ಮಸಾಜ್ ಸೆಂಟರ್ ಗೆ ನುಗ್ಗಿ ದಾಂಧಲೆ: ರಾಮಸೇನೆಯ ಕಾರ್ಯಕರ್ತರ ಬಂಧನ

Picture of RB NEWS

RB NEWS

Bureau Report

ಮಂಗಳೂರು: ಮಸಾಜ್‌ ಸೆಂಟರ್‌ ಗೆ ನುಗ್ಗಿ ದಾಂಧಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ಸೇನೆಯ ಸ್ಥಾಪಕ ಪ್ರಸಾದ್ ಅತ್ತಾವರ ಸಹಿತ 14 ಮಂದಿ ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸುಮಾರು 11:50 ಕ್ಕೆ ಬೆಳಗ್ಗೆ ಬರ್ಕೆ ಪೊಲೀಸ್‌ನಲ್ಲಿ ವ್ಯಾಪ್ತಿಯ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಯುನಿಸೆಕ್ಸ್ ಸೆಲೂನ್ ಗೆ ನುಗ್ಗಿದ 11 ಮಂದಿಯ ಗುಂಪು ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಮಸಾಜ್‌ ಸೆಂಟರ್‌ ಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿಕೋರರು ಅವಾಚ್ಯ ಶಬ್ದಗಳಿಂದ ನಿಂದನೆಗೈದು ಅಲ್ಲಿದ್ದ ಮಹಿಳಾ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದರು.

ಸೆಲೂನ್ ನಲ್ಲಿದ್ದ ಪರಿಕರಗಳನ್ನು ಇದೇ ವೇಳೆಗೆ ಧ್ವಂಸ ಗೈಯಲಾಗಿತ್ತು. ಈ ಕುರಿತು ಸೆಲೂನ್ ಮಾಲಕ ಸುಧೀರ್ ಶೆಟ್ಟಿ ದೂರು ನೀಡಿದರು.

ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ನಿರ್ದಿಷ್ಟ ಪಾತ್ರಗಳು ಬಗ್ಗೆ , ಇತರರು ಶಾಮೀಲಾಗಿರುವ ಕುರಿತು ಮತ್ತಷ್ಟು ಪರಿಶೀಲನೆ ನಡೆಸಲಾಗುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top