ರೂ.50 ಲಕ್ಷ ದರೋಡೆ: ತಿರುಟ್ ತಂಡದ ಕೃತ್ಯ?!
ಕಾಸರಗೋಡು : ಮಾಚ್೯ 27 ರಂದು ಉಪ್ಪಳದ ಖಾಸಗಿ ಬ್ಯಾಂಕ್‌ನ ಎಟಿಎಂಗೆ ತುಂಬಿಸಲೆಂದು ಬಂದ ವಾಹನದಿಂದ 50 ಲಕ್ಷ ರೂ. ಹಣ ದರೋಡೆ ಪ್ರಕರಣದ ತನಿಖೆಯನ್ನು ಮಂಜೇಶ್ವರ ಪೊಲೀಸರು ವಿವಿಧ ಆಯಾಮಗಳಲ್ಲಿ ನಡೆಸಿದ್ದಾರೆ. ತಮಿಳುನಾಡಿನ ತಿರುಟ್ ತಂಡದ ಕೃತ್ಯ ಅಗಿರಬೇಕೆಂದು ಅಂದಾಜಿಸಿ ತನಿಖೆಯ ಜಾಡನ್ನು ವಿಸ್ತರಿದಿದ್ದಾರೆ.

ತಮಿಳುನಾಡಿನ ಕುಖ್ಯಾತಿ ಪಡೆದಿರುವ ತಿರುಟ್ ತಂಡದಲ್ಲಿ ಸುಮಾರು 30 ಮಂದಿ ಒಳಗೊಂಡಿದ್ದು, ಕಳವು, ದರೋಡೆ, ಸ್ಪಿರಿಟ್ ಸಾಗಾಟ ದಂಧೆಯಲ್ಲಿ ತಿರುಟ್ ತಂಡದ ಸಕ್ರಿಯಾ ಗೊಂಡಿದ್ದು, ತಮಿಳುನಾಡಿದ ಪೊಲೀಸರ ನಿದ್ದೆಗೆಡಿಸಿದೆ. ಈ ತಂಡವು ನೆರೆರಾಜ್ಯಗಳಲ್ಲಿ ಕದಂಬಬಾಹುಗಳನ್ನು ಚಾಚಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆ.
ಒಂದೇ ಸ್ಥಳದಲ್ಲಿ ನೆಲೆಯೂರದೇ ಅಲೆಮಾರಿಗಳಂತೆ ಇರುವ ತಿರುಟ್ ತಂಡದ ಸದಸ್ಯರು ಅಪರಾಧ ಎಸಗುವ ಮುನ್ನ ಕೃತ್ಯ ಎಸಗುವ ಜಾಗದ ಸವಿಸ್ತಾರ ಮಾಹಿತಿ ಸಂಗ್ರಹಿಸಿ, ಅಲ್ಲಿದ ಓಡಿಹೋಗಿ ಸುರಕ್ಷಿತವಾಗಿ ಅಡಗುತಾಣಕ್ಕೆ ತಲುವುದಕ್ಕೆ ಯೋಚನೆಯೊಂದಿಗೆ ಯೋಜನೆ ಸಿದ್ಧಪಡಿಸಿಕೊಳ್ಳುತ್ತಾರೆ.

ಕೃತ್ಯ ನಡೆಸಿದ ಬಳಿಕ ತಂಡವು ಆಟೋ ರಿಕ್ಷಾದಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ಈ ಹಿನ್ನೆಲೆ ಕೇರಳ ಪೊಲೀಸರು ಕರ್ನಾಟಕ, ತಮಿಳುನಾಡು ಪೊಲೀಸರ ನೆರವು ಯಾಚಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.






































