ವಾರಭವಿಷ್ಯ 29.03.2026 ರಿಂದ 04.04.2026
ವಿಶೇಷ ದಿನಗಳು :02.04.2026: ಮೀನ ರಾಶಿಗೆ ಕುಜನ ಪ್ರವೇಶ, ಪೂರ್ಣಿಮಾ,ಹನುಮ ಜಯಂತಿ
ಮೇಷ : ವ್ಯಯದಲ್ಲಿ ಇರುವ ರವಿ ಮತ್ತು ಶನಿ ಸೂಚಿಸುತ್ತಿರುವಂತೆ ನಿಮ್ಮ ಆರೋಗ್ಯದ ಕಡೆಗೆ ಗಮನವಿರಲಿ, ಉದ್ಯೋಗಿಗಳಿಗೆ ಪದಚ್ಯುತಿ, ವರ್ಗಾವಣೆ ಆಗುವ ಸಾಧ್ಯತೆ ಇರುತ್ತದೆ. ತಮ್ಮ ಹತ್ತಿರದ ಬಂಧುಗಳ ಜೊತೆಗೆ ಹೊಂದಾಣಿಕೆಯಿಂದ ಇರುವುದು ಅಗತ್ಯವಿದೆ.
ವೃಷಭ : ನಿಮ್ಮ ಸಾಮರ್ಥ್ಯ ಸರ್ವತೋಮುಖವಾಗಿ ಪ್ರಕಟವಾಗಲಿದೆ. ಬಹುಮುಖವಾದ ಧನಾಗಮನ ಯೋಗವಿದೆ. ಆರೋಗ್ಯದ ಕಡೆಗೆ ಗಮನವಿರಲಿ, ಹೋಟೆಲ್ ಉದ್ಯಮದವರಿಗೆ ಗ್ಯಾಸ್ ಸಮಸ್ಯೆ ಕಾಡಲಿದ್ದು ವ್ಯಾಪಾರಕ್ಕೆ ತೊಂದರೆಯಾಗಲಿದೆ.
ಮಿಥುನ : ಜಯ ಅಪಜಯದ ಮಿಶ್ರ ಫಲವನ್ನು ಅನುಭವಿಸಲಿದ್ದೀರಿ. ಮುಂದಿನ ದಿನಗಳಲ್ಲಿ ಎಲ್ಲವೂ ಶುಭವಾಗಲಿದೆ. ಉದ್ಯೋಗ ಪ್ರಾಪ್ತಿಯಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ. ಮಾನಸಿಕ ಚಿಂತೆ ಹಲವು ರೀತಿಯ ನೋವುಗಳು ಕಾಡಲಿವೆ.
ಕರ್ಕಾಟಕ : ಪತ್ನಿ ಸುತರ ನಡುವೆ ಚಿಂತೆ ಬರುವ ಸಮಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಕೆಲವೊಂದು ಶುಭ ಸಮಾರಂಭಗಳು ನಡೆಯಲಿವೆ. ಅನ್ಯ ಜಾತಿಯ/ಅನ್ಯ ಧರ್ಮದ ಪ್ರೇಮ ಪ್ರಸಂಗ ನಡೆಯುವ ಸಾಧ್ಯತೆ ಇರುತ್ತದೆ.
ಸಿಂಹ : ಕೊಟ್ಟ ಹಣ ತಿರುಗಿ ಬರುವುದು ಕಷ್ಟವಾಗಿದೆ. ಪುರುಷ ಪ್ರಧಾನವಾದ ರಾಶಿಯವರು, ಧೈರ್ಯವಂತಾರಾದ ನೀವು ಶಾರೀರಿಕ ಮಾನಸಿಕ ನೋವಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದು ಅತೀ ಅಗತ್ಯವಾಗಿದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸದ ಅವಕಾಶ ಒದಗಿ ಬರಲಿದೆ.
ಕನ್ಯಾ : ಗುರು ಹಿರಿಯರ ಗೌರವಕ್ಕೆ ಪಾತ್ರರಾಗುವಿರಿ. ಸಪ್ತಮದ ಶನಿ,ದಾಂಪತ್ಯದ ಜೀವನದಲ್ಲಿ ರೋಗ ವಿರಹ ದು:ಖ ಸೂಚಕನಾಗಿದ್ದಾನೆ. ಕರ್ಮ ಭಂಗ ಸ್ಥಾನ ಚ್ಯುತಿ ಬರುವ ಸಾಧ್ಯತೆ ಇರುತ್ತದೆ. ಕೆಲವೊಂದು ಶುಭ ಸಮಾರಂಭಗಳು ನಡೆಯಲಿವೆ.
