ಮಾನವೀಯ ಮೌಲ್ಯಕ್ಕೆ ಮಹತ್ವ ನೀಡಿದ ಯುವಶಕ್ತಿ ಸೇವಾಪಥ

Picture of RB NEWS

RB NEWS

Bureau Report

ಬಂಟ್ವಾಳ: ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡ ವತಿಯಿಂದ ಬಂಟ್ವಾಳ ತಾಲೂಕಿನ ಗೋಳ್ತಮುಜಲ್ ಗ್ರಾಮದ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಜಾತ್ರೋತ್ಸವದಲ್ಲಿ ನಿಟಿಲಾಪುರದಿ ಸೇವಾವಾರಿದಿ ಮೂಲಕ ಸಂಗ್ರಹಿಸಲ್ಪಟ್ಟ ರೂ. 88,101 ಸೇವಾನಿಧಿಯನ್ನು ಕ್ಷೇತ್ರದಲ್ಲಿ ಪ್ರಮುಖರ ಸಮ್ಮುಖ ಫಲಾನುಭವಿಗಳಾದ ಆರುಷಿ ನೆಟ್ಲ ರವರಿಗೆ ರೂ. 30,000 , ನಂದಕಿಶೋರ್ ಮಾಣಿಮಜಲ್ ರವರಿಗೆ ರೂ.25000, ಸಂತೋಷ್ ಕಲ್ಲಡ್ಕ ರವರಿಗೆ 25000 ಕಾರ್ಯಕರ್ತರ ಕ್ಷೇಮ ನಿಧಿಗೆ ರೂ‌. 8101 ಮೊತ್ತವನ್ನು ಹಸ್ತಾಂತರಿಸಲಾಯಿತು.

ನೆರವು ಸ್ವೀಕರಿಸಿದ ಫಲಾನುಭವಿಗಳು ಯುವಶಕ್ತಿ ಸೇವಾ ಪಥದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯುವಶಕ್ತಿ ಸೇವಾ ಪಥದ ವತಿಯಿಂದ ಸಮಾಜದಿಂದ ಸಮಾಜಕ್ಕೆ ಈತನಕ ಸುಮಾರು ರೂ. 70 ಲಕ್ಷ ಮೊತ್ತವನ್ನು ವಿವಿಧ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.
ಮಾನವೀಯ ಮೌಲ್ಯಕ್ಕೆ ಮಹತ್ವ ನೀಡಿದ ಯುವಶಕ್ತಿ ಸೇವಾಪಥ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top