ವಿಶೇಷ ದಿನಗಳು :
14.05.2024: ವೃಷಭ ಸಂಕ್ರಮಣ ;,ಗಂಗೋತ್ಪತ್ತಿ:
ಮೇಷ : ದ್ವಿತೀಯಾದಲ್ಲಿ ಗುರುವಿದ್ದು ಜೀವನದಲ್ಲಿ ಶುಭೋದಯದ ಕಾಲ ಉದಯವಾಗಿದೆ
.ವಿದ್ಯಾರ್ಥಿಗಳು ಯಶಸ್ವಿಯಾಗುವರು .ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸೂಚನೆಯಿದೆ .
ಅನೇಕ ಮೂಲಗಳಿಂದ ಆದಾಯದ ಮೂಲಗಳು ಬರಲಿವೆ . ಕುಜ ,ಬುಧ, ರಾಹು ವ್ಯಯದಲ್ಲಿ
ಇರುವುದರಿಂದ ತಂಪಾದ ಆಹಾರವನ್ನು ಸೇವನೆ ಮಾಡಬೇಡಿರಿ . ಕೆಟ್ಟ ಯೋಚನೆಗಳು ಮನಸ್ಸಿನಿಂದ
ದೂರವಾಗಲಿ .ಸಂಬಂಧವಿಲ್ಲದ ವಿಚಾರಗಳಿಗೆ ಮೂಗು ತೂರಿಸಲು ಹೋಗಬೇಡಿರಿ .ದುರ್ಗಾ ಕವಚ
ಪಾರಾಯಣ ,ಸುಬ್ರಹ್ಮಣ್ಯ ದೇವರ ಆರಾಧನೆ ಅಗತ್ಯವಿದೆ .ಸಹೋದರರ ಬಗ್ಗೆ ಕೀಳರಿಮೆ ಬೇಡ ಹಿರಿಯರ
ಜೊತೆಗೆ ವಾದ ವಿವಾದ ಬೇಡ . ವ್ಯರ್ಥ ಖರ್ಚುಗಳು ಬರಲಿವೆ .
ವೃಷಭ : ಶುಭ ಸಮಯ ಬಂದೈತೆ ಸ್ವಾಮಿ ನಿಮಗೆ,ಗಜ ಕೇಸರಿ ಯೋಗ ಕೂಡಿ ಬಂದೈತೆ . ಕುಜ ರಾಹು
ಬುಧ ಲಾಭ ಕ್ಷೇತ್ರದಲ್ಲಿ ಇರುವ ನೀವು ಭೂಮಿಯ ವ್ಯವಹಾರದಿಂದ ಉತ್ತಮ ಲಾಭವನ್ನು ಪಡೆಯುವಿರಿ .
ಭೂಮಿ ಖರೀಧಿ ಯೋಗವಿದೆ . ಕುಟುಂಬದವರು ಪೂರ್ಣ ಸಹಕಾರ ನೀಡಲಿದ್ದಾರೆ . ರಾಜಕೀಯದಿಂದ
ದೂರವಿದ್ದಷ್ಟೂ ಒಳ್ಳೆಯದು . ಶುಕ್ರ ಮತ್ತು ರವಿ ವ್ಯಯದಲ್ಲಿ ಇದ್ದಾರೆ .ನಿಮ್ಮ ಮನೆಯನ್ನು
ಬದಲಾಯಿಸುವ ಸಮಯವಾಗಿದೆ .ಮಹಿಳೆಯರ ವಿಷಯದಲ್ಲಿ ಅಪವಾದ ಬರದಂತೆ ಎಚ್ಚರ ವಹಿಸಿರಿ .
ಶಿಕ್ಷಕ ವೃತ್ತಿಯವರಿಗೆ ಉತ್ತಮ ಅನುಕೂಲವಾಗಲಿದೆ . ಎಷ್ಟೇ ಹಣ ಬಂದರೂ ಯೋಜಿತ ,ಯೋಚಿತ
ರೀತಿಯಲ್ಲಿ ಉಪಯೋಗವಾಗುವುದಿಲ್ಲ ,ಸಮುದ್ರದಲ್ಲಿ ಹೋಗುತ್ತಿರುವ ದೋಣಿ ,ಗಾಳಿ ಬೀಸಿದ ಕಡೆಗೆ
ಹೋಗುವಂತೆ ಜೀವನವಾಗಲಿದೆ.
