಸಿರಿ ,ಸತಿ ಪತಿಯರ ನಡುವೆ ಹೊಂದಾಣಿಕೆಯ ಬಗ್ಗೆ ಎಚ್ಚರ ವಹಿಸಿರಿ . ಕುಜ ಸಪ್ತಮದಲ್ಲಿ ಇದ್ದಾನೆ .ಉದ್ಯೋಗದಲ್ಲಿ ಇರುವವರು ತಾಳ್ಮೆ ಸಂಯಮದಲ್ಲಿ ಇರುವುದು ಒಳ್ಳೆಯದು . ವಿಷ್ಣು ದೇವರ ಪ್ರಾರ್ಥನೆ ಮಾಡಿರಿ .ಕಣ್ಣಿನ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಬರಬಹುದು .ಸಹೋದರ ವರ್ಗದವರ ಜೊತೆಗೆ ಹೊಂದಿ ಕೊಂಡು ಮುಂದುವರಿಯಿರಿ . ವಿದ್ಯಾರ್ಥಿಗಳೆ ನಿಮ್ಮ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲಿ ಪ್ರೀತಿ ಪ್ರೇಮದ ಕಡೆಗೆ ಹೋಗಬೇಡಿರಿ .


ಸಿಂಹ : ಸಪ್ತಮದಲ್ಲಿ ಶುಕ್ರ ,ರವಿ, ಶನಿ ,ಇರುವ ಸಮಯ ‘,ನಾನು ‘ ಎಂಬ ಅಹಂ ‘ಕಾರದಿಂದ ಹೊರಗೆ ಬನ್ನಿರಿ . ಹೊಂದಾಣಿಕೆಯ ಮಂತ್ರ ನಿಮ್ಮಲ್ಲಿರಲಿ . ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ ಮಾತು ಸಿಹಿಯಾಗಿರಲಿ . ವ್ಯರ್ಥ ಖರ್ಚುಗಳು ಕಾದು ಕೊಂಡಿರುತ್ತವೆ . ಕುಜ ಆರೋಗ್ಯದ ಮೇಲೆ ಒಂದು ದೃಷ್ಟಿಯನ್ನು ಇಟ್ಟಿರುತ್ತಾನೆ . ಎಚ್ಚರವಿರಲಿ .ಭೂಮಿ ಸಂಬಂಧವಾದ ಕಲಹಗಳು ಬರುವ ಸಮಯ . ಕೋರ್ಟ್ ಮೆಟ್ಟಲೇರುವ ಸಮಯ . ಯಶಸ್ಸು ನಿಮ್ಮಪಾಲಾಗಲಿದೆ .ಸಹೋದರ ನಿಮ್ಮಿಂದ ಸಹಾಯದ ನಿರೀಕ್ಷೆಯಲ್ಲಿರುತ್ತಾನೆ .ಪ್ರೇಮಿಗಳಿಗೆ ಕಲಹ ಬಂದು ಬೇರ್ಪಡುವ ಸಾಧ್ಯತೆ ಇರುತ್ತದೆ .


ಕನ್ಯಾ: ಜನ್ಮದಲ್ಲಿ ಕೇತು ಇದ್ದು ಸಪ್ತಮದಲ್ಲಿ ಬುಧ ಮತ್ತು ರಾಹು ಇದ್ದಾರೆ .ನೀವು ಆರೋಗ್ಯದ ಕಡೆಗೆ, ಮನಸ್ಸಿನ ನೆಮ್ಮದಿ ಬಗ್ಗೆ ಎಚ್ಚರ ವಹಿಸಿರಿ . ಗುರು ಅಷ್ಟಮದಲ್ಲಿ ಇರುವ ಸಕಾಯದಲ್ಲಿ ದೈವಾನುಗ್ರಹ ಕಡಿಮೆ ಇರುವ ಸಮಯ ಎಂದು ಹೇಳಲಾಗುತ್ತದೆ .ವಿಷ್ಣು ದೇವರ ಯಥಾ ಶಕ್ತಿ ಸೇವೆಯನ್ನು ಮಾಡಿರಿ . ಮನೆ ಬದಲಾಯಿಸುವ ಯೋಚನೆ ಇದ್ದರೆ ಸಧ್ಯಕ್ಕೆ ಬೇಡ . ಮಕ್ಕಳ ಬಗ್ಗೆ ,ಅವರ ವಿದ್ಯಾಭ್ಯಾಸದ ಬಗ್ಗೆ ಗಮನ ಅಗತ್ಯವಿದೆ. ಅವರ ವರ್ತನೆ ಬೇಸರ ತರಬಹುದು . ಮೊಬೈಲ್ ಕೊಡಬೇಡಿರಿ . ಸತಿ ಪತಿಯರ ನಡುವೆ ಕಾಳಹದ ಸಾಧ್ಯತೆಯನ್ನು ಗುರು ತಿಳಿಸುತ್ತಿದ್ದಾನೆ ,ತಾಳ್ಮೆ ಇರಲಿ .


