ಕಾರ್ಕಳ: ಒಳಿತು ಮಾಡು ಮನುಷ್ಯ. ಇರುವುದು ಮೂರು ದಿವಸ…. ಎಂಬ ಮಾತು ಕೇಳಿಬಂದಾಗ ಅಕ್ಷರಶಃ ನೆನಪಿಗೆ ಬರುವುದೇ ಸ್ಮಶಾನ ಅಥವಾ ರುದ್ರಭೂಮಿಯ ಚಿತ್ರಣ. ರುದ್ರಭೂಮಿಯೊಂದರಲ್ಲಿ ಕಳೆದ ಮೂರು ವರ್ಷಗಳ ಹಿಂದೆ 27 ವಿವಿಧ ಪ್ರಭೇದಗಳ ಗಿಡಗಳನ್ನು ನೆಟ್ಟು ಅವುಗಳೆಲ್ಲವನ್ನು ಪೋಷಿಸಿ ಬಂದಿರುವ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಸದಸ್ಯರು ಸಮಾಜಕ್ಕೆ ಮಾದರಿ ಎನಿಸಿದ್ದಾರೆ.


ರುದ್ರಭೂಮಿ ಪವಿತ್ರವಾಗಿದ್ದು, ಮೋಕ್ಷದ ಹಾದಿಯೂ ಆಗಿದೆ. ರುದ್ರಭೂಮಿಯ ಪಾವಿತ್ರತ್ಯೆ ಕಾಪಾಡುವ ಜೊತೆ ಪರಿಸರ ಜಾಗೃತಿ ಮೂಡಿಸುವ ಸತ್ಕಾರ್ಯಕ್ಕೆ ಮುಂದಾಗಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಸದಸ್ಯರು ಕರಿಯಕಲ್ಲಿನ ರುದ್ರಭೂಮಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ವಿಶ್ವ ಪರಿಸರ ದಿನಾಚರಣೆ ಆಚರಿಸಿದ್ದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ .(ರಿ) ಬೆಂಗಳೂರು ಉಡುಪಿ ಜಿಲ್ಲೆ .ಕಾರ್ಕಳ ತಾಲೂಕು ಘಟಕದಿಂದ ಕರಿಯಕಲ್ಲು ಸಾರ್ವಜನಿಕ ಹಿಂದೂ ರುದ್ರ ಭೂಮಿಯ ಪರಿಸರದಲ್ಲಿ ಹಿಂದೂ ರುದ್ರ ಭೂಮಿ ವ್ಯವಸ್ಥಾಪನ ಸಮಿತಿ ಈ ಸತ್ಕಾರ್ಯದಲ್ಲಿ ಕೈ ಜೋಡಿಸಿದೆ.
ಪರಿಸರ ಅಂದರೆ ಕೇವಲ ಸಸ್ಯ ಸಂಪತ್ತು ಮಾತ್ರ ಹೆಚ್ಚಿಸುದಲ್ಲ. ಬದಲಾಗಿ ಅದರಿಂದ ಪ್ರಾಣಿ, ಪಕ್ಷಿಗಳ ಬದುಕಿಗೂ ಪ್ರಯೋಜನವಾಗಬೇಕು. ಇಂತಹ ದೂರಾದೃಷ್ಠಿ ಇಟ್ಟು ಕೊಂಡು, ಕಳೆದ ಮೂರು ವರ್ಷಗಳ ಹಿಂದೆ ಆಚರಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ 27 ಬಗೆಯ ಗಿಡಗಳನ್ನು ನೆಟ್ಟಿದ್ದು, ಅದರ ಪೋಷಣೆಯ ಅಂಗವಾಗಿ ಗೊಬ್ಬರಗಳನ್ನು ಹಾಕಿ ವಿನೂತನ ಶೈಲಿಯಲ್ಲಿ ಪೋಷಣೆಗೆ ಮುಂದಾದರು. ಹಲಸು. ಹೆಬ್ಬಲಸು. ಭಾದಾಮಿ.ನೇರಳೆಹಣ್ಣು
ಜಾಂಬು.ಹುಣಸೆಹುಳಿ.ಬೀರುಂಡಿ.ಪೇರಳೆಹಣ್ಣು.ರೇಂಜೀರ್.ಮಾವಿನಹಣ್ಣು. ಮೊದಲಾದ ಸಸಿಗಳನ್ನು ನೆಟ್ಟಿದ್ದು ಗಮನಾರ್ಹ.
ಪ್ರಸಕ್ತ ಸಾಲಿನಲ್ಲಿ ಗಿಡಗಳು ಬೆಳೆದು ಮರವಾಗುತ್ತಿದ್ದು, ಅದಕ್ಕೆ ಅಗತ್ಯವಾದ ಗೊಬ್ಬರವನ್ನು ಹಾಕಲಾಗಿದೆ.
ಈ ಸಂದರ್ಭದಲ್ಲಿ.ಕೆ.ಕೆ.ಎಂ.ಪಿ. ಉಡುಪಿಯ ಜಿಲ್ಲಾ ಅಧ್ಯಕ್ಷ ಪ್ರಕಾಶ್ ರಾವ್. ಕಾರ್ಯದರ್ಶಿ. ಸಂತೋಷ್ ರಾವ್ .ತಾಲೂಕು ಘಟಕದ ಅಧ್ಯಕ್ಷ. ಕೆ. ಬಿ.ಕೀರ್ತನ ಕುಮಾರ್..ಕೋಶಾಧಿಕಾರಿ.ಸತೀಶ್ ರಾವ್.ಹರಿಶ್ಚಂದ್ರ ರಾವ್.ಸುರೇಂದ್ರ ರಾವ್.ಹೇಮಂತ್ ರಾವ್.ಸುದೀರ್ ರಾವ್.ಸನತ್ ರಾವ್ ಬೀರೇಶ್. ಲಕ್ಷ್ಮಣ.ಮೊದಲಾದವರು. ಉಪಸ್ಥಿತರಿದ್ದರು..






































