ಮಕ್ಕಳ್ ನೀಧಿ ಮೈಯ್ಯಮ್ ಪಕ್ಷದೊಂದಿಗೆ ಡಿಎಂಕೆ ಮೈತ್ರಿ

Picture of RB NEWS

RB NEWS

Bureau Report

ಚೆನ್ನೈ: ತಮಿಳುನಾಡಿನ ಆಡಳಿತ ಡಿಎಂಕೆ ಪಕ್ಷವು ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮೈಯ್ಯಮ್ ಪಕ್ಷದ ಜೊತೆ ಇಂದು ಒಪ್ಪಂದಕ್ಕೆ ಬಂದಿದೆ.

ಕಮಲ್ ಹಾಸನ್ ಅವರ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ-ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸಲಿದ್ದರೆ 2025 ರಾಜ್ಯಸಭಾ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಒಂದು ಸ್ಥಾನ ನೀಡಲು ಡಿಎಂಕೆ ಒಪ್ಪಿಕೊಂಡಿದೆ.

ಕಮಲ್ ಹಾಸನ್ ಅವರ ಪಕ್ಷಕ್ಕೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಡಿಎಂಕೆ ಸ್ಥಾನ ನೀಡಲಿದೆ ಎಂಬ ನಿರೀಕ್ಷೆಗಳಿದ್ದವು.

ಕಮಲ್ ಹಾಸನ್ ಹಾಗೂ ಡಿಎಂಕೆ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಇಂದು ಡಿಎಂಕೆ ಮುಖ್ಯ ಕಾರ್ಯಾಲಯದಲ್ಲಿ ಎರಡೂ ಪಕ್ಷಗಳ ನಡುವಿನ ಒಪ್ಪಂದವನ್ನು ಅಂತಿಮಗೊಳಿಸಿದರು.

ದೇಶದ ಒಳಿತಿಗಾಗಿ ತಮ್ಮ ಪಕ್ಷ ಡಿಎಂಕೆ ಜೊತೆ ಮೈತ್ರಿ ಸಾಧಿಸಿದೆ ಎಂದು ಕಮಲ ಹಾಸನ್ ಹೇಳಿದ್ದಾರಲ್ಲದೆ ಯಾವುದೇ ಹುದ್ದೆ ಪಡೆಯುವ ಉದ್ದೇಶದಿಂದ ಅಲ್ಲ ಎಂದಿದ್ದಾರೆ.

ಒಪ್ಪಂದದ ಅನುಸಾರ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಹಾಸನ್ ಅವರ ಪಕ್ಷ ಪ್ರಚಾರ ನಡೆಸಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top