ಮಾದಕ ವಸ್ತು ಎಂಡಿಎಂಎ ನ್ನು ಮಾರಾಟ ಮಾಡಲು ಬಂದ ಆರೋಪಿಗಳಿಬ್ಬರ ಬಂಧನ
ಕಾರ್ಕಳ : ಪಡುಬಿದ್ರಿಯ ಬಡಾ ಗ್ರಾಮದ ಉಚ್ಚಿಲ ಪೊಲ್ಯ ಬುಬಲ್ ಮೈದಾನದ ಬಳಿ ಮಾದಕ ವಸ್ತು ಎಂಬಿಎಂಎ ನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ವರ್ತಮಾನದ ಮೇರೆಗೆ ಪಡುಬಿದ್ರಿ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣಾಧಿಕಾರಿ ಸಕ್ತಿವೇಲು ಸಿಬ್ಬಂದಿ ಕಾರ್ಯಚರಣೆ ನಡೆಸಿದ್ದಾರೆ.
ಫರ್ಹನ್, ಫಕೀರನ ಕಟ್ಟೆ ಮಸೀದಿ ಬಳಿ, ಮಲ್ಲಾರು ಗ್ರಾಮ, ಕಾಪು ತಾಲೂಕು ಹಾಗೂ ಮೊಹಮ್ಮದ್ ಹಾಶಿಂ, ಕೊಂಬಗುಡ್ಡೆ, ಮಲ್ಲಾರು, ಮಜೂರು ಗ್ರಾಮ, ಕಾಪು ತಾಲೂಕು ಬಂಧಿತ ಆರೋಪತರು.




