ತುಲಾ : ಸಪ್ತಮದಲ್ಲಿ ಗುರು ಇದ್ದು ದೈವಾನುಗ್ರಹ ಮೇ 01 ರ ವರೆಗೆ ಉತ್ತಮವಿದೆ . ಕುಜ ಚತುರ್ಥದಲ್ಲಿ ಇರುವುದರಿಂದ ಅವನು ದೈಹಿಕ ಆರೋಗ್ಯ ,ಕಲಹ ವಾಹನದ ಸಮಸ್ಯೆ ,ಭೂಮಿ ,ಮನೆ ಇದರ ಕೆಲಸದ ಬಗ್ಗೆ ಸಮಸ್ಯೆ ತರುವವನಾಗಿರುವುದರಿಂದ ನಾಗ ದೇವರ ಪ್ರಾರ್ಥನೆಯನ್ನು ಮಾಡಿರಿ . ಪಂಚಮದಲ್ಲಿ ಶುಕ್ರ,ರವಿ,ಶನಿ ಇರುವುದರಿಂದ ಮಕ್ಕಳ ವಿಷಯದಲ್ಲಿ ಸಮಸ್ಯೆಗಳು ಬಂದು ಹೋಗಲಿವೆ. ಬರುವ ಆದಾಯಕ್ಕೆ ಯಾವುದೇ ಕೊರತೆಗಳು ಇರುವುದಿಲ್ಲ ಪತ್ನಿಯ ಕಡೆಯಿಂದ ಆರ್ಥಿಕ ಸಹಾಯ ಬರಲಿದೆ . ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿರಿ . ಧ್ಯಾನ ,ಪ್ರಾಣಾಯಾಮ ಮಾಡುತ್ತಾ ಬನ್ನಿರಿ .


ವೃಶ್ಚಿಕ : ಮೇ 01 ರ ವರೆಗೆ ಗೋಚಾರವಾಗಿ ನೋಡುವಾಗ ಕಂಠಕದ ಸಮಯವಾಗಿರುತ್ತದೆ. ಮೂರು ಮಂದಿ ವೈರಿ ಗ್ರಹರು ಚತುರ್ಥದಲ್ಲಿ ಇರುವಾಗ ಪ್ರತಿಯೊಂದು ವಿಷಯದಲ್ಲಿ ಮನಸ್ಸನ್ನುಗಟ್ಟಿ ಮಾಡಿಕೊಂಡು ಮುಂದು ವರಿಯಬೇಕು .ಮನೆಯಲ್ಲಿ,ಮನೆಯಿಂದ ಹೊರಗೆ ,ಎಲ್ಲರೂ ನಮ್ಮನ್ನು ವೈರಿಗಳ ರೀತಿಯಲ್ಲಿ ನೋಡಿದಾಗ ಮೌನವಾಗಿ ಇರಬೇಕು .ವಿಷ್ಣು ದೇವರ ನಿತ್ಯ ಪ್ರಾರ್ಥನೆಯೊಂದೇ ಇದಕ್ಕೆ ಪರಿಹಾರವಾಗಲಿದೆ. ಆರೋಗ್ಯದ ಬಗ್ಗೆ ಮೇ 01 ರವರೆಗೆ ಎಚ್ಚರದಿಂದ ಇರಬೇಕು. ಬರುವ ಆದಾಯಕ್ಕೆ ತೊಂದರೆ ಇರುವುದಿಲ್ಲ ಭೂಮಿಯ ವ್ಯವಹಾರ ಮಾಡುವವರು ದಾಖಲೆ ಪರಿಶೀಲನೆ ಮಾಡಿಕೊಳ್ಳಿರಿ .


