ಮಂಗಳೂರು : ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಜಾತ್ರೆಯ ಸಂದರ್ಭದಲ್ಲಿ
ದೇವರ ರಥ ಹೋಗುವ ದಾರಿಯಲ್ಲಿದ್ದ ನಿಲ್ಲಿಸಿದ ಬೆಲೆಬಾಳುವ ವಾಹನಗಳನ್ನು ಭಕ್ತ ಸಮೂಹ ಜಖಂ ಗೊಳಿಸಿದ ಘಟನೆ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ರಥ ಹೋಗಲು ದಾರಿ ಮಾಡುವ ಉದ್ದೇಶದಿಂದ ಭಕ್ತ ಸಮೂಹವೂ ವಾಹನದ ಮೌಲ್ಯದ ಬಗ್ಗೆಯೂ ಹರಿಸದೇ ಪಾರ್ಕ್ ಮಾಡಿದ ಕಾರು, ರಿಕ್ಷಾ , ಬೈಕ್ ಗಳನ್ನು ಬದಿಗೆ ದೂಡಿ ಹಾಕಿದ್ದಾರೆ. ಇದರಿಂದ ವಾಹನಗಳೂ ಜಖಂಗೊಂಡಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.





































