ವಾರ ಭವಿಷ್ಯ -ಕೆ.ಸುಬ್ರಹ್ಮಣ್ಯ ಆಚಾರ್ಯ
ದಿನಾಂಕ 28.04.2024 ರಿಂದ 04.05.2024 ರ ವರೆಗೆ
ವಿಶೇಷ ದಿನಗಳು :
24..04.2024….ಮೇಷ ರಾಶಿಗೆ ಶುಕ್ರನ ಪ್ರವೇಶ
01.05.2024….ಗುರು ವೃಷಭ ರಾಶಿಗೆ ಪ್ರವೇಶ .
ಮೇಷ : ಶುಭ ದಿನಗಳ ನಿರೀಕ್ಷೆಯಲ್ಲಿ ಇದ್ದೀರಿ . ಪ್ರಸ್ತುತ ಕುಜ ,ರಾಹು,ಬುಧ ವ್ಯಯದಲ್ಲಿ ಇದ್ದಾರೆ
.ಗುರು ಶುಕ್ರ ಬುಧ ಜನ್ಮ ರಾಶಿಯಲ್ಲಿ ಇದ್ದಾರೆ ಆರೋಗ್ಯದ ಕಡೆಗೆ, ಆಹಾರ ವಿಹಾರದ ಕಡೆಗೆ ,ನಿಮ್ಮ
ಗಮನ ಕಡಿಮೆಯಾಗಿದೆ . ನಿಮ್ಮ ಅತಿಯಾದ ಕೋಪ ,ಹಣ ಕಾಸಿನ ವಿಚಾರದಲ್ಲಿ ಕುಟುಂಬದಲ್ಲಿ
ಅಸಮಾಧಾನ ಇರುತ್ತದೆ . ಪತ್ನಿಯ ಅಸಹಕಾರ ನಿಮಗೆ ಬೇಸರ ತರಲಿದೆ . “ಋಣಾನು ಬಂಧು ರೂಪೇಣ
ಪಶು ಪತ್ನಿ ಸುತಾಲಯ : “ಎಲ್ಲವೂ ಋಣಾನು ಸಂಭಂಧ .ಹೊಂದಿಕೊಂಡು ಮುಂದುವರಿಯುವುದೇ
ಜೀವನ, ಪರಿವರ್ತನೆ ನವಗ್ರಹರ ನಿಯಮವಾಗಿದೆ .ಗುರು ತನ್ನ ಶತ್ರುವಾದ ಶುಕ್ರನ ಮನೆಗೆ ಬರುತ್ತಿದ್ದಾನೆ .
ಬಂದೇ ಬರುತೈತೆ ಶುಭ ಕಾಲ . ಧೈರ್ಯವಾಗಿರಿ .
ವೃಷಭ :ಹಣದ ಹರಿವು ಉತ್ತಮವಾಗಿರುವ ಅತ್ಯುತ್ತಮವಾದ ಕಾಲ .ಅತಿಯಾದ ಆತ್ಮ ವಿಶ್ವಾಸ ನಿಮ್ಮದು
. ಭೂಮಿ ಖರೀಧಿ ಮಾಡುವಿರಿ .ಭೂಮಿಯ ವ್ಯವಹಾರದಿಂದ ಹಣ ಸಂಪಾದನೆ ಮಾಡುವಿರಿ . ಪ್ರೀತಿ
ವಿಶ್ವಾಸದ ಮಾತಿನಿಂದ ಜನರ ಮನಸ್ಸನ್ನು ಗೆಲ್ಲುವಿರಿ . ನಿಮ್ಮಲ್ಲಿ ಇನ್ನೂ ಉಳಿದು ಕೊಂಡಿರುವ ಕೆಲವರ
ಮೇಲಿನ ದ್ವೇಷ ಮನೋ ಭಾವನೆಯಿಂದ ಹೊರಗೆ ಬನ್ನಿರಿ . ಶುಕ್ರ ನಿಮಗೆ ಅನೇಕ ಆಸೆಗಳನ್ನು
ಹುಟ್ಟಿಸುವವನು. ಹಣವೂ ತಾನಾಗಿ ನಿಮ್ಮಲ್ಲಿ ಬರಲಿದೆ ಆರೋಗ್ಯಕರ ಸ್ಪರ್ಧೆ ನಿಮ್ಮಲ್ಲಿರಲಿ. ನಿಮ್ಮ
ವ್ಯವಹಾರ ,ಉದ್ಯೋಗದಲ್ಲಿ ಕೆಲವೊಂದು ಬದಲಾವಣೆ ಮಾಡುವ ಯೋಚನೆ ನಿಮ್ಮದಾಗಲಿದೆ .
