ಮಾದಕ ವಸ್ತು ಎಂಡಿಎಂಎ ನ್ನು ಮಾರಾಟ ಮಾಡಲು ಬಂದ ಆರೋಪಿಗಳಿಬ್ಬರ ಬಂಧನ

Picture of RB NEWS

RB NEWS

Bureau Report

ಕಾರ್ಕಳ : ಪಡುಬಿದ್ರಿಯ ಬಡಾ ಗ್ರಾಮದ ಉಚ್ಚಿಲ ಪೊಲ್ಯ ಬುಬಲ್ ಮೈದಾನದ ಬಳಿ ಮಾದಕ ವಸ್ತು ಎಂಬಿಎಂಎ ನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ವರ್ತಮಾನದ ಮೇರೆಗೆ ಪಡುಬಿದ್ರಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ.

ಫರ್ಹನ್, ಫಕೀರನ ಕಟ್ಟೆ ಮಸೀದಿ ಬಳಿ, ಮಲ್ಲಾರು ಗ್ರಾಮ, ಕಾಪು ತಾಲೂಕು ಹಾಗೂ ಮೊಹಮ್ಮದ್ ಹಾಶಿಂ, ಕೊಂಬಗುಡ್ಡೆ, ಮಲ್ಲಾರು, ಮಜೂರು ಗ್ರಾಮ, ಕಾಪು ತಾಲೂಕು ಬಂಧಿತ ಆರೋಪತರು.

ಪಿಎಸ್ಐ ರವರು ಸ್ಥಳಕ್ಕೆ ಪತ್ರಾಂಕಿತ ಅಧಿಕಾರಿ ರವರನ್ನು ಬರಮಾಡಿಕೊಂಡು ಆರೋಪಿಗಳ ಅಂಗ ಜಪ್ತಿ ಮಾಡಿದಲ್ಲಿ ಅವರ ಪ್ಯಾಂಟಿನ ಕಿಸೆಯಲ್ಲಿದ್ದ 9.30 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವನ್ನು ಮತ್ತು ಅವರ ಬಳಿ ಇದ್ದ ನಗದು ಹಣ ರೂಪಾಯಿ5,000 ಮತ್ತು ರೂಪಾಯಿ 1,80,000 ಮೌಲ್ಯದ ಮೋಟಾರು ಸೈಕಲ್ ಮತ್ತು ರೂಪಾಯಿ 6,000 ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡರು.‌

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸದಾನಂದ ಎಸ್ ನಾಯಕ್ ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವಧ ರವರ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಶ್ರೀ ಸಕ್ತಿವೇಲು ಇ ( ಕಾ.ಸು) ಮತ್ತು ಅನಿಲ್ ಕುಮಾರ್(ತನಿಖೆ) ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಎ ಎಸ್ ಐ ಗಿರೀಶ್ ಹೆಡ್ ಕಾನ್ ಸ್ಟೇಬಲ್ ಕೃಷ್ಣಪ್ರಸಾದ್, ರಮೇಶ್, ಕಾನ್ ಸ್ಟೇಬಲ್ ಸಂದೇಶ, ಮಹಿಳಾ ಕಾನ್ ಸ್ಟೇಬಲ್ ರುಕ್ಮಿಣಿ ಕಾರ್ಯಾಚರಣೆಯಲ್ಲಿ ಸಹಕರಿಸಿರುತ್ತಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ಪಿಸಿ ದಿನೇಶ್ ರವರು ಸಹಕರಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top