ಧನು :ದೈವಾನುಗ್ರಹ ಇರುವ ಸಮಯವಾಗಿದೆ . ಉತ್ತಮವಾಗಿ ಅನೇಕ ರೀತಿಯಲ್ಲಿ ಆದಾಯವನ್ನು ನಿರೀಕ್ಷೆ ಮಾಡಬಹುದಾದ ಸಮಯ. ಮನಸ್ಸು ಉತ್ತಮವಾಗಿದ್ದರೂ ಮಾತು ಸಿಟ್ಟಿನಿಂದ ಕೂಡಿರುತ್ತದೆ . ಅದನ್ನು ಸರಿ ಪಡಿಸಿ ಕೊಳ್ಳಿರಿ. ಬರುತ್ತಿರುವ ಆದಾಯವನ್ನುಉಳಿಸಿ ಕೊಳ್ಳುವ ದಾರಿಯನ್ನು ಕೂಡಾ ಕಂಡು ಕೊಳ್ಳಿರಿ. ಸುಖ ಸ್ಥಾನದಲ್ಲಿ ಬುಧ ರಾಹು ಇರುವುದು ನಿಮ್ಮ ಪತ್ನಿಯ ವಿಷಯದಲ್ಲಿ ,ಉದ್ಯೋಗದ ವಿಷಯದಲ್ಲಿ ಕೆಲವೊಮ್ಮೆ ಮನಸ್ಸಿಗೆ ಕಿರಿಕಿರಿ ಬರುವಂತೆ ಮಾಡಲಿದೆ. ಮನೆ ವಾಹನ ,ಭೂಮಿ ವಿಷಯದಲ್ಲಿ ಕೆಲವೊಂದು ಸಮಸ್ಯೆಗಳು ಬರಲಿವೆ ನಾಗ ದೇವರ ಪ್ರಾರ್ಥನೆ ಮಾಡಿರಿ .


ಮಕರ :ಕುಜ ಜನ್ಮ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ .ತಮ್ಮ ಶರೀರವನ್ನು ರಕ್ಷಿಸಿಕೊಳ್ಳುವುದು ಅಗತ್ಯವಾಗಿದೆ . ಗಾಯಗಳು ಆಗುವ ಸೂಚನೆ ಇದೆ ,ದ್ವಿತೀಯಾದಲ್ಲಿ ಶನಿ ರವಿ ಶುಕ್ರ ಇರುವುದರಿಂದ ಮಾತಿನಿಂದ ,ಅಲ್ಪ ವಿವಾದಗಳು ಬರಲಿವೆ. ಶನಿ ಕೂಡಾ ವ್ಯರ್ಥ ಖರ್ಚು ಬರುವಂತೆ ಮಾಡುವವನಾಗಿರುತ್ತಾನೆ . ಬಂಧು ಬಾಂಧವರೊಂದಿಗೆ ಹೊಂದಿಕೊಂಡು ಮುಂದುವರಿಯುವುದೇ ಪರಿಹಾರವಾಗಲಿದೆ, ರಾಜಕೀಯದಲ್ಲಿ ಇರುವವರು ಎಚ್ಚರವಹಿಸಿರಿ.ಮಾತು ಕಲಹವಾಗಿ ಪರಿವರ್ತನೆ ಆಗಲಿದೆ . ತಾಯಿಯವರ ಬಗ್ಗೆ ಎಚ್ಚರಿಕೆಯ ನಡೆ ಇರಲಿ ನಾಗ ದೇವರ ಆರಾಧನೆ ಅವಶ್ಯವಾಗಿದೆ .


