ವಾರ ಭವಿಷ್ಯ
ದಿನಾಂಕ 09.06.2024 ರಿಂದ 15.06.2024 ರ ವರೆಗೆ
ವಿಶೇಷ ದಿನಗಳು :
12.06.2024…….ಮಿಥುನ ರಾಶಿಗೆ ಶುಕ್ರನಾ ಪ್ರವೇಶ
14.06.2024……ಮಿಥುನ ಸಂಕ್ರಮಣ :ಮಿಥುನ ರಾಶಿಗೆ
ರವಿ ಮತ್ತು ಬುಧನ ಪ್ರವೇಶ .
ಮೇಷ :ನಿಮ್ಮ ರಾಶಿಯ ಅಧಿಪತಿಯಾದ ,ಕುಜ ನು,ಅಷ್ಟಮಾಧಿಪತಿಯೂ ಆಗಿರುವುದರಿಂದ ನಿಮ್ಮ ಮತ್ತು
ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ,ಹೊಂದಾಣಿಕೆಯಲ್ಲಿ ಎಚ್ಚರವಾಗಿರುವಂತೆ ತಿಳಿಸಲಾಗುತ್ತದೆ .ನಿಮಗೆ
ಕೆಲಸದ ಒತ್ತಡಗಳ ವಿಶ್ರಾಂತಿಯ ಅಗತ್ಯವಿದೆ .ಬಿಪಿ ಹಿಮೋಗ್ಲೋಬಿನ್ ಬಗ್ಗೆ ಪರೀಕ್ಷೆ ಮಾಡಿಸಿ ಕೊಳ್ಳಿರಿ
.ಮಹಿಳೆಯರಿಗೆ ಹೊಟ್ಟೆನೋವಿನ ಸಮಸ್ಯೆ ಬರಲಿದೆ .ಗುರು ದ್ವಿತೀಯಾದಲ್ಲಿ ಇದ್ದು ಬರುವ ಆದಾಯಕ್ಕೆ
ಕೊರತೆ ಇರುವುದಿಲ್ಲ .ನೀವು ಮಾಡುತ್ತಿರುವ ಉದ್ಯೋಗದಲ್ಲಿ ಪ್ರಶಂಸೆ ಗೌರವ ಇರುತ್ತದೆ .ಶುಭ
ಸಮಾಚಾರಗಳು ಸಿಗಲಿವೆ. ರಾಹು ವ್ಯಯದಲ್ಲಿ ಇದ್ದಾನೆ .ಅನಾವಶ್ಯಕವಾದ ಚಿಂತೆಯಿಂದ ಹೊರಗೆಬನ್ನಿರಿ
.ವಿದ್ಯಾರ್ಥಿಗಳಿಗೆ ಸದವಕಾಶ ಒದಗಿ ಬರಲಿದೆ . ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶ ಸಿಗಲಿದೆ .ನೀರು ದಿನಕ್ಕೆ
ಎರಡು ಲೀಟರ್ ಕುಡಿಯಲು ಮರೆಯಬೇಡಿರಿ.
ವೃಷಭ : ನಾಲ್ಕು ಗ್ರಹರು ಜನ್ಮ ರಾಶಿಯಲ್ಲಿ ಜೊತೆಯಾಗಿ ಅದ್ಭುತ ಯೋಗವನ್ನು ಕೊಡುತ್ತಿದ್ದಾರೆ
.ಕುಜ ವ್ಯಯದಲ್ಲಿ ಇರುವುದರಿಂದ ಸತಿ ಪತಿದೂರ ದೂರವಾಗಿ ಇರುವ ಸಾಧ್ಯತೆ ಇರುತ್ತದೆ .ಮಕ್ಕಳ
ಸಂತೋಷವನ್ನುಅನುಭವಿಸುವಿರಿ .ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ. ನೀವು ಜೀವನ ಆಧಾರಕ್ಕೆ
ಉದ್ಯೋಗದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ . ದುರ್ಗಾ ನಮಸ್ಕಾರ ಪೂಜೆ ,ಸಪ್ತಶತಿ
ಪಾರಾಯಣ ಮಾಡುವ ಅಗತ್ಯವಿದೆ .ಸ್ವಂತ ವ್ಯಾಪಾರ ಅಷ್ಟೊಂದು ಬೆಳವಣಿಗೆಯನ್ನು
ಕಾಣುತ್ತಿಲ್ಲ.ಮಾತಿನಿಂದ ಜೀವನ ಮಾಡುವ ವಕೀಲರು ,ವೈದ್ಯರು ,ಅಧ್ಯಾಪಕರು ಒಳ್ಳೆಯ ಗೌರವ
ಮನ್ನಣೆ ಪಡೆಯುವರು .ಅನ್ಯ ಮಹಿಳೆಯ ಅಪವಾದ ಬರುವ ಸಾಧ್ಯತೆ ಇರುವುದರಿಂದ ಎಚ್ಚರವಾಗಿರಿ.