ಪಾಲುಗಾರಿಕೆ ವ್ಯವಹಾರ ಕೆಲವೊಮ್ಮೆ ಸಮಸ್ಯೆಯನ್ನು ತರಲಿದೆ . ಸ್ವಾರಸ್ಯಕರವಾದ ವಿಷಯವೆಂದರೆ
ನಿಮ್ಮ ಸಂಗಾತಿಯವರೇನಿಮ್ಮ ಯಾವುದೇ ವ್ಯವಹಾರದ ಕೇಂದ್ರ ಬಿಂಧು ವಾಗಿರುತ್ತಾರೆ .
ಮಿಥುನ : ನಿಮ್ಮ ಜೀವನದ ಪರಿವರ್ತನೆಯ ಕಾಲ ಸನ್ನಿಹಿತವಾಗಿದೆ .” ಧೈರ್ಯಮ್ ಸರ್ವತ್ರ ಸಾಧನಮ್
“ಗುರು ವ್ಯಯಕ್ಕೆ ತನ್ನ ವೈರಿಯಾದ ಶುಕ್ರನ ಮನೆಗೆ ಬರುತ್ತಿದ್ದಾನೆ .ಅವನು ನಿಮ್ಮ ಸಪ್ತಮದ
ಅಧಿಪತಿಯಾಗಿದ್ದಾನೆ . ಮನಸ್ಸಿನಲ್ಲಿ ನಕಾರಾತ್ಮಕವಾದ ಚಿಂತನೆಗಳು ಬೇಡ .ತಕ್ಷಣ ನಿಮ್ಮ
ಮೂಲಜಾತಕದ ಪರಿಶೀಲನೆ ಮಾಡಿಸಿರಿ . ಗುರುವಿನ ಪಾರಾಯಣ ವಿಷ್ಣು ಸಹಸ್ರನಾಮ ಪಾರಾಯಣ ಅತೀ
ಅಗತ್ಯವಾಗಿದೆ .ತನ್ನವರಿಂದ ಸಹಕಾರದ ಕೊರತೆಯ ಭಾವನೆ ನಿಮಗೆ ಬರಲಿದೆ . ಹಣದ ಅವಶ್ಯಕತೆ ನಿಮಗೆ
ಬರಲಿದೆ . ಮನದ ಬೇಸರ ಕಳೆಯಲು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವಿರಿ .ಸಂಗಾತಿಯ ಆರೋಗ್ಯದ ಬಗ್ಗೆ
ಗಮನವಿರಲಿ.
