ರಾಮಕ್ಷತ್ರಿಯ ಸಮಾಜದ ಕಾಸರಗೋಡು ಜಿಲ್ಲಾಧ್ಯಕ್ಷ ಕಲ್ಲುಗದ್ದೆ ಮನೆತನದ ಕಮಲಾಕ್ಷ ನಿಧನ
ಕಾಸರಗೋಡು : ಕಲ್ಲುಗದ್ದೆ ಮನೆತನದ ಹಾಗೂ ರಾಮಕ್ಷತ್ರಿಯ ಸಮಾಜ ಕಾಸರಗೋಡು ಜಿಲ್ಲಾ ಅಧ್ತಕ್ಷ ಕಮಲಾಕ್ಷ (72) ಹೃದಯಾಘಾತದಿಂದ ರವಿವಾರ ಸಂಜೆ ನಿಧನರಾಗಿದ್ದಾರೆ.
ನೋರ್ತ್ ಮಲಬಾರ್ ಗ್ರಾಮೀಣ ಬೇಂಕಿನ ಮಾಜಿ ರೀಜಿನಲ್ ಮೇನೇಜರ್ ಆಗಿ ನಿವೃತ್ತರಾದ ಬಳಿಕ ಸಾಮಾಜಿಕ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಎಡನೀರು ಗಣೇಶೋತ್ಸವ ಸಹಿತ ಹಿಂದೂ ಧಾರ್ಮಿಕ ಚಟುವಟಿಕೆಗಳ ಮುಂಚೂಣಿ ಕಾರ್ಯಕರ್ತರಾಗಿದ್ದರು. ಎಡನೀರು ಮಠದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಸಮಾಜಿಕವಾಗಿ ಸಕ್ರಿಯರಿದ್ದರು.
ಮೃತರು ಪತ್ನಿ ಸುಗಂಧಿ, ಮಕ್ಕಳಾದ ಚಂದ್ರಶೇಖರ, ರಾಜಲಕ್ಷ್ಮಿ ಎಂಬವರನ್ನು ಮತ್ತು ಅಪಾರ ಬಂಧುವರ್ಗ, ಅಭಿಮಾನಿಗಳನ್ನು ಅಗಲಿದ್ದಾರೆ.

