ಮಿಥುನ :ನಾಲ್ಕು ಗ್ರಹರು ವ್ಯಯದಲ್ಲಿ ವಾರದ ಅರ್ಧ ಭಾಗ ಇರುವುದರಿಂದ ಮನಸ್ಸಿನ ಒತ್ತಡವನ್ನು
ಸಹಿಸಿಕೊಂಡು ಮುಂದುವರಿಯ ಬೇಕಾಗುತ್ತದೆ .ಭೂಮಿಯ ವ್ಯವಹಾರ ಮಾಡುವವರಿಗೆ ಒಳ್ಳೆಯ ಯೋಗ
ಇರುತ್ತದೆ .ಆದರೆ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಕುಟುಂಬದ ಹಿರಿಯರೊಂದಿಗೆ ಧಾರ್ಮಿಕ
ಸ್ಥಳಕ್ಕೆ ಹೋಗುವ ಸಾಧ್ಯತೆ ಇರುತ್ತದೆ .ನೀವು ಮಾಡುವ ಖರ್ಚು ಒಳ್ಳೆಯ ಉದ್ದೇಶಕ್ಕೆ ಇರುತ್ತದೆ .
ದೈವಾನುಗ್ರಹದ ಕೊರತೆ ಇರುವುದರಿಂದ ನಿತ್ಯವೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವ
ಅಗತ್ಯವಿದೆ . ಒಳ್ಳೆಯ ಸ್ನೇಹಿತರ ಸಹಾಯದಿಂದ ನಿಮ್ಮ ಅತೀ ಅಗತ್ಯವಾದ ಕೆಲವೊಂದು ಕೈಗೂಡಲಿದೆ .
ಬೆಲೆಬಾಳುವ ವಸ್ತುಗಳ ಖರೀಧಿ ಯೋಗವಿದೆ.
ಕರ್ಕಾಟಕ : ಪೂರ್ಣ ದೈವಾನುಗ್ರಹವಿರುವ ಸಮಯವಿದು .ನೀವು ಮಾಡಬೇಕೆನ್ನುವ ಯಾವುದೇ
ವ್ಯವಹಾರಗಳು ಬಹಳ ಸುಲಭದಿಂದ ಕೈಗೂಡಲಿದೆ .ಶನಿ ಅಷ್ಟಮಾಧಿಪತಿಯಾಗಿ ಅಷ್ಟಮದಲ್ಲಿ
ಇರುವುದರಿಂದ ಹೆಚ್ಚೇನು ತೊಂದರೆ ಇರುವುದಿಲ್ಲ.ಆದರೂ ಆರೋಗ್ಯದ ಕಡೆಗೆ ನಿಮ್ಮ ಗಮನ
ಅಗತ್ಯವಿರುತ್ತದೆ.ಚಿನ್ನ ಬೆಳ್ಳಿಯ ವಸ್ತುಗಳನ್ನು ಖರೀಧಿ ಮಾಡುವ ಸಮಯ .ರವಿ ಬುಧ ಗುರು ಶುಕ್ರ
ಏಕಾದಶದಲ್ಲಿ ಇದ್ದಾರೆ .ಇದು ನಿಮಗೆ ಭಾಧಕ ಸ್ಥಾನ .ದೇವಿ ಅನ್ನಪೂರ್ಣೇಶ್ವರಿಯ ಅನುಗ್ರಹಕ್ಕಾಗಿ
ಅಕ್ಕಿಯ ದಾನವನ್ನು ದೇವಿ ಕ್ಷೇತ್ರಕ್ಕೆ ಮಾಡಿರಿ.ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ರಾಜ ಯೋಗ
ಆನಂದಿಸುವ ಸಮಯ .ಹಿರಿಯರೊಂದಿಗೆ ಮನಸ್ತಾಪ ವಾಗದಂತೆ ನೋಡಿಕೊಳ್ಳಿರಿ.
