ಲೈಂಗಿಕ ಆರೋಪ: ಸಂಸದ ಪ್ರಜ್ವಲ್ ರೇವಣ್ಣ ಜೆ ಡಿ ಎಸ್ ಪಕ್ಷದಿಂದ ಅಮಾನತು

Picture of RB NEWS

RB NEWS

Bureau Report

ಬೆಂಗಳೂರು : ಲೈಂಗಿಕ ಆರೋಪಗಳ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ, ಪ್ರಜ್ವಲ್‌ ಅಮಾನತಿಗೆ ನಿನ್ನೆಯೇ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು.

ಪೆನ್‍ಡ್ರೈವ್ ಸುಳಿಯಲ್ಲಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಸನ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಆತ ಮನುಷ್ಯನಲ್ಲ, ಮನುಷ್ಯ ಕುಲದಲ್ಲಿ ಹುಟ್ಟಿಲ್ಲ. ದೇವೇಗೌಡರ ಮೊಮ್ಮಗ ಅಂತ ಬಿಡಬಾರದು. ಈ ಕೂಡಲೇ ಪ್ರಜ್ವಲ್ ಬಂಧಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣಲೈಂಗಿಕ ದೌರ್ಜನ್ಯ ಪ್ರಕರಣವನ್ನು ಈಗಾಗಗಲೇ ಎಸ್‍ಐಟಿ ತನಿಖೆಗೆ ಮುಂದಾಗಿದೆ. ಎಸ್‍ಐಟಿ ಮುಖ್ಯಸ್ಥ ಬಿ.ಕೆ ಸಿಂಗ್ ನೇತೃತ್ವದ ತಂಡ ತನಿಖೆ ಶುರು ಮಾಡಲಿದ್ದು, ಹೊಳೆ ನರಸಿಪುರದಲ್ಲಿ ದಾಖಲಾಗಿರುವ ಎಫ್ ಐಆರ್ ಅಧಾರದ ಮೇಲೆ ತನಿಖೆ ನಡೆಸಲಿದೆ. ಈ ಮಧ್ಯೆ ಎಸ್‍ಐಟಿ ತನಿಖೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಎಸ್ಕೇಪ್ ಆಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top