ಮಾಧ್ಯಮದ ಅಗತ್ಯವಿಲ್ಲ..!?

Picture of RB NEWS

RB NEWS

Bureau Report

ಪತ್ರಿಕಾ ಮಾಧ್ಯಮವೋ ಅಥವಾ ಪಕ್ಷದಲ್ಲಿ ರಾಜಿ ಮಾಡಿಸುವುದಕ್ಕೆ ನಡುವೆ ನಿಂತಿದ್ದ ಮಧ್ಯವರ್ತಿಗಳ ಅಗತ್ಯವಿಲ್ಲವೋ ಎಂಬುದು ಸಮಯ ಸಂದರ್ಭ!!


ಯಾರಿಲ್ಲವಾದರೂ ಈ ಬಾರಿ ಬೃಜೇಶ್ ಚೌಟ ಗೆಲ್ಲುವುದು ನೂರಕ್ಕೆ ನೂರು ಖಚಿತ.ಕಾಂಗ್ರೆಸ್ ಪಕ್ಷದಲ್ಲಿ ತಳ ಮಟ್ಟದ ಕಾರ್ಯಚಟುವಟಿಕೆಯೆ ಇಲ್ಲ,ಬೂತ್ ಮಟ್ಟದ ಕಾರ್ಯಕರ್ತರು ಎಲ್ಲ ಕ್ಷೇತ್ರದಲ್ಲಿ ಸರಿಯಾಗಿ ಇಲ್ಲ. ಕಾಂಗ್ರೆಸ್ಸಿನ ಯಾವೊಬ್ಬ ಮುಖಂಡನಲ್ಲಿ ನಿಮ್ಮ ಅಭ್ಯರ್ಥಿಯ ಯಾರು ಎಂದು ಕೇಳಿದರೆ ,ಯಾರಿಗೆ ಗೊತ್ತು? ಅನ್ನುತ್ತಾರೆ ಹೊರತು ಅವರಿವರ ಹೆಸರನ್ನೂ ಹೇಳುವ ಆಸಕ್ತಿಯಿಲ್ಲವಾಗಿದೆ.


ಬಿಜೆಪಿಯಿಂದ ಸಿಡಿದವರ ಯಾರ ಬಂಡಾಯವೂ ಈ ಸಲಕ್ಕೆ ಕಾರ್ಯರೂಪಕ್ಕೆ ಬರುವುದಿಲ್ಲ. ಪುತ್ತೂರಿನಲ್ಲಿ ಐವತ್ತು ಸಾವಿರ ಮತಗಳು
ನೋಟ ಚಲಾವಣೆಗೊಂಡರೂ ಅದೊಂದು ಚುನಾವಣೆ ದಾಖಲೆಯಾದೀತೇ ಹೊರತು ಬೇರೇನೂ ಆಗದು.


ಡಾ.ಪ್ರಸಾದ್ ಭಂಡಾರಿ ಮತ್ತು ಮಠಂದೂರು ಹಾಗೂ ವಯಸ್ಕರ ತಂಡದವರ ಬೆನ್ನ ಹಿಂದೆ ಹೇಳುವ ಸಂಖ್ಯೆಯಷ್ಟು ಮತಗಳಿಲ್ಲವೆಂದು ಪುತ್ತಿಲ ಬಣ ವಾದಿಸಿದರೂ ಬಿಜೆಪಿಯ ಮತಗಳು ಯಾರ ಹಿಂದೆಯೂ ಪ್ರದರ್ಶನಕ್ಕಿರುವುದಿಲ್ಲ ಎನ್ನುವ ಸತ್ಯವನ್ನೂ ಒಪ್ಪಿಕೊಳ್ಳಲೇಬೇಕು.


ಪುತ್ತಿಲ,ಸತ್ಯಜಿತ್,ತಿಮರೋಡಿ ಅವರೆಲ್ಲರೂ ಒಂದು ಮಟ್ಟಿಗಷ್ಟೇ ಬಿಜೆಪಿ ಬಂಡಾಯಗಾರರು ಎಂದು ಕಾಣಿಸಿಕೊಂಡರೂ ಅವರೊಳಗೆ ಯಾವುದೇ ಒಪ್ಪಂದ,ಹಿತಗಳು ಸಹ ಇಲ್ಲವಾಗಿದೆ,ಹಾಗಿರುವಾಗ ಬಂಡಾಯದ ಪ್ರಭಾವ ಈ ಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸುವುದಿಲ್ಲ.