ಮಿಥುನ :ವ್ಯಯದಲ್ಲಿ ಗುರು ಬಂದಿರುವುದರಿಂದ ,ಸುಖ ಸ್ಥಾನದಲ್ಲಿ ಕೇತು ಇರುವುದರಿಂದ ಕೆಲವೊಂದು
ಅನಿರೀಕ್ಷಿತ ಘಟನೆಗಳು ನಿಮ್ಮನ್ನು ವಿಚಲಿತರನ್ನಾಗಿ ಮಾಡಲಿದೆ .ಕುಟುಂಬದಲ್ಲಿನ ಕೆಲವೊಂದು
ವಿಚಾರಗಳು ಬೇಸರವನ್ನು ಉಂಟು ಮಾಡಲಿದೆ .ಶುಕ್ರ ಮತ್ತು ರವಿ ಲಾಭ ಕ್ಷೇತ್ರದಲ್ಲಿ ಇರುವುದರಿಂದ
ಮಕ್ಕಳು ಸಕಾಲದಲ್ಲಿ ಸಹಾಯ ಮಾಡುವರು .ಸರಕಾರಿ ಉದ್ಯೋಗ ಅವರಿಗೆ ದೊರೆಯಲಿದೆ .ನೀವು
ಉದ್ಯೋಗ ಮಾಡುವಲ್ಲಿ ಕೆಲವೊಂದು ಕಿರಿ ಕಿರಿ ಇರುತ್ತದೆ .ಹೊಂದಾಣಿಕೆಯೇ ಜೀವನ , ಸರಕಾರದಿಂದ
ಬರಬೇಕಾಗಿರುವ ಬಾಕಿ ಹಣವನ್ನು ಪಡೆಯುವಿರಿ . ಪತ್ನಿ /ಪತಿಯ ಹೊಂದಾಣಿಕೆ ಇಡೀ ವರ್ಷ
ಒಂದಾಗಿರಬೇಕಾಗಿರುವುದು ಆಗತ್ಯವಾಗಿದೆ .
ಕರ್ಕಾಟಕ : ಬಹಳ ಅದೃಷ್ಟದ ಒಂದುವರ್ಷದ ಕಾಲ ನಿಮ್ಮೆದುರು ಬಂದಿದೆ ಹಿರಿಯರನ್ನು ಬೇಸರ
ಮಾಡಿಸದೆ ಹೊಂದಿಕೊಂಡು ಹೋಗ ಬೇಕಾಗಿರುವುದು ಅತೀ ಅಗತ್ಯವಾಗಿದೆ . ಅಷ್ಟಮದ ಶನಿಯ
ಕಾರಣದಿಂದ ಎಲ್ಲಾ ಕಡೆಯಲ್ಲಿಯೂ ಆತುರದ ನಿರ್ಧಾರ ನಿಮ್ಮಲ್ಲಿರುತ್ತದೆ ,ನಷ್ಟ ಖರ್ಚು
ನಿಮ್ಮಲ್ಲಿರುತ್ತದೆ . ಸಂಗಾತಿಯ ತಪ್ಪು ತಿಳುವಳಿಕೆಯಿಂದ ಕೆಲವೊಮ್ಮೆ ಅನಾವಶ್ಯಕ ಸಮಸ್ಯೆ ಸೃಷ್ಟಿ
ಆಗಲಿದೆ .ವಿದ್ಯಾರ್ಥಿಗಳು ಎಚ್ಚರದಿಂದ ಮುಂದುವರಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ . ಉದಾಸೀನಕ್ಕೆ
ಮದ್ದಿಲ್ಲ.” ಯೌವನಮ್ ಪ್ರಭುತ್ವಮ್ ಐಶ್ವರ್ಯಮ್ ,ಅವಿವೇಕತಾ “, ,ಮನುಷ್ಯನಿಗೆ ಅಗತ್ಯಕ್ಕಿಂತ
ಅಧಿಕ ಸಂಪತ್ತು ಬಂದಾಗ ಯೌವನ ವಿದ್ದಾಗ ,ಸರಿಯಾದ ಮಾರ್ಗದರ್ಶನ ಇಲ್ಲದೆ ಇದ್ದಾಗ ,ಅಧಿಕಾರ
ತನ್ನ ಕೈಗೆ ಬಂದಾಗ ,ಅರ್ಧ ರಾತ್ರಿಯಲ್ಲಿ ಕೊಡೆ ಬಿಡಿಸಿ ಕುಳಿತು ಕೊಂಡ ಹಾಗೆ ಆಗಬಹುದು ಎಂಬ ಸೂಚನೆ
ಇದೆ ಗುರು ಶುಕ್ರನ ಮನೆಗೆ ಅಂದರೆ ತನ್ನ ವೈರಿಯ ಮನೆಗೆ ಬಂದಿದ್ದಾನೆ . ಎಚ್ಚರವಿರಲಿ.