ಕರ್ಕಾಟಕ :ಉತ್ತಮ ಆರೋಗ್ಯಕ್ಕಾಗಿ ಹಿತವಾದ ,ಮಿತವಾದ ,ಸಮಯಕ್ಕೆ ಸರಿಯಾಗಿ ಒಳ್ಳೆಯ ಆಹಾರ
ಸೇವಿಸಿರಿ . ಶನಿ ಅಷ್ಟಮದಲ್ಲಿ ಇರುವುದು ನಿಮಗೆ ತಿಳಿದೇ ಇದೆ .ಒತ್ತಡಕ್ಕೆ ಒಳಗಾಗದೆ ಹಿತವಾದ ಇತಿ
ಮಿತಿಯಲ್ಲಿ ಮಾತುಗಳು ನಿಮ್ಮದಾಗಲಿ .ಉದ್ಯೋಗ ,ವರಮಾನ ಉತ್ತಮವಾಗಿರುತ್ತದೆ . ಖರ್ಚು
ಸಮಾನವಾಗಿರುತ್ತದೆ .ವಿಷ್ಣು ಸಹಸ್ರನಾಮ ಪಾರಾಯಣ ನಿಮ್ಮಲ್ಲಿದ್ದರೆ ಸಾಕು ,ಯಾವುದಕ್ಕೂ ಹೆದರುವ
ಅಗತ್ಯವಿಲ್ಲ . ಸಮಸ್ಯೆ ಇರುವಲ್ಲಿ ,ವಾದ ವಿವಾದ ಇರುವಲ್ಲಿ ನೀವು ನಿಲ್ಲದಿರಿ ಗುರು ಬರುತ್ತಿರುವುದು
ಲಾಭ ಕ್ಷೇತ್ರಕ್ಕೆ . ಹಿರಿಯರೊಂದಿಗೆ ,ಸಂಗಾತಿಯೊಂದಿಗೆ ಹೊಂದಿಕೊಂಡು ಮುಂದುವರಿಯಿರಿ . ನೀಚ
ಮಹಿಳೆಯರ ಜೊತೆಗೆ ಎಚ್ಚರವಾಗಿರಿ,
ಸಿಂಹ :ಕರ್ಮ ಕ್ಷೇತ್ರಕ್ಕೆ ಗುರು ಪ್ರವೇಶ ಮಾಡುವ ಶುಭ ಗಳಿಗೆ .ಅವನು ಬರುತ್ತಿರುವುದು ಅವನ ಶತ್ರುವಾದ
ಶುಕ್ರನ ಮನೆಗೆ .ಸಂತಾನದ ನಿರೀಕ್ಷೆಯಲ್ಲಿರುವವರು ಎಚ್ಚರದಿಂದಿರಬೇಕು . ಉದ್ಯೋಗದಲ್ಲಿರುವವರಿಗೆ
ಮಹಿಳೆಯಿಂದ ಕಿರಿ ಕಿರಿ ಆರಂಭವಾಗಲಿದೆ . ಅಷ್ಟಮದಲ್ಲಿ ಕುಜ ,ರಾಹು ಬುಧ ಇರುವಾಗ ದಾಂಪತ್ಯದಲ್ಲಿ
ಕಲಹ ಬರದಂತೆ ಎಚ್ಚರ ವಹಿಸಿರಿ .ಕೋಪ ಇತಿ ಮಿತಿಯಲ್ಲಿರಲಿ . . ಗರ್ಭಧಾರಣೆಯಾಗಿದ್ದಲ್ಲಿತೆಗೆಸುವ
ಯೋಚನೆ ಮಾಡಬೇಡಿರಿ . ಸತಿ ಪತಿ ಹೊಂದಿಕೊಂಡು ಮುಂದುವರಿಯಿರಿ .ಆತ್ಮ ಶಕ್ತಿಯನ್ನು ಹೆಚ್ಚಿಸಿ
ಕೊಳ್ಳಿರಿ . ದಾಂಪತ್ಯ ಜೀವನ ಮಣ್ಣಿನ ಮಡಕೆಯಂತೆ , ಕುಜ ಶುಕ್ರ ಚಂದ್ರ ಆರೋಗ್ಯ ಸ್ಥಾನದಲ್ಲಿ
ಇದ್ದಾಗ ಯಾವುದೇ ಸಮಸ್ಯೆ ಇರುವುದಿಲ್ಲ.
