ರಸ್ತೆ ಅಪಘಾತದಲ್ಲಿ ಅಂಬುಲೆನ್ಸ್ ಪಲ್ಟಿ

Picture of RB NEWS

RB NEWS

Bureau Report

ಕುಂಬಳೆ: ಉಪ್ಪಳ ಗೇಟ್ ಬಳಿ ಮಂಗಳವಾರ ಸಂಜೆ ಸಂಬವಿಸಿದ ಸರಣಿ ಅಪಘಾತದಲ್ಲಿ ಆಂಬುಲೆನ್ಸ್ ನಿಂದ ಹೊರಗೆ ಎಸೆಯಲ್ಪಟ್ಟ , ಕಣ್ಣೂರು ವಾರಂ ನಿವಾಸಿ ಮಹಿಳೆ ಷಾಹಿನ(49) ಮೃತಪಟ್ಟಿದ್ದಾರೆ.

ಇವರ ಜತೆಗಿದ್ದ ನಾಲ್ವರು ಸಹ ಪ್ರಯಾಣಿಕರು ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಉಪ್ಪಳ ಗೇಟ್ ಬಳಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಮಹಿಳೆ ಷಾಹಿನ ಅವರ ಪುತ್ರಿ ರಿಯ(9) ಎಂಬಾಕೆಯ ಅಸೌಖ್ಯ ನಿಮಿತ್ತ ತುರ್ತು ಚಿಕಿತ್ಸೆಗಾಗಿ ಅವರು ಆಂಬುಲೆನ್ಸ ನಲ್ಲಿ ಮಂಗಳೂರು ತೆರಳುತ್ತಿದ್ದರು.

ಮಂಗಳವಾರ ಸಂಜೆ ಉಪ್ಪಳ ಗೇಟಿನಲ್ಲಿ ಕಾರುಗಳು ಪರಸ್ಪರ ಢಿಕ್ಕಿಯಾಗಿತ್ತು.
ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರೊಂದರ ಹಿಂದೆ ಮತ್ತೊಂದು ಕಾರು ಬಡಿದಾಗ ಅದರ ಬೆನ್ನಲ್ಲೇ ಮಂಗಳೂರಿಗೆ ತೆರಳುತ್ತಿದ್ದ ಆಂಬುಲೆನ್ಸ್ ಕೂಡಾ ಕಾರಿಗೆ ಬಡಿದು ಫಲ್ಟಿಯಾಗಿತ್ತು. ಈ ವೇಳೆ ಮಹಿಳೆ ಆಂಬುಲೆನ್ಸ್ ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದರು.
ಕೂಡಲೇ ಗಾಯಾಳುಗಳೆಲ್ಲರನ್ನು ಮಂಗಳೂರಿಗೆ ಕೊಂಡೊಯ್ಯಲಾಯಿತಾದರೂ ರಾತ್ರಿ ವೇಳೆ ಒಬ್ಬಾಕೆಯ ಮರಣ ಸಂಭವಿಸಿತು.

ಅಪಘಾತದಲ್ಲಿ ಮೃತ ಮಹಿಳೆ ಶಾಹಿನ ಳ ಪುತ್ರಿ ರಿಯ ಫಾತಿಮ, ಸಹೋದರಿ ಷಜಿನ(45), ಆಸೀವ್(22) ಚಾಲಕ ಅಕ್ರಂ ಎಂಬಿವರು ಗಾಯಗೊಂಡಿದ್ದಾರೆ.
ಅಪಘಾತಕ್ಕೀಡಾದ ಆಂಬುಲೆನ್ಸ್ ಸುನ್ನಿ ಯುವಜನ ಸಂಘದ ಸಾಂತ್ವನಂ ಚಾರಿಟೇಬಲ್ ಟ್ರಸ್ಟ್ ಗೆ ಸೇರಿದ ವಾಹನವಾಗಿದೆ.

ಮುಂಗಾರು ಪೂರ್ವದ ವಾಯುಭಾರ ಒತ್ತಡದ ಮಳೆಗೆ ನೂತನ ಹೆದ್ದಾರಿಯಲ್ಲಿ ಒಂದು ವಾಹನದ ಹಿಂದೆ ಆಂಬುಲೆನ್ಸ್ ಸಹಿತ ನಾಲ್ಕು ವಾಹನ ಬಡಿದು, ಸ್ಥಳದಲ್ಲೇ ಆಂಬುಲೆನ್ಸ್ ಮಗುಚಿ ದುರಂತ ಸಂಭವಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top