ಮಸಾಜ್ ಸೆಂಟರ್ ಗೆ ನುಗ್ಗಿ ದಾಂಧಲೆ: ರಾಮಸೇನೆಯ ಕಾರ್ಯಕರ್ತರ ಬಂಧನ

ಮಂಗಳೂರು: ಮಸಾಜ್ ಸೆಂಟರ್ ಗೆ ನುಗ್ಗಿ ದಾಂಧಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ಸೇನೆಯ ಸ್ಥಾಪಕ ಪ್ರಸಾದ್ ಅತ್ತಾವರ ಸಹಿತ 14 ಮಂದಿ ಆರೋಪಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು : ಬಂಟ್ವಾಳ ತಾಲೂಕು ಪರಂಗಿಪೇಟೆಯ ಹರ್ಷರಾಜ್ @ ಹರ್ಷಿತ್, ವಾಮಂಜೂರು ಮೂಡುಶೆಡ್ಡೆಯ ಮೋಹನ್ ದಾಸ್ @ ರವಿ, ಕಾಸರಗೋಡು ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ವಾಮಂಜೂರು ಉಳಾಯಿಬೆಟ್ಟು ರವೀಶ್, ಬಂಟ್ವಾಳ ತಾಲೂಕು ಬೆಂಜನಪದವಿನ ಸುಕೇತ್, ವಾಮಂಜೂರಿನ ಅಂಕಿತ್, , ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರದ ದೀಪಕ್, ತಾರಿಗುಡ್ಡೆ, ಬೊಂಡಂತಿಲದ ವಿಘ್ನೇಶ್, ಮಂಗಳೂರು ಅಮರ್ ಆಳ್ವ ರಸ್ತೆ, ಮಂಕಿ ಸ್ಟ್ಯಾಂಡ್ನ ಶರಣ್ ರಾಜ್, ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರದ ಪ್ರದೀಪ್ ಪೂಜಾರಿ,ನಿಡ್ಡಲೆ, ಗೋಕರ್ಣ ಪ್ರಸಾದ್ ಅತ್ತಾವರ ಬಂಧಿತರು.
ಗುರುವಾರ ಬೆಳಿಗ್ಗೆ ಸುಮಾರು 11:50 ಕ್ಕೆ ಬೆಳಗ್ಗೆ ಬರ್ಕೆ ಪೊಲೀಸ್ನಲ್ಲಿ ವ್ಯಾಪ್ತಿಯ ಬಿಜೈ ಕೆಎಸ್ಆರ್ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್ನಲ್ಲಿರುವ “ಕಲರ್ಸ್” ಯುನಿಸೆಕ್ಸ್ ಸೆಲೂನ್ ಗೆ ನುಗ್ಗಿದ 11 ಮಂದಿಯ ಗುಂಪು ಏಕಾಏಕಿ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಮಸಾಜ್ ಸೆಂಟರ್ ಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿಕೋರರು ಅವಾಚ್ಯ ಶಬ್ದಗಳಿಂದ ನಿಂದನೆಗೈದು ಅಲ್ಲಿದ್ದ ಮಹಿಳಾ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಹಾಕಿದರು.
ಸೆಲೂನ್ ನಲ್ಲಿದ್ದ ಪರಿಕರಗಳನ್ನು ಇದೇ ವೇಳೆಗೆ ಧ್ವಂಸ ಗೈಯಲಾಗಿತ್ತು. ಈ ಕುರಿತು ಸೆಲೂನ್ ಮಾಲಕ ಸುಧೀರ್ ಶೆಟ್ಟಿ ದೂರು ನೀಡಿದರು.
ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ನಿರ್ದಿಷ್ಟ ಪಾತ್ರಗಳು ಬಗ್ಗೆ , ಇತರರು ಶಾಮೀಲಾಗಿರುವ ಕುರಿತು ಮತ್ತಷ್ಟು ಪರಿಶೀಲನೆ ನಡೆಸಲಾಗುತ್ತಿದೆ.




































