ಮಾನವೀಯ ಮೌಲ್ಯ ಸಕಾರಗೊಳ್ಳಲು ಸರ್ವರ ನೆರವು ಅಗತ್ಯ

Picture of RB NEWS

RB NEWS

Bureau Report

ಹಾದು. ಇಂತಹ ಅಶಯ ವ್ಯಕ್ತವಾಗಬೇಕಾದರೆ ಆಶ್ರಮಗಳಿಗೊಮ್ಮೆ ಭೇಟಿಯಾಗಲೇ ಬೇಕು.
ಅದ್ಯಾವುದೋ ಕಾರಣದಿಂದಾಗಿ ಮನೆ ಮಂದಿಯಿAದ ದೂರ ಉಳಿದುಕೊಂಡು, ಸಮಾಜದಿಂದ ತಿರಸ್ಕಾರಗೊಂಡ ಅದೆಷ್ಟೋ ಹಿರಿ ಜೀವಗಳಿಗೆ ಗೌರವದ ಬದುಕು ನೀಡುತ್ತಿರುವುದು ವೃದ್ದಾಶ್ರಮಗಳು ನಮ್ಮ ನಡುವೆ ಇದೆ.
ಕಾರ್ಕಳದ ಪರ್ಪಲೆಯಲ್ಲಿ ಕ್ರಿಸ್ತ ಸೇವಕೀ ಆಶ್ರಮವೂ ಅದರಲ್ಲಿ ಒಂದಾಗಿದೆ. ೧೯೫೦ರಲ್ಲಿ ಸಿಸ್ಟೆರ್ ಹನ್ನ ಅಚಿಮನ್ನ್ ಎಂಬವರು ಇದನ್ನು ಸ್ಥಾಪಿಸಿದರು.
ಸರಕಾರದಿಂದ ಯಾವುದೇ ಫಲಾಪೇಕ್ಷೆಗಳು ನಿರೀಕ್ಷಿಸದೇ, ದಾನಿಗಳ ನೆರವಿನೊಂದಿಗೆ ನೊಂದ ಹಿರಿ ಜೀವಗಳಿಗೆ ಇದೇ ಅಶ್ರಮದಲ್ಲಿ ಕಳೆದ ಹಲವು ವರ್ಷಗಳಿಂದ ಗೌರವದ ಬದುಕು ಕಲ್ಪಿಸುತ್ತ ಬಂದಿರುವುದು ಕಾಣಬಹುದಾಗಿದೆ.
ಇದು ಕೇವಲ ಅನಾಥಶ್ರಮ ಮಾತ್ರವಾಗಿಲ್ಲ. ಹೊಸ ಬದುಕು ಕಂಡುಕೊಳ್ಳುವ ಎಲ್ಲ ಅವಕಾಶಗಳು ಇಲ್ಲಿವೆ.
ಗ್ರಂಥಾಲಯ, ಹಳೆ ನಾಣ್ಯ ಸಂಗ್ರಹ, ವಿವಿಧ ದೇಶಗಳ ನಾಣ್ಯಗಳು, ಹಳೆ ಪರಿಕರಗಳು, ತುಳುನಾಡ ಕಲೆ,ಸಂಸ್ಕೃತಿ,ಸAಸ್ಕಾರ, ಕಲೆ ಇವುಗಳನ್ನು ಅಭ್ಯಸಿಸುವುದಕ್ಕೂ ಅವಕಾಶ ಇಲ್ಲಿರುವುದು ಗಮನಾರ್ಹವಾಗಿದೆ.


ಹಿರಿಯರು ಇಲ್ಲಿರುವುದರಿಂದ ಅವರ ಬದುಕು,ಆರೋಗ್ಯಕ್ಕೆ ಅಗತ್ಯ ಇರುವ ಆಹಾರ, ಔಷಧಿಯ ಬೇಕಾಗಿದೆ. ಇವುಗಳನ್ನು ಯಾವುದಾದರೂ ಸಂಘ-ಸAಸ್ಥೆಗಳು ಉದಾರವಾಗಿ ನೀಡಿದಲ್ಲಿ ಅವುಗಳನ್ನು ಸ್ವೀಕರಿಸಲು ಸದಾಸಿದ್ಧ ಎನ್ನುತ್ತಿದ್ದಾರೆ ಆಶ್ರಮದ ಮುಖ್ಯಸ್ಥರಾದ ಮೆಲೋರಿ,ಮೋನಿಕಾ,ಕಿಶೋರ್ ಒಸ್ವಾಲ್ಡ್.
ನಮ್ಮ ತುಳುನಾಡು ಟ್ರಸ್ಟ್ (ರಿ) ರಾಜ್ಯ ಸಂಚಾಲಕ ತುಳುನಾಡ ತುಡರ್ ಕೀರ್ತಿ ಕಾರ್ಕಳ ಹಾಗೂ ಕಾರ್ಕಳ ಘಟಕದ ನಮ್ಮ ತುಳುನಾಡು ಟ್ರಸ್ಟಿನ ಮುಖಸ್ಥ ರವಿಚಂದ್ರ ಆರ್.ಸಿ ಅವರು ಪರ್ಪಲೆ ಕ್ರಿಸ್ತ ಸೇವಕಿ ಆಶ್ರಮಕ್ಕೆ ಭೇಟಿ ನೀಡಿ ಫಾದರ್ ಬಿ.ಬೆರ್ಟಿ ಅಮನ್ನಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಮಾನವೀಯ ಮೌಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೆರವು ಹಸ್ತ ನೀಡಬೇಕು. ಜೊತೆಗೆ ಹಿರಿಯರನ್ನು ಗೌರವಿಸಿ ಅವರ ಬದುಕಿಗೆ ದಾರಿದೀಪ ನಾವುಗಳಾಗಬೇಕು ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂಬ ಪರಿಕಲ್ಪನೆ ನಮ್ಮ ತುಳುನಾಡು ಟ್ರಸ್ಟ್ (ರಿ) ರಾಜ್ಯ ಸಂಚಾಲಕ ತುಳುನಾಡ ತುಡರ್ ಕೀರ್ತಿ ಕಾರ್ಕಳ ಅವರದಾಗಿದೆ.
ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಅಗತ್ಯ ನೆರವು ನೀಡುವ ಇಚ್ಚೆಯೂ ಹೊಂದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top