ಮಹಿಳಾ ಜ್ಞಾನವಿಕಾಸ ಉಚಿತ ಆರೋಗ್ಯ ತಪಾಸಣೆ



ಬಂಟ್ವಾಳ : ಜು 16, ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರ ಜೊತೆಗೆ ಗ್ರಾಮಸ್ಥರ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಗ್ರಾಮ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣೆ , ಸಹಾಯಧನ, ವಾಸ್ತಲ್ಯ ಕಾರ್ಯಕ್ರಮ, ಸಂಪೂರ್ಣ ಸುರಕ್ಷಾ, ಜನಮಂಗಳ,ಕೃಷಿ ಅನುದಾನ, ಕ್ರಿಟಿಕಲ್ ಸಹಾಯಧನ ಮುಂತಾದ ಕಾರ್ಯಕ್ರಮಗಳನ್ನು ಯೋಜನೆಯ ಕಾರ್ಯಕ್ರಮವಾಗಿ ಮಾಡುತ್ತಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ)ಬಂಟ್ವಾಳ ಇದರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಯೋಜನೆಯ ಪಾಣೆ ಮಂಗಳೂರು ವಲಯದ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಸಜೀಪಮೂಡ, ಗ್ರಾಮ ಪಂಚಾಯತ್ ಸಜೀಪಮೂಡ, ಬ್ರಹ್ಮ ಶ್ರೀ ನಾರಾಯಣ ಮಂದಿರ ಸಜೀಪಮೂಡ, ಎ ಜೆ ಆಸ್ಪತ್ರೆ ಮಂಗಳೂರು ಹಾಗೂ ಸಮುದಾಯ ವಿಭಾಗ ಪಾಣೆ ಮಂಗಳೂರು ಇದರ ಸಹಯೋಗದೊಂದಿಗೆ ಶ್ರೀ ಗುರು ನಾರಾಯಣ ಸಭಾಭವನ ಸಜೀಪಮೂಢ ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಸಜೀಪ ಮೂಡ ಅಧ್ಯಕ್ಷರಾದ ಹರಿಣಾಕ್ಷಿ ವಹಿಸಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸಜೀಪ ಮೂಡದ ಅಧ್ಯಕ್ಷ ರಮೇಶ್ ಉದ್ಘಾಟಿಸಿದರು . ವೇದಿಕೆಯಲ್ಲಿ ಸಜೀಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶೋಬಿತ್ ಪೂಜಾ, ಎ ಜೆ ಆಸ್ಪತ್ರೆ ಮಂಗಳೂರಿನ ಸಮುದಾಯ ವೈದ್ಯಕೀಯ ವಿಭಾಗದ ಡಾ. ವಾಮನ್ ನಾಯಕ್, ದಂತ ವೈದ್ಯೆ ಡಾ. ಸಿತಾರಾ, ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಕಾರ್ಯದರ್ಶಿ ಅಶ್ವಿನ್ ಪೂಜಾರಿ ಕಾರಜೆ ಮೊದಲಾದವರು ಉಪಸ್ಥಿತರಿದ್ದರು.
ಜ್ಞಾನ ವಿಕಾಸ ಸದಸ್ಯೆ ಶೋಭಿತ ಪೂಂಜಾ ಪ್ರಾರ್ಥಿಸಿದರು. ಜ್ಞಾನ ವಿಕಾಸ ಸಮ್ಮನ್ವಾಧಿಕಾರಿ ಶೃತಿ ಸ್ವಾಗತಿಸಿದರು, ಪಾಣೆ ಮಂಗಳೂರು ವಲಯ ಮೇಲ್ವಿಚಾರಕಿ ಶೋಭಿತ್ ನಿರೂಪಿಸಿದರು.






































