ಮದುವೆಯ ಅಮಿಷ: ಅತ್ಯಾಚಾರಕ್ಕೊಳಗಾದ ಕಾರ್ಕಳದ ಯುವತಿ

Picture of RB NEWS

RB NEWS

Bureau Report

ಮಂಗಳೂರು: ಪ್ರಿಯಕರನೊಬ್ಬ ತನ್ನ ಜೊತೆ ಕೆಲಸ ಮಾಡುವ ಕಾರ್ಕಳ ಮೂಲದ ಯುವತಿಯನ್ನು ಮದುವೆಯಾಗುತ್ತೇನೆಂದು ನಂಬಿಸಿ ನಿರಂತರ ಅತ್ಯಾಚಾರ ಮಾಡಿ ಕೊನೆಗೆ ಕೈಕೊಟ್ಟ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಪಾಣೆ ಮಂಗಳೂರು ಶಂಭೂರು ಗ್ರಾಮದ ವಿನೋದ್ ರಾಜ್ ಮದುವೆಯಾಗುತ್ತೇನೆಂದು ಯುವತಿಯ ಜೊತೆ ಸಲುಗೆ ಬೆಳೆಸಿಕೊಂಡು ರಜೆಯ ಸಮಯದಲ್ಲಿ ಯುವತಿಯ ರೂಮ್ ಗೆ ತೆರಳಿ ಬಲತ್ಕಾರವಾಗಿ ನಿರಂತರ ಅತ್ಯಾಚಾರವೆಸಗಿದ ಕುರಿತು ಯುವತಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಆರೋಪಿಯೂ ಯುವತಿಗೆ ಯಾರ ಬಳಿಯೂ ಹೇಳಬೇಡ ನಾನು ಮದುವೆಯಾಗುತ್ತೇನೆ ಎಂದು ನಂಬಿಸಿ ಆಕೆಯ ಇಚ್ಛೆಯ ವಿರುದ್ಧವಾಗಿ ಅತ್ಯಾಚಾರ ಮಾಡಿರುತ್ತಾನೆ. ನಂತರ ಮದುವೆಯ ಪ್ರಸ್ತಾಪ ಮುಂದಿಟ್ಟು ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಸಂತ್ರಸ್ತೆ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ ಹೆಣ್ಣು ನೋಡುವ ಕ್ರಮ ಮಾಡಿ ನಾಟಕ ಮಾಡಿರುತ್ತಾನೆ. 

ಯುವತಿಗೆ ಕೊಲೆ ಬೆದರಿಕೆ : ಇಪತ್ತು ಲಕ್ಷ ವರದಕ್ಷಿಣೆ ಹಾಗೂ ಇಪ್ಪತ್ತು ಗ್ರಾಂ ಚಿನ್ನದ ಬೇಡಿಕೆ ಇಟ್ಟಿರುತ್ತಾನೆ. ಕಡು ಬಡವರಾದ ಯುವತಿಯ ತಾಯಿ ನಾವು ಹೆಣ್ಣು ಕೊಡಲು ಮಾತ್ರ ಸಾಧ್ಯ ಅಂದಾಗ ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ವಿನೋದ್ ರಾಜನ ಮನೆಯವರು ಹೇಳಿದ್ದಾರೆ. ವಿನೋದ್ ರಾಜ್ ಬಗ್ಗೆ ಸಂತ್ರಸ್ತೆ ಹೇಳಿದಾಗ ಅಮ್ಮ ಅಪ್ಪ ನನಗೆ ಮುಖ್ಯ ನಿನ್ನನ್ನು ಮದುವೆ ಆಗಲ್ಲ ನೀನು ಬೇಕಾದರೆ ನನ್ನ ಮೇಲೆ ಕಂಪ್ಲೇಂಟ್ ಕೊಡು ವಕೀಲರನ್ನು ಹಿಡಿದು ನಾನು ಎರಡು ದಿನದಲ್ಲಿ ಜೈಲ್ ನಿಂದ ಹೊರಗೆ ಬರುತ್ತೇನೆ ಮತ್ತೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top