ಸಿಂಹ :ಕರ್ಮಾಧಿಪತಿ ಶುಕ್ರ ಭಾಗ್ಯದಲ್ಲಿ ರವಿಯೊಂದಿಗೆ ಇರುವುದರಿಂದ ಉದ್ಯೋಗದಲ್ಲಿ ಭಡ್ತಿ
ಯೋಗವಿದೆ ,ತಂದೆಯವರಿಂದ ವಿಶೇಷ ಕೊಡುಗೆಯನ್ನು ಪಡೆಯುವಿರಿ . ಮಾನಸಿಕವಾಗಿ ಸದೃಢರಾದ ನೀವು
ಎಲ್ಲಿಯೂ ಹೆದರುವ ಪ್ರಶ್ನೆ ಇರುವುದಿಲ್ಲ. ಹಿರಿಯ ಅಧಿಕಾರಿಗಳ ಪ್ರೋತ್ಸಾಹ ನಿಮಗಿರುತ್ತದೆ .ಕುಜ
ರಾಹು ಬುಧ ಅಷ್ಟಮದಲ್ಲಿ ಇರುವಾಗ ,ಕುಜ ಸುಖಾಧಿಪತಿಯಾಗಿ ,ಅಷ್ಟಮದಲ್ಲಿ ಇರುವಾಗ
ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬಂದೇ ಬರುತ್ತದೆ , ಲಲಿತಾ ಸಹಸ್ರನಾಮ ಪಾರಾಯಣ ಮಾಡಬೇಕು .
ಮಾತು ಬಿಡುವುದು ,ಅಡುಗೆ ಮಾಡದಿರುವುದು ಮಾಡುವುದಲ್ಲ ಅದರ ಬದಲು ತಾಳ್ಮೆಯಿಂದ
ಸಹನೆಯಿಂದ ಇರುವುದು ಅಗತ್ಯವಾಗಿದೆ .
ಕನ್ಯಾ : ಜನ್ಮ ರಾಶಿಯಲ್ಲಿ ಕೇತು, ಸಪ್ತಮದಲ್ಲಿ ಕುಜ ರಾಹು ಬುಧ ,ಅಷ್ಟಮದಲ್ಲಿ ರವಿ ಮತ್ತು
ಶುಕ್ರನಿರುವುದು ಬಹಳ ಗೊಂದಲದ ವಿಷಯ .ಸತಿ –ಪತಿಯರಿಬ್ಬರೂ ಮಹಾ ಮೃತ್ಯುಂಜಯ ಜಪ
+ಹೋಮ ,ದುರ್ಗಾ ನಮಸ್ಕಾರ ಪೂಜೆ ಮಾಡಿಸುವ ಅಗತ್ಯವಿದೆ .ಒಮ್ಮೆ ಎಕೋ ಈಸಿಜಿ ಮಾಡಿಸುವ
ಅಗತ್ಯವಿದೆ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಅಗತ್ಯವಿದೆ . ಗುರು ಭಾಗ್ಯದಲ್ಲಿ ಬಂದಿದ್ದಾನೆ .
ಕುಟುಂಬದಲ್ಲಿ ಶುಭ ಸಂಭ್ರಮ ನಡೆಯುವ ಕಾಲವೂ ಹೌದು .ಕುಟುಂಬದಲ್ಲಿ ಅನಿರೀಕ್ಷಿತ ಘಟನೆಯೊಂದು
ನಡೆದು ಹೋಗಲಿದೆ ,ಕೂಡಲೇ ಜಾತಕ ಪರಿಶೀಲನೆ ಮಾಡಿಸಿರಿ . ಸೂಜಿಯಲ್ಲಿ ತೆಗೆಯುವ ಮುಳ್ಳನ್ನು
ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಹಂತಕ್ಕೆ ತೆಗೆದು ಕೊಂಡು ಹೋಗಬೇಡಿರಿ .ಮದ್ಯ ಸೇವನೆ ಮಾಡುವವರು
ಕೂಡಲೇ ನಿಲ್ಲಿಸಿರಿ .
