[t4b-ticker]

ವಾರಭವಿಷ್ಯ ದಿನಾಂಕ 07.06.2026 ರಿಂದ 13.06.2026ರ ತನಕ

Picture of RB NEWS

RB NEWS

Bureau Report

ವಿಶೇಷ ದಿನಗಳು :08.06.2026…. ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ

ವೃಷಭ :ದೈವಾನುಗ್ರಹದ ಕೊರತೆ ನಿಮ್ಮ ಗಮನಕ್ಕೆ ಬರಲಿದೆ. ಬರುತ್ತಿರುವ ಆದಾಯಕ್ಕೆ ಯಾವುದೇ ಕೊರತೆ ಇರಲಾರದು. ಕಾರ್ಯದೊತ್ತಡದಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲುವಿಕೆ ಇರಲಿದೆ. ಸಣ್ಣ ಸಣ್ಣ ವಿಷಯಗಳಿಗೂ ತಾಳ್ಮೆ ಕೆ ಡಿಸಿಕೊಳ್ಳುವಿರಿ.ವಿದ್ಯಾರ್ಥಿಗಳು ಓದುವ ಕಡೆಗೆ ಗಮನ ಹರಿಸಿರಿ.

ಮಿಥುನ :ದ್ವಿತೀಯಾದಲ್ಲಿ ಬಂದಿರುವ ಗುರು, ಅವನ ಜೊತೆಗಿರುವ ಶುಕ್ರ,ಈವರೆಗೆ ನಿಮ್ಮಲ್ಲಿದ್ದ ಸಮಸ್ಯೆಗಳನ್ನು ಪರಿಹರಿಸಿಕೊಡಲಿದ್ದಾರೆ. ನಿಮ್ಮ ಮುಂದಿನ ದಿನಗಳು ಉತ್ತಮವಾಗಿರುತ್ತದೆ. ಆರ್ಥಿಕ ವ್ಯವಹಾರದಲ್ಲಿ ಎಚ್ಚರವಿರಲಿ. ಇನ್ನಷ್ಟು ಗೆಳೆಯರು ಜೊತೆ ಸೇರಲಿದ್ದಾರೆ.

ಕರ್ಕಾಟಕ : ಗುರು ರಾಹು ವೈರಿಗಳಾಗಿರುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ವೃತ್ತಿರಂಗದಲ್ಲಿ ಯಾವುದೇ ಯೋಚನೆಗಳು ನಿಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹಿರಿಯರ ಅನಾರೋಗ್ಯದ ಬಗ್ಗೆ ಎಚ್ಚರವಹಿಸಿರಿ. ಅತಿಯಾದ ವಿಶ್ವಾಸ ಒಳ್ಳೆಯದಲ್ಲ, ಸಾಂಸಾರಿಕವಾಗಿ ಎಲ್ಲರೊಂದಿಗೆ ಬೆರೆಯಲು ಪ್ರಯತ್ನಿಸಿರಿ.

ಸಿಂಹ : ಗುರುವಿನ ಅನುಗ್ರಹದ ಕೊರತೆಯಿರುವ ಕಾರಣ, ಮಾನಸಿಕ ಖಿನ್ನತೆಗೆ ಒಳಗಾಗುವಿರಿ, ಖರ್ಚು ಇತಿಮಿತಿಯಲ್ಲಿರಲಿ. ಹಿರಿಯರಿಗೆ ಗೌರವ ಕೊಡುವುದನ್ನು ಮರೆಯಬೇಡಿರಿ. ಸಹೋದರನ ಬೇಸರಕ್ಕೆ ಕಾರಣರಾಗುವಿರಿ. ರಕ್ತದೊತ್ತಡ ಬಾರದಂತೆ ಎಚ್ಚರವಹಿಸಿರಿ, ರಾಜಕೀಯ ಗಣ್ಯರು ಎಚ್ಚರವಹಿಸಿರಿ.

ಕನ್ಯಾ : ಗುರುವಿನ ಅನುಗ್ರಹ ಉತ್ತಮವಾಗಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಿರಿ. ನಿಮ್ಮ ಆರೋಗ್ಯದ ಕಡೆಗೆ ಗಮನ ಕೊಡುವುದು ಅಗತ್ಯವಿದೆ. ಶನಿ ಕುಜರ ಪ್ರಾರ್ಥನೆ ಅಗತ್ಯವಿದೆ. ಬರುವ ಆದಾಯದಲ್ಲಿ ಗಣನೀಯವಾಗಿ ಅಭಿವೃದ್ಧಿಯಾಗಲಿದೆ.