ಕನ್ಯಾ : ಜನ್ಮ ರಾಶಿಯಲ್ಲಿ ಕೇತು ,ಸಪ್ತಮದಲ್ಲಿ3 ಗ್ರಹರಾದ ಕುಜ _ರಾಹು ಬುಧ ಇದ್ದಾರೆ ಇವರಲ್ಲಿ
ಕುಜ ರಾಹು ಇವರಿಗೆ ಪರಿಹಾರ ಅಗತ್ಯ .ದಾಂಪತ್ಯದಲ್ಲಿ ಒಡಕನ್ನು ತರುವವರಾಗಿದ್ದಾರೆ .ಅಷ್ಟಮದಲ್ಲಿ
ಗುರು ಮತ್ತು ಶುಕ್ರ ರವಿ ಇದ್ದಾರೆ .ಮೃತ್ಯುಂಜಯ ಜಪ [ಎಳ್ಳೆಣ್ಣೆ ,ಉಪ್ಪು,ಕತ್ತಿ,ಹತ್ತಿ ,ಕುಂಬಳಕಾಯಿ
]ಹತ್ತು ಸಾವಿರ ಸಂಖ್ಯೆಯಲ್ಲಿ ಮಾಡಬೇಕು .ನಂತರದಲ್ಲಿ ದುರ್ಗಾ ಹೋಮದ ಸಹಿತ ಮೃತ್ಯುಂಜಯ
ಶಾಂತಿ ಮಾಡಿಸುವ ಅಗತ್ಯವಿದೆ .ಆರೋಗ್ಯದ ಕಡೆಗೆ ತೀವ್ರ ಗಮನ ಕೊಡಬೇಕಾದುದು ಅಗತ್ಯವಿದೆ .
ದಂಪತಿಗಳು “ದಂ” ಕಳೆದುಕೊಳ್ಳದೆ ಸಮಾಧಾನದಿಂದ ಇರಬೇಕು .councelling ಅಗತ್ಯ ಇದೆಯಾದರೆ
ಮಾಡಿಸಿಕೊಳ್ಳುವುದು ಅಗತ್ಯವಿದೆ . ದಾರಿ ತಪ್ಪಬೇಡಿರಿ.
ತುಲಾ: ಒಂದು ತಾರೀಕಿಗೆ ಗುರು ತನ್ನ ವೈರಿಯಾದ ಶುಕ್ರನ ಮನೆಗೆ ಅಷ್ಟಮಕ್ಕೆ ಪ್ರವೇಶ ಮಾಡುತ್ತಾನೆ
.ಈಗ ಹಲವಾರು ರೀತಿಯಲ್ಲಿ ಹಣದ ಹರಿವನ್ನು ಹರಿಸುತ್ತಾ ಒಂದೇ ಬಾರಿಗೆ ಎಲ್ಲವನ್ನೂ ನಿಲ್ಲಿಸುವ
ಸಾಧ್ಯತೆ .ಈ ಮೊದಲೇ ಅನೇಕ ಬಾರಿ ಎಚ್ಚರಿಸಿದಂತೆ ಮೃತ್ಯುಂಜಯ ಜಪವನ್ನುದಿನಕ್ಕೆ 108 ಬಾರಿ
ಹೇಳಬೇಕು ಸಹೋದರ /ಸಹೋದರಿ ವರ್ಗದವರ ಬೇಸರ ,ಸಂಗಾತಿಗೆ ಅನಾರೋಗ್ಯ ಭಾಧಿಸಲು
ಆರಂಭವಾಗಲಿದೆ . ನಿಮಗೆ ಸಕ್ಕರೆ ಕಾಯಿಲೆ ಇದ್ದಲ್ಲಿ ಸಮಸ್ಯೆ ಆರಂಭವಾಗಲಿದೆ . ನಿಮ್ಮ ಜಾತಕವನ್ನು
ಪರಿಣತ ಜ್ಯೋತಿಷ್ಯರಲ್ಲಿ ಸವಿವರವಾಗಿ ವಿಮರ್ಶೆ ಮಾಡಿಕೊಳ್ಳಿರಿ . ಗಣಪತಿಯ ಮೂಲ ಮಂತ್ರ “ಓಂ ಕ್ಷಿಪ್ರ
ಪ್ರಸಾದಾಯ ನಮ : “II 1008 ಬಾರಿ ಪ್ರತಿನಿತ್ಯ ಹೇಳಿರಿ.