ಇನ್ನೊಂದು ಮಗ್ಗುಲಿನಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಬೆಂಬಲಿಗರು ಪುತ್ತಿಲ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗಿರುವ ಸೂಕ್ಷ್ಮ ಸಂಗತಿಯೂ ಮೊನ್ನೆ ಪುತ್ತೂರಲ್ಲಿ ಕಿಡಿಯ ಗಾತ್ರದಲ್ಲಿ ಕಂಡುಬಂದಿದೆ. ಚೌಟರನ್ನು ಸೋಲಿಸಬೇಕು ಎಂದು ಕಟೀಲು ಯೋಚಿಸಲಾರರು.ಯಾರು ಪ್ರಯತ್ನಿಸಿದರೂ ಅದು ಕೆಲಸ ಮಾಡುವುದಿಲ್ಲ ಕಾರಣ ಬಿಜೆಪಿಯತ್ತ ನೋಡದೆ ,ಮೋದಿಯತ್ತ ನೋಡಿ ಮತ ಹಾಕುತ್ತಿರುವುದು.


ಪುತ್ತಿಲ ಈ ಬಾರಿ ಚೌಟರನ್ನು ಬೇಷರತ್ತಾಗಿ ಬೆಂಬಲಿಸುತ್ತ ಬಿಜೆಪಿ ಪಕ್ಷ ಕಾರ್ಯಕಾರಿಣಿಯಿಂದ ಅಥವಾ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಆತರಾಪೇಕ್ಷೆಯಿಂದ ದೂರ ನಿಲ್ಲಬೇಕಾಗಿತ್ತು. ಹಾಗೆ ಆಗಿದ್ದರೆ ಅರುಣ ಕುಮಾರ ಪುತ್ತಿಲರ ಹೋರಾಟಕ್ಕೊಂದು ಜೊತೆಗೆ ಅವರ ನಾಯಕತ್ವಕ್ಕೊಂದು ರಾಜಕೀಯದ ಅಸಲಿ ವರ್ಚಸ್ಸು ದೊರೆಯುತ್ತಿತ್ತು.


ರಾಷ್ಟ್ರೀಯ ಪಕ್ಷದಿಂದ ದೂರ ನಿಂತು ಸ್ವಂತ ತಾಕತ್ತನ್ನು ಉಳಿಸಿಕೊಂಡೇ ರಾಜಕೀಯ ವರ್ಚಸ್ಸು ಅಥವಾ ನಾಯಕತ್ವ ಬೆಳೆಸಿಕೊಂಡವರು ಕರಾವಳಿ ಜಿಲ್ಲೆಯಲ್ಲಿ ಬೇರೆ ಯಾರೂ ಇಲ್ಲ.
ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಕೆ. ಜಯಪ್ರಕಾಶ ಹೆಗ್ಡೆಯವರು ಮಾತ್ರ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.


ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಅರುಣ ಕುಮಾರ ಪುತ್ತಿಲ್ಲ ಮತ್ತೊಮ್ಮೆ ಬಂಡಾಯ ಎಬ್ಬಿಸಲೇಬೇಕಾಗುತ್ತದೆ.


ಬೆಳೆಯುವ ನಾಯಕನನ್ನು ಆರಂಭದಲ್ಲಿಯೇ ರಾಜಕೀಯ ಇತಿಶ್ರೀ ಮಾಡುವುದಕ್ಕೆ ಮುಹೂರ್ತ ಇಟ್ಟ ಬಿಜೆಪಿಯವರ ತಂತ್ರೋಪಾಯ ಹೊಸದಲ್ಲ, ಇಲ್ಲಿ ಗೆದ್ದಿರುವುದು ಪುತ್ತಿಲ ವಿರೋಧಿ ಬಣದ ಪ್ರಮುಖರಾಗಿರುವ ಡಾ.ಪ್ರಸಾದ್ ಭಂಡಾರಿ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಬಣ.

ವಿ. ಕೆ. ವಾಲ್ಪಾಡಿ


ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top