ರಾಷ್ಟ್ರೀಯ ಹೆದ್ದಾರಿ 169: ಅಪಾಯಕಾರಿ ವಿನ್ಯಾಸ

Picture of RB NEWS

RB NEWS

Bureau Report

ರಾಷ್ಟ್ರೀಯ ಹೆದ್ದಾರಿ 169: ಅಪಾಯಕಾರಿ ವಿನ್ಯಾಸ

ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯ ಎರಡು ಬದಿಗಳಲ್ಲಿ ಕಾಂಕ್ರೀಟ್ ಡ್ರೈನೇಜ್ ರಸ್ತೆ ಯುದ್ಧಕ್ಕೂ ನಿರ್ಮಿಸಿದ್ದು ಕಾಂಕ್ರೀಟ್ ಕಾಲುವೆಗಳಲ್ಲಿ ಕೆಸರು ಕಸ ಕಡ್ಡಿಗಳು ಸಂಗ್ರಹವಾದರೆ ಸ್ವಚ್ಛಗೊಳಿಸಲು ಅಲ್ಲಲ್ಲಿ ತೆಗೆಯಬಹುದಾದ ಕಾಂಕ್ರೀಟ್ ಪ್ರಿಕಾಸ್ಟ್ ಸ್ಲಾಬನ್ನು ಅಳವಡಿಸಿರುತ್ತಾರೆ.

ಅದನ್ನು ಮೇಲಕ್ಕೆತ್ತಲು ಎರಡು ಕಬ್ಬಿಣದ ಸರಳಿನ ಹುಕ್ಕುಗಳನ್ನು ಅಳವಡಿಸಿದ್ದು ಸಾರ್ವಜನಿಕರು ನಡೆದಾಡುವಾಗ ಗಮನಿಸದೆ ಎಡವಿ ಬಿದ್ದು ಈಗಾಗಲೇ ಹಲವಾರು ಅವಗಡಗಳು ಸಂಭವಿಸಿದೆ.
ಈ ರೀತಿಯ ವಿನ್ಯಾಸವನ್ನು ಬದಲಿಸಿ ಕಬ್ಬಿಣದ ಹುಕ್ಕುಗಳು ಪ್ರೀಕ್ಯಾಸ್ಟ್ ಸ್ಲಾಬಿನ ಮೇಲ್ಭಾಗದಿಂದ ಸ್ವಲ್ಪ ಒಳಗೆ ಇರುವಂತೆ ನೋಡಿಕೊಳ್ಳಬೇಕೆಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮತ್ತು ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ.

ಆದರೂ ಕಳೆದ ಆರು ತಿಂಗಳಿನಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಅದೇ ರೀತಿಯ ವಿನ್ಯಾಸದ ಪ್ರಿಕಾಸ್ಟ್ ಸ್ಲಾಬ್ ಗಳನ್ನು ಅಳವಡಿಸಿಕೊಂಡು ಹೋಗುತ್ತಿದ್ದಾರೆ.

ಸಾರ್ವಜನಿಕರು ನಡೆದಾಡುವಾಗ ಕಾಲಿಗೆ ಸಿಕ್ಕಿ ವಿಶೇಷವಾಗಿ ಮಕ್ಕಳು ಮಹಿಳೆಯರು ನಡೆದಾಡುವಾಗ ಅವರ ಬಟ್ಟೆಗೆ ಸಿಲುಕಿ ಎಡವಿ ಬಿದ್ದು ಈಗಾಗಲೇ ಹಲವಾರು ಜನ ಗಾಯ ಮಾಡಿಕೊಂಡಿರುತ್ತಾರೆ.

ಕೂಡಲೇ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಗುತ್ತಿಗೆದಾರ ಕಂಪನಿ, ವಿನ್ಯಾಸವನ್ನು ಸಾರ್ವಜನಿಕರಿಗೆ ಅಪಾಯಕಾರಿ ಆಗದಂತೆ ಬದಲಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಹೆದ್ದಾರಿ ಭೂಮಾಲಕರ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಪತ್ರಿಕಾ ಮಾಧ್ಯಮದ ಮೂಲಕ ತಿಳಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top