ಸಿಂಹ : ಜೀವನದಲ್ಲಿ ಸುಖದ ಕೊರತೆಯನ್ನು ಅನುಭವಿಸುವಿರಿ .ನಿಮ್ಮ ತಾಯಿಯವರು
ಅನುಭವಿಸುತ್ತಿರುವ ತಲೆನೋವು ನಿಮಗೂ ಕಿರಿಕಿರಿ ಎನಿಸಲಿದೆ .ಕೆಲವೊಮ್ಮೆ ನೀವು ತೆಗೆದುಕೊಳ್ಳುವ
ಆತುರದ ನಿರ್ಧಾರ ನಿಮ್ಮ ನೆಮ್ಮದಿಯನ್ನು ಹಾಳು ಮಾಡಲಿದೆ .ತಂದೆಯವರೊಂದಿಗೆ ಬಿಸಿಬಿಸಿ ವಾದ
ವಿವಾದಗಳು ಬರುವ ಸಾಧ್ಯತೆಯನ್ನು ಕುಜ ತಿಳಿಸುತ್ತಿದ್ದಾನೆ .ನರಸಿಂಹ ದೇವರ ಮಂತ್ರ ಪಾರಾಯಣದ
ಅಗತ್ಯವಿದೆ . ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಮಾಡಿಕೊಳ್ಳುವ ,ಮೇಲಧಿಕಾರಿಗಳಿಂದ ಮಿಶ್ರ
ಪ್ರತಿಕ್ರಿಯೆಯನ್ನು ಕಾಣುವಿರಿ . ನಿಮ್ಮ ಜೊತೆಯಲ್ಲಿ ಕೆಲಸಮಾಡುವ ವ್ಯಕ್ತಿಗಳ ಜೊತೆಗೆ
ಹೊಡಿಕೊಳ್ಳುವುದು ಅತೀ ಅಗತ್ಯವಾಗಿದೆ ಆದಿತ್ಯ ಹೃದಯ ಮಂತ್ರ ಪಾರಾಯಣ ಅಗತ್ಯವಿದೆ.
ಕನ್ಯಾ : ನಿಮ್ಮ ರಾಶ್ಯಾಧಿಪತಿ ಬುಧ …ಶುಕ್ರ ಗುರು ಬುಧ ರೊಂದಿಗೆ ಭಾಗ್ಯದಲ್ಲಿ ಇದ್ದಾರೆ .ಜೀವನದ
ದಾರಿ ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ . ಕುಜ ಅಷ್ಟಮಾಧಿಪತಿಯಾಗಿ ಅಷ್ಟಮದಲ್ಲಿ ಇದ್ದಾನೆ
.ಸಪ್ತಮದಲ್ಲಿ ರಾಹು ಇದ್ದಾನೆ . ನಿಮ್ಮ ದಾರಿ ಗೊಂದಲಮಯವಾಗಿ ಇರುತ್ತದೆ . ನಿಮ್ಮ ವಯಕ್ತಿಕ
ಜೀವನದ ಬಗ್ಗೆ ನೀವು ಯೋಚಿಸಬೇಕಾಗುತ್ತದೆ . ಆರೋಗ್ಯ ಯಾಕೋ ಇತ್ತೀಚಿನ ದಿನಗಳಲ್ಲಿ ಕೈ
ಕೊಡುತ್ತಿದೆ .ಬಿಪಿ ಷುಗರ್ [50+ಆದವರಲ್ಲಿ ]ಲಕ್ಷಣ ಬರಲಿದೆ .ಕೆಲವೊಮ್ಮೆ ಉದ್ವೇಗ ಕಾಡಲಿದೆ .
ಸಂಗಾತಿಯೊಂದಿಗೆ ಘರ್ಷಣೆ ಬೇಡ .ದೇವಿ ಕ್ಷೇತ್ರದಲ್ಲಿ ಅಮ್ಮನವರಿಗೆ ಸೀರೆ ಮಾಂಗಲ್ಯ ಮಲ್ಲಿಗೆ ಅರ್ಪಿಸಿರಿ
.ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥನೆ ಮಾಡಿರಿ.
