ಮನೋರೋಗ ಶಾಸ್ತ್ರ ತಜ್ಞ ಡಾ. ವಿಶ್ವನಾಥ್ ಅಲಮೇಲ ಈಗ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಸಮಾಲೋಚನೆಗೆ ಲಭ್ಯಮೂತ್ರ ಶಾಸ್ತ್ರ ತಜ್ಞರು ಈಗ ವಾರದಲ್ಲಿ ಎರಡು ಬಾರಿ ಲಭ್ಯ

Picture of RB NEWS

RB NEWS

Bureau Report

  • ಮನೋರೋಗ ಶಾಸ್ತ್ರ ತಜ್ಞ ಡಾ. ವಿಶ್ವನಾಥ್ ಅಲಮೇಲ ಈಗ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಸಮಾಲೋಚನೆಗೆ ಲಭ್ಯ
  • ಮೂತ್ರ ಶಾಸ್ತ್ರ ತಜ್ಞರು ಈಗ ವಾರದಲ್ಲಿ ಎರಡು ಬಾರಿ ಲಭ್ಯ

ಕಾರ್ಕಳ , 21 ಮಾರ್ಚ್ 2024:ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಪ್ರತೀ ಮಂಗಳವಾರ, ಬುಧವಾರ ಮತ್ತು ಗುರುವಾರ ಮನೋರೋಗ ತಜ್ಞ ವೈದ್ಯರಾದ ಡಾ. ವಿಶ್ವನಾಥ್ ಅಲಮೇಲ ಅವರು ಪ್ರತೀ ಮಂಗಳವಾರ, ಬುಧವಾರ ಮತ್ತು ಗುರುವಾರ ಬೆಳಗ್ಗೆ ಗಂಟೆ 9:30 ರಿಂದ 1:30 ಮತ್ತು ಮಧ್ಯಾಹ್ನ 3:30 ರಿಂದ 6:30 ರವರೆಗೆ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ.

ಮೂತ್ರ ಶಾಸ್ತ್ರ ತಜ್ಞರಾದ ಡಾ ವಿವೇಕ್ ಪೈ ಅವರು ಈಗ ಪ್ರತೀ ಸೋಮವಾರ ಮತ್ತು ಗುರುವಾರ ಮದ್ಯಾಹ್ನ 2.00 ರಿಂದ ಸಂಜೆ 5.00ರವರೆಗೆ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಅವರು ತಿಳಿಸಿದ್ದಾರೆ.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಮನೋರೋಗ ತಜ್ಞರಾಗಿರುವ ಡಾ. ವಿಶ್ವನಾಥ್ ಅಲಮೇಲ ಅವರು, ಖಿನ್ನತೆ ಆತಂಕ, ನಡವಳಿಕೆ ಮತ್ತು ಭಾವನಾತ್ಮಕ ಅಸ್ವಸ್ಥತೆ, ಮತಿವಿಕಲ್ಪ, ಮಾನಸಿಕ ಒತ್ತಡ, ತಿನ್ನುವ ಅಸ್ವಸ್ಥತೆ, ಸ್ಕಿಜೋಫ್ರೇನಿಯಾ, ಮದ್ಯ, ಗಾಂಜಾ ಮತ್ತು ಮಾದಕ ವ್ಯಸನಿಗಳಿಗೆ ಚಿಕಿತ್ಸೆ, ನಿದ್ರೆಯ ತೊಂದರೆಗಳು, ಲೈಂಗಿಕ ಸಮಸ್ಯೆಗಳು, ಪ್ಯಾನಿಕ್ ಅಟ್ಯಾಕ್, ವೃದ್ಧಾಪ್ಯದಲ್ಲಿ ಮೆಮೊರಿ ಸಮಸ್ಯೆಗಳು, ಮಕ್ಕಳಲ್ಲಿ ಹಾಸಿಗೆ ಒದ್ದೆ ಮಾಡುವುದು, ಗಮನ ಕೊರತೆ (ಹೈಪರ್ಆಕ್ಟಿವ್ ಡಿಸಾರ್ಡರ್), ಆಟಿಸಂ, ಸ್ಪೆಕ್ಟ್ರಮ್ ಡಿಸಾರ್ಡರ್, ಮಕ್ಕಳಲ್ಲಿ ವರ್ತನೆಯ ಸಮಸ್ಯೆಗಳು ಹಾಗೂ ಇತರ ಮನೋರೋಗ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಿತರಾಗಿದ್ದಾರೆ.

ಅವರ ಸೇರ್ಪಡೆಯಿಂದ ಕಾರ್ಕಳ ಮತ್ತು ಸುತ್ತ ಮುತ್ತಲಿನ ರೋಗಿಗಳಿಗೆ ಸಕಾಲದಲ್ಲಿ ರೋಗ ನಿರ್ಣಯಮಾಡಿ ಗುಣಮಟ್ಟದ ವೈದ್ಯಕೀಯ ಆರೈಕೆ ನೀಡಲು ಸಹಕಾರಿಯಾಗಲಿದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಖ್ಯಾತ ಮನೋರೋಗ ತಜ್ಞರಾದ ಡಾ ಪಿ ಎಸ್ ವಿ ಎನ್ ಶರ್ಮ ಹಾಗೂ ಡಾ ಅಭಿರಾಮ್ ಪಿ ಎನ್ ಅವರು ಈಗಾಗಲೇ ಪ್ರತೀ ಶನಿವಾರ ಇಲ್ಲಿ ಸಮಾಲೋಚನೆಗೆ ಲಭ್ಯರಿದ್ದು ಅವರ ಜೊತೆಗೆ ಈಗ ಇವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ 9731601150 ಅಥವಾ 08258 230583 ಅನ್ನು ಸಂಪರ್ಕಿಸಬಹುದು.

ಡಾ ಕೀರ್ತಿನಾಥ ಬಲ್ಲಾಳ
ಮುಖ್ಯ ವೈದ್ಯಾಧಿಕಾರಿಗಳು
ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top