ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ : ಸಾಮಾಜಿಕ ಸತ್ಕಾರ್ಯಕ್ಕೆ ನೆರವಾದ ಖಾಸಗಿ ಸಾರಿಗೆಯ ಮಾಲೀಕ

Picture of RB NEWS

RB NEWS

Bureau Report

ಕಾರ್ಕಳ : ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ನವೋದಯ ಸರ್ಕಲ್ ಬಳಿ ಮಳೆ ನೀರು ಚರಂಡಿಗೆ ಹರಿಯದೆ ರಸ್ತೆಯ ಮೇಲಿಂದ ಹರಿದು ಹೋಗುತ್ತಿದೆ.

ಇದರಿಂದ ವಾಹನ ಚಲಿಸುವುದಕ್ಕೆ ಚಾಲಕರಿಗೆ ಹಾಗೂ ಸವಾರರಿಗೆ ಕಷ್ಟಕರವಾಗಿದೆ. ಕೆಲವೊಂದು ಸಂದರ್ಭದಲ್ಲಿ ರಸ್ತೆ ಮೇಲೆ ಹರಿದು ಹೋಗುವ ಕೆಸರು ನೀರು ಪಾದಚಾರಿಗಳಿಗೆ ಅಭಿಷೇಕವಾಗುತ್ತಿರುವುದು ಸರ್ವೇ ಸಾಮಾನ್ಯ ವಾಗಿದೆ.

ಈ ಎಲ್ಲಾ ಸಮಸ್ಸೆಗಳನ್ನು ಮನಗಂಡಿರುವ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ರವರ ನೇತೃತ್ವದಲ್ಲಿ ಚರಂಡಿಯ ಮಣ್ಣನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದರು.

ಇದೇ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಅಮೀನ್ , ವಸಂತ್ ಎಂ ಜೊತೆಗಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top