ತುಲಾ : ಅಷ್ಟಮದಲ್ಲಿ ಶುಕ್ರ,ಗುರು,ರವಿ ಬುಧ ಇರುವುದು ಜೀವನದಲ್ಲಿ ದೈವಾನುಗ್ರಹದ ಕೊರತೆಯ
ಕಾಲವನ್ನು ತೋರಿಸುತ್ತಿದೆ . ಯಾವುದೇ ಮಹತ್ವದ ಕಾರ್ಯವನ್ನು ಕೈಗೊಳ್ಳುವಾಗ ಯೋಚಿಸಬೇಕಾದ
ಕಾಲವಾಗಿದೆ .ನಿಶ್ಯಕ್ತಿ ಭಾಧೆ ಕಾಡಲಿದೆ. ನಿರೀಕ್ಷಿತ ಗುರಿ ತಲುಪುವಲ್ಲಿ ಯಶಸ್ವಿಯಾಗುವುದು ಕಷ್ಟವಾಗಲಿದೆ
.ಪ್ರತಿನಿತ್ಯ ಮೃತ್ಯುಂಜಯ ಜಪದ ಪಾರಾಯಣ ಮಾಡುವುದು ಅಗತ್ಯವಾಗಿದೆ ಹಣ ಕಾಸಿನ ವಿಷಯದಲ್ಲಿ
ಎಚ್ಚರವಿರುವುದು ಅಗತ್ಯವಾಗಿದೆ . ಈಶ್ವರ ದೇವರ ಪಾರಾಯಣ ಮಾಡುವುದು ಅಗತ್ಯವಾಗಿದೆ
.ಬೆಲೆಬಾಳುವ ವಸ್ತುಗಳ ಜಾಗ್ರತೆ ಅಗತ್ಯವಾಗಿದೆ .ವ್ಯಾಪಾರಿಗಳು ಸಾಧಾರಣ ಲಾಭವನ್ನು ಪಡೆಯುವಿರಿ.
ವೃಶ್ಚಿಕ : ಸಪ್ತಮದಲ್ಲಿ ಶುಕ್ರ ,ಗುರು,ರವಿ,ಬುಧ ಇದು ದೈವಾನುಗ್ರಹವನ್ನು ತೋರಿಸುತ್ತಿದೆ ಆದರೆ ಅನ್ಯ
ಮಹಿಳೆಯೊಂದಿಗೆ ಎಚ್ಚರವಾಗಿ ಇರುವ ಅಗತ್ಯವೂ ಇದೆ .ಕುಜ ಷಷ್ಟದಲ್ಲಿ ಇರುವುದು ಆರೋಗ್ಯದ
ಸಮಸ್ಯೆಯನ್ನು ತೋರಿಸುತ್ತದೆಯಾದರೂ ಭೂಮಿಯ ವ್ಯವಹಾರ ಮಾಡುವವರಿಗೆ ಒಳ್ಳೆಯ ಕಾಲ
ಎನ್ನುವುದನ್ನು ಸೂಚಿಸುತ್ತದೆ .ನಿಮ್ಮ ಹಣದ ಸಮಸ್ಯೆ ದೂರವಾಗಲಿದೆ .ನಾಗದೇವರ ಮೂಲಮಂತ್ರ
ಪಾರಾಯಣ ಅಗತ್ಯವಿದೆ . ಮಕ್ಕಳ ಬಗ್ಗೆ ಪೂರ್ತಿ ನಂಬಿಕೆ ಒಳ್ಳೆಯದಲ್ಲ .ಅವರ ಮೊಬೈಲ್ ಬಳಕೆ
ನಿಮ್ಮನಿಯಂತ್ರಣದಲ್ಲಿ ಇರಲಿ .ಪ್ರೀತಿ ಪ್ರೇಮದ ಪ್ರಾಯವಾಗಿದ್ದಲ್ಲಿ ನಿಮ್ಮ ಒಂದು ಕಣ್ಣು ಅವರ
ಮೇಲಿರಲಿ .ವಿಷ್ಣು ಸಹಸ್ರನಾಮ ಪಾರಾಯಣ ಶನಿಯ ದೋಷ ಪ್ರಯುಕ್ತ ಮುಂದುವರಿಸಿರಿ.