ತುಲಾ : ಈ ವರೆಗೆ ನಿಮಗಿದ್ದ ಗುರುವಿನ ಅನುಗ್ರಹ ಈಗಿರುವುದಿಲ್ಲ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಭಾವನೆಗಳಿಗೆ ನಿರಾಶೆಯಾಗುವ ಕಾಲವಾಗಿದೆ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಂದ ಅವಮಾನವಾಗುವ ಸನ್ನಿವೇಶವಿರುತ್ತದೆ. ರಾಜಕೀಯ ವರ್ಗದವರು ತಮ್ಮನ್ನು ತಾವೇ ವಿಮರ್ಶಿಸಿಕೊಳ್ಳುವುದು ಅಗತ್ಯವಿದೆ.

ವೃಶ್ಚಿಕ : ಭಾಗ್ಯದಲ್ಲಿ ಗುರು ಶುಕ್ರ ಜೊತೆಗಿರುವುದು ನಿಮ್ಮ ಭಾಗೋದಯದ ಕಾಲವಾಗಿದೆ. ಮಕ್ಕಳ ವೈವಾಹಿಕ ಸಂಬಂಧ ವಿಚಾರದಲ್ಲಿ ಮಾತುಕತೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ರಾಹು ಮತ್ತು ಶನಿಯರ ಬಗ್ಗೆ ಪ್ರಾರ್ಥನೆ ನಿರಂತರವಾಗಿ ಸಾಗಲಿ.

ಧನು : ಶನಿ ಮತ್ತು ಗುರುವಿನ ಪರಿಹಾರಕ್ಕಾಗಿ ಪ್ರಾರ್ಥನೆ ಅಗತ್ಯವಿದೆ. ನಿಮ್ಮ ಉದಾಸೀನತೆಯ ವಿಳಂಬ ನೀತಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಲಿದೆ. ಆರೋಗ್ಯದ ವಿಷಯದಲ್ಲಿ ಬಹಳ ಎಚ್ಚರವಹಿಸುವುದು ಅಗತ್ಯವಿದೆ. ಮಕ್ಕಳು ಹೇಳಿದಂತೆ ನಡೆಯುವುದು ಅಗತ್ಯವಿದೆ.

ಮಕರ : ಗುರುವಿನ ಅನುಗ್ರಹ ನಿಮಗಿರುವುದು ನಿಮ್ಮ ಮನಸ್ಸಿಗೆ ನೆಮ್ಮದಿಯನ್ನು ತರಲಿದೆ. ಸುಖ ಭಾವದಲ್ಲಿರುವ ಕುಜನಿಗೆ ಪರಿಹಾರ ಅಗತ್ಯವಿದೆ. ರಾಜಕೀಯ ಗಣ್ಯರು ಮಿಂಚುವ ಸಮಯವಾಗಿದೆ. ಆದಾಯದಲ್ಲಿ ಬಹುವಿಧವಾಗಿ ಹೆಚ್ಚಾಗಲಿದೆ. ಮನಸ್ಸಿನ ಒತ್ತಡ ಹೆಚ್ಚಾಗದಂತೆ ಗಮನ ಕೊಡುವಂತೆ ಕೇತು ಎಚ್ಚರಿಸುತ್ತಿದ್ದಾನೆ.

ಕುಂಭ :ಗುರುವಿನ ಅನುಗ್ರಹದಿಂದ ವಂಚಿತರಾಗಿರುವ ನೀವು ಸಾಡೇ ಸಾತ್ ಶನಿಯ ಕಿರಿಕಿರಿಯೂ ಇರುವುದರಿಂದ ಆರ್ಥಿಕವಾಗಿ ನಷ್ಟವನ್ನು ಅನುಭವಿಸಲಿದ್ದೀರಿ. ಯಾವುದೇ ಹೊಸ ವ್ಯವಹಾರದಲ್ಲಿ ಹಣತೊಡಗಿಸುವಾಗ ಎಚ್ಚರವಿರಲಿ, ಸ್ನೇಹಿತರೊಂದಿಗೆ ಜಗಳಕ್ಕೂ ಕಾರಣವಾಗಬಹುದು. ನ್ಯಾಯಾಲಯದಲ್ಲಿರುವ ಹಳೆಯ ಕೇಸೊಂಡು ಮುನ್ನೆಡೆಗೆ ಬರಲಿದೆ.

ಮೀನಾ : ಗುರು ಪಂಚಮದಲ್ಲಿ ಬಂದಿರುವುದರಿಂದ ಕೆಲವೊಂದು ಉತ್ತಮ ಅವಕಾಶಗಳು ಗೋಚರಕ್ಕೆ ಬರಲಿವೆ. ನಿಮ್ಮ ಸಾಮರ್ಥ್ಯದ ಬಗ್ಗೆ ಹೆಚ್ಚಿನ ವಿಶ್ವಾಸವಿರಲಿ. ಮೇಲಧಿಕಾರಿಗಳ ಮೆಚ್ಚುಗೆ ಸಿಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು ಸೂಕ್ತ ಗೌರವ ಸಿಗಲಿದೆ. ಮಕ್ಕಳ ಬಗ್ಗೆ ಹೆಮ್ಮೆ ಪಡುವಿರಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top