ದಾವಣಗೆರೆ :ಮಾನಸಿಕ ಅಸ್ವಸ್ಥನೊಬ್ಬ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ ಘಟನೆ ದಾವಣಗೆರೆ ನಗರದ ಶಾಮನೂರು ಬಳಿ ನಡೆದಿದೆ.
ಉತ್ತರ ಭಾರತ ಮೂಲದ ಮಾನಸಿಕ ಅಸ್ವಸ್ಥ ಚೇತನ್ ಮೊದಲು ಬಸ್ ನಿಲ್ದಾಣದಲ್ಲಿ ಕತ್ತು ಕೊಯ್ದುಕೊಂಡಿದ್ದನು. ಕೂಡಲೇ ಎಚ್ಚೆತ್ತ ಸ್ಥಳೀಯರು ಚೇತನ್ನನ್ನು ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡುತ್ತಿದ್ದರು. ಇತ್ತ ಆಸ್ಪತ್ರೆಯಿಂದ ಚೇತನ್ ತಪ್ಪಿಸಿಕೊಂಡಿದ್ದನು.
ಆಸ್ಪತ್ರೆಯಿಂದ ತಪ್ಪಿಸಿಕೊಂಡ ಚೇತನ್, ಹೈವೇಯಲ್ಲಿ ನಿಂತುಕೊಂಡು ಹೊಟ್ಟೆಗೆ ಇರಿದುಕೊಂಡಿದ್ದಾನೆ. ಬಳಿಕ ತನ್ನ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆಯೂ ಸ್ಥಳೀಯರು ಚೇತನ್ನನ್ನು ರಕ್ಷಣೆ ಮಾಡಿದ್ದಾರೆ.






