ತುಲಾ : ಅಷ್ಟಮಕ್ಕೆ ಗುರು ಬಂದಿದ್ದಾನೆ .ಸಹೋದರನ ಜೊತೆಗೆ ಕಲಹ ಬರುವ ಸಾಧ್ಯತೆ ಇದೆ .
ಅಷ್ಟಮಾಧಿಪತಿ ಶುಕ್ರ ಸಪ್ತಮದಲ್ಲಿ ರವಿಯೊಂದಿಗೆ ಇರುವುದು ಪ್ರೀತಿ ಪ್ರೇಮಕ್ಕೆ ಬಲಿಯಾಗುವುದನ್ನು
ಸೂಚಿಸುತ್ತಿದೆ ,ಪತ್ನಿಯ ಅನಾರೋಗ್ಯವನ್ನು ಸೂಚಿಸುತ್ತಿದೆ . ಓಂ ಹ್ರೀಂ ಪರಾ ಶಕ್ತ್ಯೈ ನಮ: II ಪ್ರತಿನಿತ್ಯ
108 ಬಾರಿ ಹೇಳಬೇಕು .ನಿರೀಕ್ಷೆ ಮಟ್ಟಕ್ಕೆ ತಲುಪದ ಕಾರಣ ವಿದ್ಯಾರ್ಥಿಗಳು ಬೇಸರಿಸುವರು . ವ್ಯರ್ಥ
ಖರ್ಚು ಬರಲಿದೆ .ಹೆಂಡತಿಗಾಗಿ /ಪ್ರೇಯಸಿಗಾಗಿ ಖರ್ಚು ಮಾಡುವಿರಿ . ತಪ್ಪಿಯೂ ಒಂದು ಅನ್ಯ ಮಹಿಳೆಯ
ಕೈಗೆ ಸಿಕ್ಕಿ ಹಾಕಿಕೊಳ್ಳಬೇಡಿರಿ . ಹೊಗಳಿಕೆಗೆ ಮರುಳಾಗಿ ಮೋಸ ಹೋಗುವ ಸಮಯವಾಗಿದೆ ,.ಪತನ ಭಯ
ಯೋಗವಿದೆ . ನಿಮ್ಮ ಪ್ರಾಯಕ್ಕೆ ಅನುಗುಣವಾಗಿ ನೀವು ಜಾಗ್ರತೆಯನ್ನು ವಹಿಸಬೇಕು .
ವೃಶ್ಚಿಕ : ದಿನಾಂಕ 19 ರವರೆಗೆ ಶುಕ್ರ ಮತ್ತು ರವಿ ಮೇಷ ರಾಶಿಯಲ್ಲಿದ್ದು ಗುರು ಇನ್ನು ಒಂದು
ವರ್ಷಗಳ ಕಾಲ ಸಪ್ತಮದಲ್ಲಿ ಇರುವುದು ಪ್ರಸ್ತುತ ನಿಮಗೆ ಭಾಗ್ಯೋದಯದ ಕಾಲವೆಂದೇ
ಹೇಳಬೇಕಾಗುತ್ತದೆ . ರಾಶ್ಯಾಧಿಪತಿ ಹಾಗೂ ಷಷ್ಟದ ಅಧಿಪತಿ ಕುಜ ಪಂಚಮದಲ್ಲಿ ಕುಜ ,ಅವನ ಜೊತೆಗೆ
ರಾಹು ಮತ್ತು ಬುಧ ಇರುವುದು ಮಕ್ಕಳ ಸಂಬಂಧವಾಗಿ ಅನಾರೋಗ್ಯ ವಿಚಾರವಾಗಿ ಮನಸ್ಸಿಗೆ
ಬೇಸರವಾಗಲಿದೆ .ನಾಗ ದೇವರಿಗೆ ಪ್ರಾರ್ಥನೆ ಸಲ್ಲಿಸಿರಿ . ಶನಿ ದೇಹಕ್ಕೆ ಹಾಗೂ ಮನಸ್ಸಿಗೆ ನೋವನ್ನು
ಕೊಡುವವನು ,ಪರಿಹಾರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ .ಸಂಸಾರದಲ್ಲಿ ಒಮ್ಮತದ
ವಾತಾವರಣ ಮೂಡಿಸಿ ಕೊಳ್ಳಬೇಕಾದ ಅಗತ್ಯವಿದೆ.
ಧನು: ಶನಿಯನ್ನು ಹೊರತು ಪಡಿಸಿ ಉಳಿದವರೆಲ್ಲರೂ ಪ್ರತಿಕೂಲ ಫಲವನ್ನು ನೀಡುವವರಾಗಿದ್ದಾರೆ .
ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ .ಮುಖ್ಯವಾಗಿ ಆರೋಗ್ಯದ ಕಡೆಗೆ ಗಮನ
ಅಗತ್ಯವಿದೆ . ನಿಮ್ಮ ಬಹು ದಿನದ ಕನಸು ನನಸಾಗಲಿದೆ . ಬಿಪಿ ಷುಗರ್ ಪರೀಕ್ಷೆ ಮಾಡಿಸುತ್ತಿರಬೇಕು .
ಈಗಾಗಲೇ ಸಮಸ್ಯೆ ಇರುವವರಿಗೆ ಇದು ಅಗತ್ಯವಿದೆ ವೈಭವದ ಜೀವನಕ್ಕೆ ವ್ಯರ್ಥ ಖರ್ಚು ಮಾಡುವುದು
ಬೇಡ .ವಿದ್ಯಾರ್ಥಿಗಳು ಪಡುವ ಶ್ರಮಕ್ಕೆ ಸರಿಯಾಗಿ ಫಲವನ್ನು ಅನುಭವಿಸಲಿದ್ದಾರೆ . ದೇವರ
ಅನುಗ್ರಹವಿರುವುದಿಲ್ಲ . ನೀವು ಮಾಡುವ ಉದ್ಯೋಗದಲ್ಲಿ ವಿವಾದವೊಂದು ಉಂಟಾಗಲಿದೆ . ನೀವು
ಕೋಪಗೊಳ್ಳದೇ ಮೌನವಾಗಿರುವುದೇ ಪರಿಹಾರವಾಗಿದೆ .
ಮಕರ : ಪಂಚಮಕ್ಕೆ ಗುರು ಬಂದಿದ್ದಾನೆ . ದೈವಾನುಗ್ರಹ ಬಂದಾಗಿದೆ . ಸಾಡೇ ಸಾತ್ ಶನಿಯ ಪ್ರಭಾವ
ಕಡಿಮೆಯಾಗುತ್ತಾ ಬರುತ್ತಿದೆ . ನಿಮ್ಮ ಅನಾರೋಗ್ಯದ ಪರಿಸ್ಟಿತಿ ಕಡಿಮೆಯಾಗುತ್ತಿದೆ
,ಆರೋಗ್ಯವಂತರಾಗುತ್ತಿದ್ದೀರಿ . ದುಡ್ಡಿನ ಆದಾಯ ಬಹಳ ಉತ್ತಮ ಗೊಳ್ಳುತ್ತಿದೆ .ಇಲ್ಲಿ ನೀವು
ಗಮನಿಸಬೇಕಾದ ಅಂಶವೆಂದರೆ ಸುಖ ಸ್ಟಾನದಲ್ಲಿ ಶುಕ್ರ ಮತ್ತು ರವಿ ಇದ್ದಾರೆ .ರವಿ ಉಚ್ಚ
ಗ್ರಹನಾಗಿದ್ದಾನೆ ನಿಮಗೆ ರಾಜಕೀಯದಲ್ಲಿ ಉತ್ತಮ ಸ್ಥಾನ ಮಾನ ಲಭಿಸಲಿದೆ . ಹೃದಯಕ್ಕೆ ಸಂಬಂಧಿಸಿದ
ಪರೀಕ್ಷೆಗಳನ್ನು ಒಮ್ಮೆ ಮಾಡಿಸಿ ಕೊಳ್ಳಿರಿ . ಮಾತು ಕಡಿಮೆ ಇರಲಿ . ವಾಹನ ಮನೆ ಖರೀಧಿಸುವ ಕನಸು
ನನಸಾಗಲಿದೆ ಸಹೋದರ /ಸಹೋದರಿ ವರ್ಗದವರ ಸಹಕಾರ ನಿಮಗೆ ಸಿಗಲಿದೆ .
ಕುಂಭ : ಗುರು ಸುಖ ಸ್ಥಾನಕ್ಕೆ ಬಂದಿದ್ದಾನೆ .ಭೂಮಿ ಸಂಬಂಧವಾಗಿ ಸಹೋದರಿ /ಸಹೋದರ ವರ್ಗದವರ
ಮಧ್ಯೆ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ಶುಕ್ರ ಕುಜ ರಾಹು ಗ್ರಹರು ಸೂಚನೆ ಕೊಡುತ್ತಿದ್ದಾರೆ .
