ಯಾಂತ್ರಿಕ ಬದುಕಿನಲ್ಲಿ ಪುಸ್ತಕಗಳಿಗೆ ಮಹತ್ವ ಸ್ಥಾನ –ಸಾಹಿತಿ ಹಾಗೂ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ( ಜೋಗಿ)
ಕಾರ್ಕಳ : ಯಾಂತ್ರಿಕ ಬದುಕಿನಲ್ಲಿ ಪುಸ್ತಕಗಳು ಬೆಳಕಾಗಿ ಬರುತ್ತವೆ ಎಂದು ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ( ಜೋಗಿ) ಹೇಳಿದರು.
ಕಾರ್ಕಳ ತಾಲೂಕಿನ ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಪುಸ್ತಕ ಮನೆ ಪ್ರಕಾಶನದ ವಿವಿಧ ಪುಸ್ತಕಗಳನ್ನು ಅನಾವರಣ ಗೊಳಿಸಿ ಮಾತನಾಡಿದರು.

ಶಿಕ್ಷಣ ಎನ್ನುವುದು ಸ್ವಾವಲಂಬಿ ಬದುಕಿಗೆ ಬುನಾದಿಯಾದರೆ, ಸಾಹಿತ್ಯ ವೆನ್ನುವುದು ಪರಿಪೂರ್ಣ ಮನುಷ್ಯನನ್ನಾಗಿ ರೂಪಿಸುತ್ತದೆ. ಪುಸ್ತಕಗಳಿಂದ ಪರಿಪೂರ್ಣ ಜೀವನದ ಪಥವನ್ನು ಬದಲಿಸಲು ಹಾಗೂ ಭಾವ ಜಗತ್ತನ್ನು ವಿಸ್ತರಿಸಲು ಸಾದ್ಯವಿದೆ. ಹಳೆಯ ಕಾಲದಲ್ಲಿ ಅನ್ನದ ಹಸಿವಿತ್ತು. ನಂತರ ಸಮಾನತೆ ಬಳಿಕ ಜ್ಞಾನದ ಹಸಿವು ಅರಂಭವಾಯಿತು. ಆದರೆ ಇಂದಿನ ಕಾಲದಲ್ಲಿ ತಂತ್ರಜ್ಞಾನದ ಕೊರತೆಯು ಯುವ ಸಮುದಾಯವನ್ನು ಕಾಡುತ್ತಿದೆ. ಇಂದಿನ ಕಾಲದಲ್ಲಿ ಪುಸ್ತಕ ರೂಪದಲ್ಲನ್ನದೆ ತಂತ್ರಜ್ಞಾನಕ್ಕೆ ಹೊಂದಿಕೊಂಡು ಓದುಗರ ಸಂಖ್ಯೆ ಹೆಚ್ಚಿಸಿದೆ. ಲೇಖಕನ ವ್ಯಕ್ತಿಯ ಮನಸ್ಸಿನ ತೊಳಲಾಟಗಳು ಪುಸ್ತಕದಲ್ಳಿರುತ್ತದೆ. ಪುಸ್ತಕ ಓದಿನಲ್ಲಿ ಹುಟ್ಟು ವ ಅನಂದ ವಿಪರೀತ ವಾಗಿದೆ. . ಪರಿಪಕ್ವವಾದ ಸಾಹಿತ್ಯ ವೆನ್ನುವುದು ಲೇಖಕರಿಗೆ ಸಿಗುತ್ತದೆ ಎಂದರು.

ಪಠ್ಯ ಪುಸ್ತಕದ ಜೊತೆಗೆ ಸಾಹಿತ್ಯದ ಓದು ನೀಡುವ ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಿಗೆ ಧನ್ಯವಾದ ವಿತ್ತರು .
ಕಾರ್ಕಳದ ಸಾಹಿತಿ ಪ್ರೊ. ಎಂ.ರಾಮಚಂದ್ರ ಅವರನ್ನು ನೆನಪಿಸಿದರು. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಅಸಕ್ತಿ ಇರಬೇಕು ಎಂದು ಹುರಿದುಂಬಿಸಿದರು.
ಶಾಸಕ ಸುನಿಲ್ ಕುಮಾರ್ ಮಾತನಾಡಿ, ಪುಸ್ತಕಮನೆಯ ಪರಿಕಲ್ಪನೆ ಕ್ರಿಯೆಟಿವ್ ಶಿಕ್ಷಣದೊಂದಿಗೆ ಸಾಹಿತ್ಯ ಬೆಳವಣಿಗೆಗೆ ಪ್ರೇರಣೆ ಯಾಗಿದೆ. ಶಿಕ್ಷಣ ಸಂಪಾದನೆ, ಪುಸ್ತಕ ಸಂತೋಷ ಕೊಡುತ್ತದೆ ,ಪುಸ್ತಕ ವ್ಯಕ್ತಿಯ ವ್ಯಕ್ತಿತ್ವ ನಿರೂಪಣೆ ಸಾದ್ಯವಾಗಿದೆ. ನನ್ನ ನಿತ್ಯದ ಜೀವನದಲ್ಲಿ ಪುಸ್ತಕ ವನ್ನು ಓದುವ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತಿದ್ದೆನೆ. ಸದಾಭಿರುಚಿಯನ್ನು ಹೆಚ್ಚಿಸಿದೆ ಎಂದರು .

