ರಾ.ಹೆ- 169: ಸಾಣೂರಿನಲ್ಲಿ ಗುಡ್ಡ ಕುಸಿತದ ಭೀತಿ!

Picture of RB NEWS

RB NEWS

Bureau Report

ಆ ಬಳಿಕ ಹಲವಾರು ಬಾರಿ ರಾಷ್ಟ್ರೀಯ ಹೆದ್ದಾರಿ ಇಲಾಕಾಧಿಕಾರಿಗಳಿಗೆ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಕಂಪನಿಯವರಿಗೆ ,ಡಿಸಿ ಮತ್ತು ಜನಪ್ರತಿನಿಧಿಗಳಿಗೆ ಆದಷ್ಟು ಶೀಘ್ರ ಗುಡ್ಡಜರಿದ ಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡದಿದ್ದರೆ ಪಕ್ಕದಲ್ಲಿರುವ 11 ಕೆ.ವಿ.ಹೈ ಟೆನ್ಶನ್ ಟವರ್ ಮತ್ತು ಅದರ ಹಿಂಭಾಗದಲ್ಲಿರುವ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಎರಡು ಕುಡಿಯುವ ನೀರಿನ ಟ್ಯಾಂಕ್ ಧರಾಶಾಯಿಯಾಗುವ ಬಹುದೊಡ್ಡ ಅಪಾಯಕಾದಿದೆ ಎಂದು ಸಾರ್ವಜನಿಕರು ತಿಳಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದೀಗ ಹೈ ಟೆನ್ಶನ್ ವಯರ್ ಟವರ್ ಪಕ್ಕದಲ್ಲಿಯೇ ಗುಡ್ಡದ ಮಣ್ಣು ಭಾರಿ ಮಳೆಗೆ ಸಡಿಲಗೊಂಡು ಕುಸಿಯತೊಡಗಿದೆ.ಇನ್ನೆರಡು ದಿನ ನಿರಂತರ ಧಾರಾಕಾರ ಮಳೆ ಸುರಿದರೆ ಗುಡ್ಡದ ಮಣ್ಣು ಸಡಿಲವಾಗಿ ರಸ್ತೆಗೆ ಬಿದ್ದು, ಭಾರಿ ಅಪಾಯ ಸಂಭವಿಸಲಿದೆ.

. ಕಳೆದ ಒಂದು ವರ್ಷದಿಂದ ಈ ಬಗ್ಗೆ ಮಾಧ್ಯಮಗಳಲ್ಲಿ ಸರಣಿಯಾಗಿ ವರದಿಗಳು ಪ್ರಕಟಗೊಳ್ಳುತ್ತಾ ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ನಡೆಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top