ಮಾನಸಿಕ ಸದೃಢವಾಗಲು ಯೋಗ ಮುಖ್ಯ; ಎಸ್ ನಿತ್ಯಾನಂದ ಪೈ
ಕಾರ್ಕಳ : ಯೋಗ ಬರೀ ವ್ಯಾಯಾಮ ಅಲ್ಲ ,ಆಸನಗಳ ಒಂದು ಭಾಗ ಅಷ್ಟೇ ,ಯಮ ನಿಯಮಗಳಿಂದ ವ್ಯಕ್ತಿಯು ಮಾನಸಿಕ ,ಭೌತಿಕ ಹಾಗೂ ಶಾರೀರಿಕವಾಗಿ ವ್ಯಕ್ತಿಯನ್ನು ಸದೃಢ ಮಾಡುತ್ತದೆ ಎಂದು ನಿರಂತರ ಯೋಗ ಶಿಕ್ಷಣ ಸಮಿತಿಯ ಜಿಲ್ಲಾಧ್ಯಕ್ಷ ಎಸ್ ನಿತ್ಯಾನಂದ ಪೈ ತಿಳಿಸಿದರು.
ಎಸ್ ಪಿ ವೈ ಎಸ್ ಎಸ್, ಕ್ರೀಡಾ ಭಾರತಿ ಮತ್ತು ನಿರಂತರ ಯೋಗ ಶಿಕ್ಷಣ ಸಮಿತಿಯು ಜಂಟಿಯಾಗಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕಾರ್ಕಳ ಶ್ರೀಮದ್ ಭುವನೇಂದ್ರ ಶಾಲೆಯಲ್ಲಿ ಆಚರಿಸಿ ಮಾತನಾಡಿದರು.
ಹಿರಿಯ ಶಿಕ್ಷಕ ವಿನಾಯಕ ಕುಡ್ವ,ಶಿಕ್ಷಕಿಯರಾದ ಶ್ವೇತಾ ವಿ ಶೆಣೈ, ರವಿಕಲಾ ಹೆಗ್ಡೆ , ನಯನ ಪ್ರಭು ಪ್ರತಿಕ್ಷತೆ ನಡೆಸಿಕೊಟ್ಟರು . ಶಿಕ್ಷಕ ಸಂಜಯ್ ಕುಮಾರ್ ನೆರವೇರಿಸಿದ ಕಾರ್ಯಕ್ರಮದಲ್ಲಿ ಕ್ರೀಡಾ ಭಾರತಿಯ ಶಿವಾನಂದ ಕಾಮತ್ ಧನ್ಯವಾದ ಸಮರ್ಪಿಸಿದರು .ಎಸ್ ಪಿ ವೈ ಎಸ್ ಎಸ್ ನಗರ ಸಂಚಾಲಕ ಸಂತೋಷ್ ಕುಮಾರ್ ಸ್ವಾಗತಿಸಿದರು.






































