ಮುರಿದು ಬಿತ್ತು ವೈವಾಹಿಕ ಜೀವನ : ದಲ್ಲಾಳಿಯನ್ನು ಕೊಂದ ನವವಿವಾಹಿತ
ಮಂಗಳೂರು: ನವ ವಿವಾಹಿತನೊಬ್ಬ ತನ್ನ ಸಂಬಂಧಿಕ ಮೂವರ ಮೇಲೆ ಚೂರಿ ಇರಿದಿದ್ದು, ಅವರಲ್ಲಿ ಓರ್ವ ದಾರುಣ ರೀತಿಯಲ್ಲಿ ಮೃತ ಪಟ್ಟರೆ ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ತೆಯ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿದ್ದಾರೆ.
ಮಂಗಳೂರು ನಗರದ ಹೊರವಲಯದ ವಳಚ್ಚಿಲ್ ಎಂಬಲ್ಲಿ ಮೇ 22ರ ರಾತ್ರಿ ನಡೆದಿದೆ.
ವಾಮಂಜೂರು ನಿವಾಸಿ ಪುತ್ರ ಸುಲೈಮಾನ್ (50) ಘಟನೆಯಲ್ಲಿ ಮೃತ ದುರ್ದೈವಿ. ಅವರ ಪುತ್ರರಾದ ಸಿಯಾಬ್ ಹಾಗೂ ರಿಯಾಬ್ ಇತರ ಗಾಯಳುಗಳು.
ಘಟನೆಯ ಆರೋಪಿ ಮುಸ್ತಾಫ(30) ಆಗಿದ್ದಾನೆ.
ಘಟನೆಗೆ ಕಾರಣ…
.
ಪ್ರಾಥಮಿಕ ತನಿಖೆಯ ಪ್ರಕಾರ, ಮದುವೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ಸುಲೈಮಾನ್, ಸುಮಾರು ಎಂಟು ತಿಂಗಳ ಹಿಂದೆ ತನ್ನ ಸಂಬಂಧಿ, ಆರೋಪಿ ಮುಸ್ತಫಾನೊಂದಿಗೆ ಶಾಹೀನಾಜ್ ಎಂಬ ಮಹಿಳೆಯ ಮದುವೆ ಏರ್ಪಡಿಸಿದ್ದರು. ಆದರೆ ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ಎರಡು ತಿಂಗಳ ಹಿಂದೆ ಶಾಹೀನಾಜ್ ತನ್ನ ತವರು ಮನೆಗೆ ಸೇರಿದಳು.
ಇದರಿಂದಾಗಿ ಸಂಬಂಧಿಗಳಾದ ಮುಸ್ತಫಾ ಮತ್ತು ಸುಲೈಮಾನ್ ನಡುವೆ ವೈಮನಸ್ಸು ಉಂಟಾಗಿತ್ತು.
ಘಟನೆ ನಡೆದ ರಾತ್ರಿ, ಮುಸ್ತಫಾನು ಸುಲೈಮಾನ್ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎನ್ನಲಾಗಿದೆ.
ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸುಲೈಮಾನ್ ತನ್ನ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಜೊತೆ ವಳಚ್ಚಿಲ್ನಲ್ಲಿರುವ ಮುಸ್ತಫಾ ಅವರ ನಿವಾಸಕ್ಕೆ ಹೋಗಿದ್ದರು. ಇವರು ಮಕ್ಕಳನ್ನು ಮನೆಯಿಂದ ದೂರದಲ್ಲಿ ನಿಲ್ಲಿಸಿದ ಸುಲೈಮಾನ್ ಅವರು ಮುಸ್ತಫಾನೊಂದಿಗೆ ಮಾತುಕತೆ ನಡೆಸಿದರೆ ಹೊರತು ಯಾವುದೇ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಸುಲೈಮಾನ್ ಆ ಮನೆಯಿಂದ ಹಿಂತಿರುಗುತ್ತಿದ್ದರು.
ಅದೇ ವೇಳೆಗೆ ಮುಸ್ತಫಾ ತನ್ನ ಮನೆಯಿಂದ ಅವೇಶಭರಿತನಾಗಿ ಕಿರುಚಾಡುತ್ತಾ ಬೆನ್ನಟ್ಟಿ ಬಂದು ಕೂಗುತ್ತಾ ಬಂದು ಸುಲೈಮಾನ್ ಅವರ ಕುತ್ತಿಗೆಯ ಬಲಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ತೀವ್ರರಕ್ತ ಸಾವ್ರದಲ್ಲಿ ಅವರು ಕುಸಿದು ಬಿದ್ದರು.
ಸ್ವಲ್ಪ ದೂರದಲ್ಲಿ ಇದ್ದ ಸುಲೈಮಾನ್ ಅವರ ಮಕ್ಕಳಾದ ಸಿಯಾಬ್ ಅವರ ಎದೆಯ ಎಡಭಾಗಕ್ಕೆ ಮತ್ತು ರಿಯಾಬ್ ಅವರ ಬಲ ಮುಂದೋಳಿಗೆ ಇರಿದ ಮುಸ್ತಫಾ ತನ್ನ ದರ್ಪ ತೋರಿಸಿದ್ದಾನೆ.
ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು.ಈ ನಡುವೆ ಸುಲೈಮಾನ್ ದಾರಿಮಧ್ಯೆ ಮೃತರಾಗಿದ್ದರು. ಅವರ ಪುತ್ರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮುಸ್ತಫಾನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.












