[t4b-ticker]

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

Picture of RB NEWS

RB NEWS

Bureau Report

ಅಂದು ಚಂದ್ರಶೇಖರ್ ಇಂದು ಪುನೀತ್….
ಕ್ರೀಡಾ ಕ್ಷೇತ್ರದಲ್ಲಿ ಕನ್ನಡಿಗರ ಸಾಧನೆ

ಚಂದ್ರಶೇಖರ್ .ಕೆ

ಕಾಸರಗೋಡು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾಣ್ಣುಡಿ ಅಕ್ಷರಶ: ಪುನೀತ್ ಗೆ ಸಲ್ಲುತ್ತದೆ.

ಕಾಸರಗೋಡಿನ ನಾಗರಕಟ್ಟೆಯ ಕೇಶವ ಹಾಗೂ ವೇದಾವತಿ ದಂಪತಿಯ ಎರಡನೇಯ ಮಗ ಪುನೀತ್ ನಗರದ ಬಿ ಇ ಎಂ ಹೈಸ್ಕೂಲ್ ವಿದ್ಯಾರ್ಥಿ.

ಕ್ರಿಕೆಟ್ ನ ಗೀಳು ಹಚ್ಚಿಕೊಂಡ ಪುನೀತ್ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜರುಗಿದ್ಧ 50ಕ್ಕೂ ಮಿಕ್ಕಿ ಆಹೋ-ರಾತ್ರಿ ಕ್ರಿಕೆಟ್ ಪಂದ್ಯಾಟಗಳಲ್ಲಿ ಭಾಗವಹಿಸಿದ ಕೀರ್ತಿ ಪುನೀತ್ ಗೆ ಸಲ್ಲುತ್ತದೆ.

ಹಿರಿಯ- ಕಿರಿಯರೊಂದಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಪುನೀತ್ ಗೆ ಇದುವರೆಗೆ ಸುಮಾರು 26ಕ್ಕೂ ಮಿಕ್ಕಿ ಪ್ರಶಸ್ತಿ ಲಭಿಸಿದ್ದು ಅದರಲ್ಲಿ ಮ್ಯಾನ್ ಆಪ್ ದಿ ಮ್ಯಾಚ್, ಮ್ಯಾನ್ ಆಫ್ ಸಿರಿಯರ್ಸ್, ಬೆಸ್ಟ್ ಬೌಲರ್ ಟ್ರೋಫಿಗಳನ್ನು ಗಳಿಸಿದ ಕೀರ್ತಿ ಪುನೀತ್ ನದಾಗಿದೆ.

ಅಂದು ಚಂದ್ರಶೇಖರ್ ಇಂದು ಪುನೀತ್….
ಕ್ರೀಡಾ ಕ್ಷೇತ್ರದಲ್ಲಿ ಕನ್ನಡಿಗರ ಸಾಧನೆ

1988 ರಿಂದ 1990 ಕಾಲಘಟ್ಟ ಅದಾಗಿತ್ತು. ತಾಳಿಪಡ್ಪು ಬಳಿಯ ನಿವಾಸಿ ಚಂದ್ರಶೇಖರ ಪೂಜಾರಿ ಹಾಗೂ ಬಾಲಕೃಷ್ಣ ಪೂಜಾರಿ ಸಹೋದರರು ಕಾಸರಗೋಡಿನ ಬಿ.ಇ.ಎಂ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಗಳಾಗಿದ್ದರು.
ಅವರಲ್ಲಿ ಚಂದ್ರಶೇಖರ ಪೂಜಾರಿ ಕ್ರಿಕೆಟ್ ರಂಗ ಗಣನಿಕಯ ಸಾಧನೆಗೈದು ಕೇರಳ ರಾಜ್ಯದ ಬಾಲಕ ತಂಡದ ನಾಯಕನಾಗಿ ಗುರುತಿಸಿದ್ದರು.

ಕ್ರೀಡಾಳು ಕೋಟಾದಿಂದಾಗಿ ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು ಬ್ಯಾಂಕ್ ನಲ್ಲಿ ಉದ್ಯೋಗವನ್ನು ಗಳಿಸಿದ್ದರು.

ಅದೇ ಬಿ ಇ ಎಂ ಹೈಸ್ಕೂಲ್ ನಲ್ಲಿ 8 ನೇ ತರಗತಿ ವಿದ್ಯಾರ್ಥಿಯಾಗಿರುವ ಪುನೀತ್ ಕ್ರಿಕೆಟ್ ನಲ್ಲಿ‌ ಗಣನೀಯ ಸಾಧನೆಗೈಯುತ್ತಿರುವುದು ಹೆಮ್ಮೆಯನ್ನುಂಟು ಮಾಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top