ನಿಮ್ಮ ಸಿಟ್ಟು ಇತಿಮಿತಿಯಲ್ಲಿ ಇಟ್ಟು ಕೊಳ್ಳಬೇಕಾದ ಅವಶ್ಯಕತೆ ಇದೆ . ಕೋರ್ಟ್ ಕಚೇರಿಯ /ಪೊಲೀಸ್
ಕಚೇರಿಯ ಮೆಟ್ಟಲೇರುವ ಸಾಧ್ಯತೆ ಇದೆ . ಬೇಸರ ತರುವವನು ಕೇತು ಆಗಿರುತ್ತಾನೆ . ಮಹಾ ಸುದರ್ಶನ
ಮಂತ್ರ/ಯಂತ್ರದ ಪೂಜೆಯ ಅವಶ್ಯಕತೆ ಇದೆ .ದುಡ್ಡು ಖರ್ಚುಹೆಚ್ಚು ಮಾಡದೆ ಇವುಗಳೆಲ್ಲ ಆಗಬೇಕಿದೆ .
ದಿನಾಂಕ 21 ಕ್ಕೆ ಶ್ರೀ ನೃಸಿಂಹ ಜಯಂತೀ ಇರುತ್ತದೆ . ಆ ದೇವರ ದೇವಾಲಯಗಳಲ್ಲಿ ವಿಶೇಷ ಪೂಜೆ
ಸಲ್ಲಿಸಬಹುದು .
ಮೀನ : ಜನ್ಮ ರಾಶಿಯಲ್ಲಿ ಕುಜ ,ರಾಹು ,ಬುಧ ಇದ್ದಾರೆ .ಜೊತೆಗೆ ಸಾಡೇ ಸಾತ್ ಶನಿಯ ಪ್ರಭಾವ
ನಡೆಯುತ್ತಲಿದೆ . ನಿಮ್ಮ ನಡಿಗೆ ಬೆಂಕಿಯ ಮೇಲೆ ಇರುತ್ತದೆ . ಅಂದರೆ ಎಲ್ಲಾ ವ್ಯವಹಾರದಲ್ಲಿಯೂ
ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ . ಚರ್ಮದ ,ಅಲರ್ಜಿಯ ಸಮಸ್ಯೆಯಿಂದ ಬಳಲುವಿರಿ .ನಾಗ
/ದುರ್ಗೆ ದೇವರ ಪ್ರಾರ್ಥನೆಯ ಅಗತ್ಯವಿದೆ . ದೈವಾನುಗ್ರಹ ಇಲ್ಲದೆ ಇರುವಾಗ ಅದನ್ನು ರೀಚಾರ್ಜ್ ನಾವು
ಮಾಡಿ ಕೊಳ್ಳಬೇಕು .ಪತಿ ಪತ್ನಿಯರ ನಡುವೆ ವಾಕ್ ಯುದ್ಧ ನಡೆಯುತ್ತಿರುತ್ತದೆ . ಅದು ಇತಿಮಿತಿಯಲ್ಲಿ
ಇರಬೇಕು .ಹೊಸತಾಗಿ ಮದುವೆಯಾಗಿ ಒಂದು ವರ್ಷ ಒಂದು ಕೋಣೆಯ ಒಳಗೆ ,ನಂತರ ಮನೆಯ ಒಳಗೆ
,ನಂತರ ಊರಿಗೆ ಕೇಳುವ ಹಾಗೆ ಗಲಾಟೆ ನಡೆಯುತ್ತದೆ ಎಂಬ ಮಾತಿದೆ . ಮಹಿಳೆ ಲಲಿತಾ ಸಹಸ್ರನಾಮ
ಪಾರಾಯಣ ಮಾಡಬೇಕು .
ನಿಮ್ಮ ಕಂಪ್ಯೂಟರ್ ಜಾತಕವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿ ಕೊಡಲಾಗುವುದು
.ಜಾರ್ತಕವಿಲ್ಲದವರಿಗೆ ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು . ನೀವು ನಡೆಸುವ ಶುಭ
ಕೆಲಸಗಳಿಗೆ ಮುಹೂರ್ತವನ್ನು ತಿಳಿಸಲಾಗುವುದು . .ವಿವಾಹ ಹೊಂದಾಣಿಕೆ /ವಾಸ್ತು ಸಲಹೆ
ತಿಳಿಸಲಾಗುವುದು .






