ತುಲಾ : ಮುಂದಿನ ದಿನಗಳಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಇರುತ್ತದೆ. ಕೆಲವೊಂದು ಶುಭ ಮಂಗಳ ಕೆಲಸಗಳು ನಡೆಯಲಿರುವ ಸಮಯವಾಗಿದೆ. ಪತ್ನಿಯ ಆರೋಗ್ಯದ ಬಗ್ಗೆ ಎಚ್ಚರವಿರಲಿ, ಗುರುಹಿರಿಯರ ಸಿಟ್ಟಿಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.
ವೃಶ್ಚಿಕ : ಮಾತು ಕೇಳದ ಮಗನೇ ಶತ್ರುವಾಗುವನು. ಮೌನವೇ ಎಲ್ಲದಕ್ಕೂ ಪರಿಹಾರವಾಗಲಿದೆ. ಧಾರ್ಮಿಕ ಸಾಮಾಜಿಕ ರಾಜಕೀಯ ಮುಖಂಡರಿಗೆ ಹಿನ್ನೆಡೆಯಾಗುವ ಸಾಧ್ಯತೆ ಇರುತ್ತದೆ. ಹನುಮಂತನ ಆರಾಧನೆ ಅಗತ್ಯವಿದೆ.
ಧನು : ಅನಗತ್ಯ ವಾದ ವಿವಾದಗಳಿಗೆ ಬಲಿಯಾಗಬೇಡಿರಿ, ಪ್ರೇಮ ಪ್ರಕರಣ ವಿವಾಹದಲ್ಲಿ ಸಮಾಪ್ತಿಯಾಗಲಿದೆ. ಜೂನ್ 2 ರ ವರೆಗೆ ಗುರುವಿನ ಅನುಗ್ರಹವಿರುತ್ತದೆ, ನಂತರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಅಗತ್ಯವಿದೆ. ಧನ್ವಂತರಿ ಮಂತ್ರ ಪಾರಾಯಣ ಅಗತ್ಯವಿದೆ.
ಮಕರ : ಜೂನ್ 2 ರ ವರೆಗೆ ಎಲ್ಲವೂ ಪ್ರತಿಕೂಲ ಪರಿಸ್ಥಿತಿ ಇರುತ್ತದೆ. ನಂತರದಲ್ಲಿ ಗುರುವಿನ ಅನುಗ್ರಹ ದೊರೆತು ಎಲ್ಲವೂ ಶುಭದಾಯಕವಾಗಲಿದೆ. ಅನೇಕ ಮೂಲಗಳಿಂದ ಆದಾಯ ಬರುವ ಅವಕಾಶಗಳಿವೆ. ವಿದೇಶ ಪ್ರಯಾಣ ಯೋಗ್ಯವಿರುತ್ತದೆ.
ಕುಂಭ : ಕಷ್ಟ ನಷ್ಟಗಳನ್ನೇ ಸೂಚಿಸುವ ರಾಹು ಶನಿ ಮಂಗಳ ಸೂಚನೆಯನ್ನು ನೀಡುತ್ತಿರುವ ಗುರು,ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಜೂನ್ 2 ರ ನಂತರ ವಿಷ್ಣು ಸಹಸ್ರನಾಮ ಪಾರಾಯಣದ ಮೂಲಕ ದೋಷವನ್ನು ಪರಿಹರಿಸಿಕೊಳ್ಳಬೇಕಾಗಿದೆ. ರಾಜಕೀಯದಿಂದ ದೂರವಿದ್ದರೆ ಒಳ್ಳೆಯದು.
ಮೀನ: ಬಹು ವಿಧದ ಯಶಸ್ಸನ್ನು ಪಡೆಯಲಿದ್ದೀರಿ, ಜೂನ್ 2 ರ ವರೆಗೆ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಡೇ ಸಾತ್ ಶನಿಯ ಪ್ರಭಾವಿರುವುದನ್ನು ನೀವು ಗಮನಿಸಬೇಕು. ಪ್ರಧಾನ ಜವಾಬ್ದಾರಿ ನಿಮಗೆ ಒಳ್ಳೆಯದಲ್ಲ.
ಜಾತಕ, ವಾಸ್ತು ವಿವಾಹ ಹೊಂದಾಣಿಕೆ, ಶುಭ ಮುಹೂರ್ತ, ಕವಡೆ ಪ್ರಶ್ನೆ ಸಲಹೆಗಳಿಗೆ ಸಂಪರ್ಕಿಸಿರಿ.



