ಕಾರ್ಕಳ ಕ.ಸಾ.ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ ಸೃಜನಶೀಲ ತೆ , ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಸಾಹಿತ್ಯ ಪುಸ್ತಕಗಳು ಸಹಕಾರಿ ಯಾಗಿವೆ ಎಂದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವಥ್ ಎಸ್ ಎಲ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ ಪುಸ್ತಕ ಮನೆಯ ಮೊಬೈಲ್ ಬಿಡಿ ಪುಸ್ತಕ ಹಿಡಿ ಯೋಜನೆಯಂತೆ ದಾನಿಗಳ ಸಹಾಯದಿಂದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ ಸಾಹಿತ್ಯ ಪುಸ್ತಕಗಳನ್ನು ಹಂಚಿ ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆ ನೀಡುತ್ತಿವೆ ಪುಸ್ತಕ ಗಳು ಸಾಹಿತ್ಯದ ನಾವಿನ್ಯತೆಯನ್ನು ಹಂಚುವ ಕೆಲಸ ಮಾಡುತ್ತಿವೆ ಎಂದರು..
ನರೇಂದ್ರ ಪೈಯವರ ಸಾವಿರದೊಂದು ಪುಸ್ತಕ, ಯಶೋದಾ ಮೋಹನ್ ಅವರ ಇಳಿ ಹಗಲಿನ ತೇವಗಳು, ಸುಧಾ ನಾಗೇಶ್ ಅವರ ಹೊಂಬೆಳಕು, ವಾಣಿರಾಜ್ರವರ ಸವಿನೆನಪುಗಳ ಹಂದರ, ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರ ಜೀವನಯಾನ, ಅನುಬೆಳ್ಳೆ ಅವರ ನಗುವ ನಯನ ಮಧುರ ಮೌನ, ರಾಮಕೃಷ್ಣ ಹೆಗಡೆಯವರ ಒಲವಧಾರೆ, ಲಕ್ಷ್ಮಣ ಬಜಿಲರ ನಿರ್ವಾಣ, ಅಶ್ವತ್ಥ ಎಸ್. ಎಲ್.ರ ಅರಿವಿನ ದಾರಿ, ರಾಜೇಂದ್ರ ಭಟ್ರ ರಾಜಪಥ, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ಸಾರ್ಥಕ ಜೀವನಕ್ಕೆ ಕಗ್ಗೋಪದೇಶ, ಲಲಿತಾ ಮುದ್ರಾಡಿಯವರ ಅರ್ಥವಾಗದವರು, ದಿಗಂತ್ ಬಿಂಬೈಲ್ರ ಕೊಂದ್ ಪಾಪ ತಿಂದ್ ಪರಿಹಾರ, ಡಾ. ರಾಜಶೇಖರ್ ಹಳೆಮನೆ ಯವರ ಒಡಲುಗೊಂಡವರು, ಮಹೇಶ್ ಪುತ್ತೂರು ಬರೆದ ವರ್ಣ ಪುಸ್ತಕಗಳು ಬಿಡುಗಡೆ ಮಾಡಲಾಯಿತು..
ಕಾಲೇಜು ಸಂಸ್ಥಾಪಕರಾದ , ವಿದ್ವಾನ್ ಗಣಪತಿ ಭಟ್, ಡಾ. ಗಣನಾಥ ಶೆಟ್ಟಿ, ಅಮೃತ್ ರೈ, ಆದರ್ಶ ಎಂ. ಕೆ, , ವಿಮಲ್ ರಾಜ್ ಜಿ, ಗಣಪತಿ ಭಟ್ ಕೆ. ಎಸ್ ಉಪಸ್ಥಿತರಿದ್ದರು.






