ಧನು : ನಿಮ್ಮ ರಾಶ್ಯಾಧಿಪತಿ ,ಸುಖಾಧಿಪತಿ ಗುರು ವೃಷಭ ರಾಶಿಯಲ್ಲಿ ಇರುವುದರಿಂದ ಸುಖ ಸ್ಥಾನದಲ್ಲಿ
ರಾಹು ಇರುವುದರಿಂದ ಕುಲ ದೇವರ ಪ್ರಾರ್ಥನೆ ಅಗತ್ಯವಿದೆ ,ನಾಗ ದೇವರ ಪ್ರಾರ್ಥನೆ ಅಗತ್ಯವಿದೆ
.ವಿರೋಧಿಗಳ ಸಂಖ್ಯೆ ಅಧಿಕ ಗೊಳ್ಳಲಿದೆ .ಅಗತ್ಯವಿಲ್ಲದೆ ಸಿಟ್ಟುಗೊಳ್ಳುವ ಸಂದರ್ಭಗಳು ಬರಲಿವೆ
.ಅಮ್ಮನವರ ಆರೋಗ್ಯದ ಬಗ್ಗೆ ಗಮನವಿರಲಿ .ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ .
ಅನಗತ್ಯವಾದ ವಿಷಯದಲ್ಲಿ ಮೂಗು ತೂರಿಸಿಕೊಂಡು ಹೋಗುವುದು ಬೇಡ .ನೀವು ಕೈಗೊಳ್ಳುವ
ಯಾವುದೇ ವ್ಯವಹಾರ ,ಉದ್ಯೋಗ ನೀವಾಡುವ ಮಾತು ಎಲ್ಲಿಯೂ ಕಾಯಾ –ವಾಚಾ –ಮನಸಾ ಒಂದೇ
ರೀತಿ ಇರುವುದಿಲ್ಲ .ಸ್ಥಿರವಾದ ಮನೋ ಭಾವನೆ ಇರುವುದಿಲ್ಲ.
ಮಕರ : ಪಂಚಮದಲ್ಲಿ ಶುಕ್ರ ,ಗುರು ,ರವಿ,ಬುಧ ಇವರು ಇರುವುದರಿಂದ ಮನಸ್ಸಿಗೆ ನೆಮ್ಮದಿಯ
ವಾತಾವರಣವನ್ನು ಕಾಣುವಿರಿ .ರಾಜಕೀಯದಲ್ಲಿರುವವರಿಗೆ ಸಂತೋಷದ ಸುದ್ಧಿ ಸಿಗಲಿದೆ . ಮಂಗಳ
ಕಾರ್ಯ ನಡೆಯಲಿದೆ .ಮಾತಾಡುವಾಗ ಎಚ್ಚರವಿರಲಿ .ಹಣದ ವೆಚ್ಚ ಮಾಡುವಾಗ ಎಚ್ಚರವಿರಲಿ .ಉನ್ನತ
ವಿದ್ಯಾಭ್ಯಾಸಕ್ಕೆ ಮಕ್ಕಳನ್ನು ಕಳುಹಿಸುವಿರಿ .ಬಿಪಿ ಷುಗರ್ ಇರುವವರು ವೈದ್ಯರನ್ನು ಭೇಟಿಯಾಗುವುದು
ಅವಶ್ಯವಿದೆ . ಭೂಮಿಯ ವ್ಯವಹಾರ ಮಾಡುವವರು ಎಚ್ಚರದಲ್ಲಿ ಇರುವುದು ಒಳ್ಳೆಯದು
.ಸಂಗಾತಿಯೊಂದಿಗೆ ಸಂತೋಷದ ಬದುಕು ನಿಮ್ಮದಾಗಿದೆ .ಉದ್ಯೋಗದಲ್ಲಿ ಕೂಡಾ ಒಳ್ಳೆಯ ಗೌರವ
ಸನ್ಮಾನ ಪಡೆಯುವಿರಿ . ಸಾಡೇ ಸಾತ್ ಶನಿಯ ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ
ಅಗತ್ಯವಿದೆ.
