[t4b-ticker]

ಮೈಮೂನಾ ಮತ್ತು ಮರ್ಝಿನಾರಿಗೆ ಪ್ರೆಸ್‌ಕ್ಲಬ್ ವರ್ಷದ ಪ್ರಶಸ್ತಿ. ಅನ್ನು ಮಂಗಳೂರು, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ , ಕೃಷ್ಣ ಕೋಲ್ಚಾರ್, ರವಿ ಪೊಸವಣಿಕೆ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ರಾಜೇಶ್ ಕಿಣಿ, ಶರತ್ ಸಾಲ್ಯಾನ್, ಅಶೋಕ್. ಶೆಟ್ಟಿ ಬಿ.ಎನ್. ಸೇರಿದಂತೆ 9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ

Picture of RB NEWS

RB NEWS

Bureau Report

ಮೈಮೂನಾ ಮತ್ತು ಮರ್ಝಿನಾರಿಗೆ ಪ್ರೆಸ್‌ಕ್ಲಬ್ ವರ್ಷದ ಪ್ರಶಸ್ತಿ.
ಅನ್ನು ಮಂಗಳೂರು, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ , ಕೃಷ್ಣ ಕೋಲ್ಚಾರ್, ರವಿ ಪೊಸವಣಿಕೆ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ರಾಜೇಶ್ ಕಿಣಿ, ಶರತ್ ಸಾಲ್ಯಾನ್, ಅಶೋಕ್. ಶೆಟ್ಟಿ ಬಿ.ಎನ್. ಸೇರಿದಂತೆ 9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ.


ಮಾ.1೦ರಂದು ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ.
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್‌ಕ್ಲಬ್ ದಿನಾಚರಣೆ ಮಾ.1೦ರಂದು ಬೆಳಗ್ಗೆ 9.3೦ರಿಂದ ಮರವೂರಿನ ದಿ ಗ್ರ್ಯಾಂಡ್ ಬೇಯಲ್ಲಿ ನಡೆಯಲಿದೆ.


ಹೈನುಗಾರಿಕೆಯಲ್ಲಿ ಅಪೂರ್ವ ಸಾಧನೆಗೈದ ಹರೇಕಳದ ಮೈಮೂನಾ ಮತ್ತು ಮರ್ಝಿನಾ ಅವರು ಪ್ರೆಸ್‌ಕ್ಲಬ್ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪತ್ರಕರ್ತರಾದ ಅನ್ನು ಮಂಗಳೂರು, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ , ಕೃಷ್ಣ ಕೋಲ್ಚಾರ್, ರವಿ ಪೊಸವಣಿಕೆ, ರವೀಂದ್ರ ಶೆಟ್ಟಿ ಕುತ್ತೆತ್ತೂರು, ರಾಜೇಶ್ ಕಿಣಿ, ಶರತ್ ಸಾಲ್ಯಾನ್, ಅಶೋಕ್. ಶೆಟ್ಟಿ ಬಿ.ಎನ್.ಇವರುಗಳು ಪ್ರೆಸ್‌ಕ್ಲಬ್ ಗೌರವ ಸನ್ಮಾನಕ್ಕೆ ಆಯ್ಕೆಯಾಗಿದ್ದಾರೆ.


ನಟ, ನಿರ್ದೇಶಕ ನಟ ದೇವದಾಸ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಡಾ.ವೈ.ಭರತ್ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ, ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್, ಪ್ರೆಸ್‌ಕ್ಲಬ್ ನ ಸ್ಥಾಪಕ ಅಧ್ಯಕ್ಷ ಕೆ.ಆನಂದ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಆರ್.ರಾಮಕೃಷ್ಣ , ಪ್ರೆಸ್‌ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿರುವರು. ಇದೇ ಸಂದರ್ಭ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ ಎಂದು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top