ವೃಶ್ಚಿಕ : ದ್ವಾದಶ ರಾಶಿಗಳಲ್ಲಿ ಈ ಬಾರಿ ಎಲ್ಲಾ ಜ್ಯೋತಿಷ್ಯರ ಗಮನ ಸೆಳೆದ ರಾಶಿಯೇ “ವೃಶ್ಚಿಕ”
ಕಾರಣವೆಂದರೆ ಕುಜ ,ಶುಕ್ರ ರವಿ ಗ್ರಹರ ಮತ್ತು ಇನ್ನು ಸ್ವಲ್ಪವೇ ದಿನದಲ್ಲಿ ಗುರುವಿನ ರಾಶಿಯ
ಬದಲಾವಣೆ ಆಗುವುದೇ ಆಗಿದೆ . ಕಷ್ಟಗಳ ,ಅಪವಾದಗಳ ಸುರಿಮಳೆಯಿಂದ ಪಾರಾಗಿ ಹೊರಬರುವ ಶುಭ
ಕ್ಷಣ ,ರಾಜಕೀಯವಾಗಿ ಯಶಸ್ವಿಯಾಗುವ ಶುಭ ಸಮಯ .ಮಾನ ಸನ್ಮಾನ ,ಪಡೆಯುವ ಕಾಲ ,ಯಾರು
ನಿಮ್ಮನ್ನು ಬೈದುಕೊಂಡು ದೂರ ಮಾಡಿದ್ದರೋ ಅವರೇ ನಿಮ್ಮ ಬಳಿಗೆ ಬಂದು ರಹಸ್ಯ ಮಾತುಕತೆ
ನಡೆಸುವ ಕಾಲವಾಗಿದೆ .29.03.2025 ರ ವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ಮಾತ್ರ
ತಪ್ಪಿಸಬಾರದು . ಇಡೀ ಬಂಧು ಬಳಗ ನಿಮ್ಮನ್ನು ಮೆಚ್ಚುವ ಕಾಲ . ಸಂಪತ್ತಿನ ಹರಿವು ನಿಮ್ಮದಾಗಲಿದೆ
.ಗುರು ತನ್ನ ವೈರಿಯಾದ ಶುಕ್ರನ ಮನೆ ಸಪ್ತಮಕ್ಕೆ ಹೋಗುವುದು ,ಮಹಿಳೆಯರ ಬಗ್ಗೆ ಅಪವಾದಕ್ಕೆ
ಗುರಿಯಾಗದಂತೆ ಎಚ್ಚರವಹಿಸಿರಿ.
ಧನು : ತಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಲಿರುವ ದಿನಗಳು ಬರುತ್ತಿವೆ .ನಿತ್ಯವೂ
ವಿಷ್ಣು ಸಹಸ್ರನಾಮ ಪಾರಾಯಣ ತಪ್ಪದೆ ಮಾಡುತ್ತಾ ಬನ್ನಿರಿ . ನಿಮ್ಮ ರಾಶಿಯಿಂದ ನಾಲ್ಕನೆಯ
ಮನೆಯಲ್ಲಿ ಕುಜ ರಾಹು ಬುಧ ಗ್ರಹರು ಇದ್ದಾರೆ ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಮುನ್ಸೂಚನೆ
ಕೊಡುತ್ತಿದ್ದಾರೆ .ವರ್ಷವಿಡೀ ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ . ಮನಸ್ಸಿಗೆ
ನೆಮ್ಮದಿಯ ಕೊರತೆ ಇರುತ್ತದೆ . ಉದ್ಯೋಗದಲ್ಲಿ ಸಣ್ಣ ಪುಟ್ಟ ಕಿರಿ ಕಿರಿ ಇದ್ದೇ ಇರುತ್ತದೆ . ವೈರಾಗ್ಯ
ವೈಮನಸ್ಸು ಬರದಂತೆ ಧ್ಯಾನ ಪ್ರಾಣಾಯಾಮವನ್ನು ಮಾಡುತ್ತಾ ಬನ್ನಿರಿ . ಮಕ್ಕಳು ಏನಾದರೂ
ವಿರುದ್ಧ ಮಾತಾಡಿದರೆ ಬೇಸರ ಮಾಡಿಕೊಳ್ಳದಿರುವ ಗುಣ ಧರ್ಮವನ್ನು ಬೆಳೆಸಿಕೊಳ್ಳಿರಿ.
