ಮೀನಾ ಕೊಲೆ ಹಂತಕ ನೇಣಿಗೆ ಶರಣು?!

Picture of RB NEWS

RB NEWS

Bureau Report

ಸೋಮವಾರಪೇಟೆ: ಮೀನಾ ಕೊಲೆಗಡುಕ ಪ್ರಕಾಶ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ?!

ಕೊಡಗು: ಮದುವೆಯಾಗಲು ವಯಸ್ಸು ಅಡ್ಡಿಯಾಯಿತ್ತೆಂಬ ಕಾರಣಕ್ಕಾಗಿ ವಿದ್ಯಾರ್ಥಿನಿ ಮೀನಾ ಎಂಬಾಕೆಯ ಕತ್ತು ಕಡಿದು ಕೊಲೆಗೈದ ಆರೋಪ ಮೊಣ್ಣಂಡ ಪ್ರಕಾಶ್ ನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ಹರಡಿಕೊಂಡಿದೆ.

ಮೀನಾಳನ್ನು ಕೊಂದ ಪ್ರಕಾಶ್ ತನ್ನ ಮನೆಯ ಸಮೀಪದಲ್ಲೇ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ಆತ ತೆಗೆದುಕೊಂಡು ಹೋಗಿದ್ದ ಬಾಲಕಿ ರುಂಡ ಪತ್ತೆಯಾಗಿಲ್ಲ. ಸದ್ಯ ಬಾಲಕಿಯ ರುಂಡ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕಾಶ್ ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಮುಟ್ಲು ಗ್ರಾಮದಲ್ಲಿ ವಿದ್ಯಾರ್ಥಿನಿಯೋರ್ವಳ ರುಂಡ ಮುಂಡ ಬೇರ್ಪಡಿಸಿ ಕೊಂದು ಹಾಕಿದ ಘಟನೆ ಇಡೀ ಕೊಡಗು ಜಿಲ್ಲೆಯನ್ನು ತಲ್ಲಣಗೊಳಿಸಿತ್ತು.

ಆರೋಪಿ ಆತ್ಮಹತ್ಯೆಗೈದ ಕುರಿತು ಖಾತ್ರಿ ಇಲ್ಲ: ಜಿಲ್ಲಾ ಎಸ್ಪಿ

ಮಡಿಕೇರಿ: ಸೂರ್ಲಬ್ಬಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಮೀನಾ (16) ಕೊಲೆ ಪ್ರಕರಣಕ್ಕೆಸಂಬಂಧಿಸಿದಂತೆ ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಕೆಲವು ಮಾಧ್ಯಮಗಳ ವರದಿಗೆ ಪ್ರತಿಕ್ರಿಯಿಸಿದ ಎಸ್ಟಿ ಆರೋಪಿಯ ಮೃತದೇಹ ಪತ್ತೆಯಾಗದೆ ಇರುವುದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಖಾತ್ರಿ ಪಡಿಸಲು ಸಾಧ್ಯವಿಲ್ಲ ಎಂದು ಸ್ಪಷನೆ ನೀಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top