ಕುಂಭ : ನಿಮ್ಮ ಜೀವನದ ಪರಿವರ್ತನೆಯ ಸಮಯ .ಮನೆಯ ಸದಸ್ಯರೆಲ್ಲರೂ ಸಂತೋಷದಿಂದ ಇರುವ
ಸಮಯವಾಗಿದೆ . ಸಾಡೇ ಸಾತ್ ಶನಿಯ ಪ್ರಭಾವ ,ದ್ವಿತೀಯಾದ ರಾಹುವಿನ ಸಮಸ್ಯೆಗೆ ಯಥಾ ಶಕ್ತಿ
ಪರಿಹಾರ ಅಗತ್ಯವಿದೆ . ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಮಾತಿನಲ್ಲಿ
ಹಿಡಿತವಿರಲಿ .ಸಹೋದರನ ಸಹಕಾರ ಸಿಗಲಿದೆ .ಪ್ರತಿಯೊಂದು ಸಂದರ್ಭದಲ್ಲಿ ಸಂಗಾತಿಯ ಸಹಕಾರ
ಸಿಗಲಿದೆ .ರಾಜಕೀಯದಲ್ಲಿ ಇರುವವರಿಗೆ ಹೇಳುವಷ್ಟು ನೆಮ್ಮದಿ ಇರುವುದಿಲ್ಲ. ನಿಮ್ಮಲ್ಲಿರುವ ಹಣ
ಕರ್ಚು ಮಾಡಲಷ್ಟೇ ರಾಜಕೀಯವಿರುತ್ತದೆ . ಸ್ವಂತ ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ಲಾಭ
ಗಳಿಸುವಿರಿ.
ಮೀನ : ನೀವು ನಾಗ ದೇವರ ಮೂಲ ಮಂತ್ರದ ,ದೇವಿಯ ಮೂಲ ಮಂತ್ರದ ಪಾರಾಯಣ ,ವಿಷ್ಣು
ಸಹಸ್ರನಾಮದ ಪಾರಾಯಣ ಮಾಡುವುದು ಅಗತ್ಯವಾಗಿದೆ .ಯಾವುದೇ ಗ್ರಹ ಧನಾತ್ಮಕವಾಗಿ ಪ್ರತಿಕ್ರಿಯೆ
ಕೊಡುತ್ತಿಲ್ಲ. ಹಣದ ವ್ಯವಹಾರದಲ್ಲಿ ಎಚ್ಚರವಿರಲಿ .ವೈದ್ಯಕೀಯ ವಿಮೆ ಮಾಡಿಸಿಕೊಳ್ಳುವ ಅಗತ್ಯವಿದೆ
.ವಿದ್ಯಾರ್ಥಿಗಳು ಓದುವ ಕಡೆಗೆ ತಮ್ಮ ಗಮನವನ್ನು ಕೊಡಲು ಶಕ್ತರಾಗುವುದಿಲ್ಲ. ದೇವಿಯ ಪ್ರಾರ್ಥನೆ
ಅಗತ್ಯವಿದೆ .ಯಾರಿಗೂ ಸಾಲ ಕೊಡುವುದು ಬೇಡ .ಎಚ್ಚರ ವಹಿಸಿದಲ್ಲಿ ಪಾಲುಗಾರಿಕೆ ವ್ಯಾಪಾರದಲ್ಲಿ
ಯಶಸ್ವಿಯಾಗುವಿರಿ .ದಂಪತಿ ನಡುವೆ ವಿರಸ ಬರದಂತೆ ಎಚ್ಚರವಹಿಸಿರಿ .ಹಿರಿಯರಿಗೆ ಕೊಡಬೇಕಾದ ಗೌರವ
ಕೊಡಲೇ ಬೇಕಲ್ಲವೇ .ನಿಮ್ಮಲ್ಲಿ “ಅಹಂ “ಇದ್ದರೆ ಅದರಿಂದ ಹೊರಗೆ ಬನ್ನಿ.
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು . ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು . ವಾಸ್ತು ಸಲಹೆ/ವಿವಾಹ ಹೊಂದಾಣಿಕೆ ಮಾಡಿಕೊಡಲಾಗುವುದು.



