ಕುಂಭ : ಜನ್ಮದಲ್ಲಿ ಶುಕ್ರ ,ರವಿ ,ಶನಿ ಇರುವುದರಿಂದ ,ಅಷ್ಟಮದಲ್ಲಿ ಕೇತು ಇರುವುದರಿಂದ , ವ್ಯಯದಲ್ಲಿ ಕುಜ ಇರುವುದರಿಂದ ದ್ವಿತೀಯಾದಲ್ಲಿ ರಾಹು ಮತ್ತು ಬುಧ ಇರುವುದರಿಂದ ,ತೃತೀಯಾದಲ್ಲಿ ಗುರು ಇರುವುದರಿಂದ ಎಲ್ಲಾ ದೃಷ್ಟಿಯಿಂದ ಎಚ್ಚರಿಕೆ,ಎಚ್ಚರಿಕೆ ಇರಲಿ .ಮೂಲ ಜಾತಕವನ್ನು ಪರಿಶೀಲನೆ ಮಾಡುತ್ತಾ ಇರಬೇಕಿದೆ. ನವಗ್ರಹ ಆರಾಧನೆ ನಿಮ್ಮ ಯಥಾ ಶಕ್ತಿ ಮಾಡುವುದು ಒಳ್ಳೆಯದು . ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ಹಾಸಿಗೆಯ ಉದ್ದದಷ್ಟೇ ಕಾಲು ಚಾಚಿರಿ . ಆಡಂಬರ ಮಾಡಲು ಹೋಗಿ ಏನ ಕೇನ ಪ್ರಕಾರೇನ ಒಂದಕ್ಕೊಂದು ಆದೀತು,ಎಚ್ಚರವಿರಲಿ.


ಮೀನ : ಜನ್ಮ ರಾಶಿಯಲ್ಲಿ ಬುಧ ಮತ್ತು ರಾಹು ಮತ್ತು ಸಪ್ತಮದಲ್ಲಿ ಕೇತು ಇರುವುದರಿಂದ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಂಡು ಮುಂದುವರಿಯುವುದು ಅವಶ್ಯವಾಗಿದೆ. ಗೊತ್ತಿದ್ದೂ ತಪ್ಪು ಮಾಡುವುದು ನಡೆಯಲಿದೆ .ಗುರು ದ್ವಿತೀಯಾದಲ್ಲಿ ಇರುವುದು ಮತ್ತು ಲಾಭ ಕ್ಷೇತ್ರದಲ್ಲಿ ಕುಜನಿರುವುದು ಬರುವ ಆದಾಯಕ್ಕೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಿದ್ದಾರೆ . ವ್ಯಯದಲ್ಲಿ ಶುಕ್ರ ರವಿ ಶನಿ ಆದಾಯ ಎಷ್ಟೇ ಬಂದರೂ ಬರುವ ಮುಂಚೆ ಅದಕ್ಕೆ ಒಂದು ದಾರಿ ತಯಾರಾಗಿರುತ್ತದೆ , ನಿಮ್ಮ ಸಹೋದರಿಯ ಆರೋಗ್ಯದ ಬಗ್ಗೆ ನೀವು ಖರ್ಚು ಮಾಡಬೇಕಾದ ಅನಿವಾರ್ಯತೆ ಬರಲಿದೆ . ಎಷ್ಟೊಂದು ಜಾಗ್ರತೆ ವಹಿಸಿದರೂ ನಿಮ್ಮ ಆರೋಗ್ಯ ವ್ಯತ್ಯಾಸವಾಗುವ ಸಾಧ್ಯತೆ ಇದೆ .ವೈದ್ಯಕೀಯ ಪರಿಶೀಲನೆ ಅಗತ್ಯವಿದೆ .


ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುತ್ತದೆ . ಜಾತಕವಿಲ್ಲದವರಿಗೆ ಕವಡೆಮೂಲಕ ವಿವರಣೆ ನೀಡ;ಲಾಗುತ್ತದೆ . ನೀವು ನಡೆಸುವ ಶುಭ ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು . ವಾಸ್ತು ಸಲಹೆ /ವಿವಾಹ ಹೊಂದಾಣಿಕೆಯನ್ನು ಮಾಡಿ ಕೊಡಲಾಗುವುದು
.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top