ಮಕರ: ಸಾಡೇ ಸಾತ್ ಶನಿಯ ಪ್ರಭಾವವನ್ನು ಕಡಿಮೆಗೊಳಿಸಲು ವಿಷ್ಣು ಸಹಸ್ರನಾಮ ಪಾರಾಯಣವನ್ನು
ಮಾಡುತ್ತಾ ಬರಬೇಕು. ಗುರುವಿನ ವೃಷಭ ರಾಶಿಯ ಪ್ರಯಾಣ ನಿಮ್ಮ ಜೀವನದಲ್ಲಿ ಹಲವಾರು
ನೆಮ್ಮದಿಯ ದಿನಗಳನ್ನು ತರಲಿದ್ದಾನೆ .ರಾಜಕೀಯ ಜೀವನದಲ್ಲಿ ಪರಮೇಶ್ವರ ದೇವರ ಅನುಗ್ರಹಕ್ಕಾಗಿ
ಪ್ರಾರ್ಥಿಸಿರಿ . ಬರುವ ಆದಾಯಕ್ಕೆ ಕೊರತೆ ಇರುವುದಿಲ್ಲ ಭೂಮಿಯ ವ್ಯವಹಾರ ಮಾಡುವವರು
ಯಶಸ್ವಿಯಾಗುವರು ಬಿಂದಾಸ್ ಜೀವನ ನಡೆಸುವರು ಅಮ್ಮನವರ ,ನಿಮ್ಮ ಆರೋಗ್ಯದ ಕಡೆಗೆ ನಿಮ್ಮ
ಗಮನ ಅಗತ್ಯವಿದೆ . ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಎಚ್ಚರವಹಿಸಿರಿ. ಅನಾವಶ್ಯಕ ಮಾತುಕತೆ ವಾದ
ವಿವಾದ ಬೇಡ .ಹೊಸ ವಾಹನ ,ಮನೆ ,ಭೂಮಿ ಖರೀಧಿ ಮಾಡುವಿರಿ ,.ಆದರೆ ಮೋಸ ಹೋಗದಂತೆ
ಎಚ್ಚರವಹಿಸಿರಿ .
ಕುಂಭ :ರವಿ ಮತ್ತು ಶುಕ್ರ ಮೇಷ ರಾಶಿಯಲ್ಲಿರುವುದು ನಿಮಗೆ ಶುಭಕರವಾಗಿದೆ .ಸಾಡೇ ಸಾತ್ ಶನಿಯ
ಪ್ರಭಾವ ನಿಮ್ಮ ಮೇಲೆ ಮುಂದುವರಿಯುತ್ತಿದೆ .ದ್ವಿತೀಯದಲ್ಲಿರುವ ಕುಜ ರಾಹು ಬುಧ ನೀವು ಖರ್ಚು
ಮಾಡುವ ಹಣದ ಬಗ್ಗೆ ,ನೀವಾಡುವ ಮಾತಿನ ಬಗ್ಗೆ ಎಚ್ಚರದಲ್ಲಿ ಇರುವಂತೆ ಸೂಚನೆ ಕೊಡುತ್ತಿದೆ .
ಅಷ್ಟಮದಲ್ಲಿರುವ ಕೇತು ನಿಮ್ಮಲ್ಲಿರುವ ಮಾನಸಿಕ ಒತ್ತಡವನ್ನು ಸೂಚಿಸುತ್ತಿದೆ .ಮನಸ್ಸಿನಲ್ಲಿ
ಅನಾವಶ್ಯಕವಾದ ಯೋಚನೆಗಳು ಇರುತ್ತವೆ.ಮಾಡದ ತಪ್ಪಿಗೆ ಅಪವಾದವೊಂದು ಬಂದು ಮನಸ್ಸಿಗೆ
ಅಂಟಿಕೊಂಡ ನೋವು ಬಿಟ್ಟು ಹೋಗಲು ಕೇಳುತ್ತಿಲ್ಲ . ಸೋಲು –ಗೆಲುವು ಪರಸ್ಪರ ಒಂದರ ನಂತರ
ಮತ್ತೊಂದು ಬರುತ್ತಿದೆ ಇದು ಸ್ವಾಭಾವಿಕವಾಗಿದೆ .
ಮೀನ : ಕುಟುಂಬದ ಸಮಸ್ಯೆಗಳನ್ನು ಬಹಳ ನಾಜೂಕಿನಿಂದ ಪರಿಹರಿಸುವ ಬುದ್ಧಿವಂತಿಕೆ ನಿಮ್ಮಲ್ಲಿದೆ .
ಪ್ರಸ್ತುತ ದೈವಾನುಗ್ರಹ ನಿಮಗಿದೆ ,ಮೇ ಒಂದರಂದು ಗುರು ವೃಷಭ ರಾಶಿಯನ್ನು ಪ್ರವೇಶ
ಮಾಡುತ್ತಿದ್ದಾನೆ ಶುಕ್ರ ರವಿ ಗುರು ಪ್ರಸ್ತುತ ವೃಷಭದಲ್ಲಿ ಇದ್ದಾರೆ .ಎಲ್ಲರ ಜೊತೆಗೆ ಬಹಳ
ಸಭ್ಯತೆಯಿಂದ ವರ್ತಿಸುವ ನೀವು ಪ್ರಸ್ತುತ ಜನ್ಮ ರಾಶಿಯಲ್ಲಿ ಕುಜ ರಾಹು ಬುಧ ಇರುವುದು ಒಮ್ಮೊಮ್ಮೆ
ತಾಳ್ಮೆ ಮೀರಿ ಸಿಟ್ಟು ಬರುವಂತೆ ಮಾಡುತ್ತದೆ . ನೀವು ಮನೆಯಲ್ಲಿ ಎಲ್ಲರನ್ನು ಸುಧಾರಿಸಿಕೊಂಡು
ಹೋದರೂ ಕುಜ ಮತ್ತು ರಾಹು ನಿಮ್ಮನ್ನು ಖಳ ನಾಯಕ /ನಾಯಕಿಯಂತೆ ಬಿಂಬಿಸುತ್ತಾರೆ . ನಿಮ್ಮ
ಸಂಗಾತಿಯನ್ನು ಸುಧಾರಿಸುವುದು ಕೆಲವೊಮ್ಮೆ ಸಮಸ್ಯೆಯಾಗಲಿದೆ ಬುಧ ಕೂಡಾ ಜನ್ಮ ರಾಶಿಯಲ್ಲಿ
ಇರುವುದನ್ನು ಗಮನಿಸಿರಿ .
ನಿಮ್ಮ ಪೂರ್ಣ ಪ್ರಮಾಣದ ಕಂಪ್ಯೂಟರ್ ಜಾತಕವನ್ನು ಮಾಡಿಕೊಡಲಾಗುವುದು .ಜಾತಕವಿಲ್ಲದವರಿಗೆ
ಕವಡೆ ಮೂಲಕ ಪ್ರಸ್ತುತ ವಿಷಯವನ್ನು ತಿಳಿಸಲಾಗುವುದು .ನೀವು ನಡೆಸುವ ಶುಭ ಕೆಲಸಗಳಿಗೆ
ಮುಹೂರ್ತವನ್ನು ತಿಳಿಸಲಾಗುವುದು . ವಿವಾಹ ಹೊಂದಾಣಿಕೆ/ವಾಸ್ತು ಸಲಹೆಯನ್ನು ತಿಳಿಸಲಾಗುವುದು .



































