ಭಾರೀ ಮಳೆಗೆ ಕೊಂಕಣ ರೈಲು ಸಂಚಾರ ಮೊಟಕು

Picture of RB NEWS

RB NEWS

Bureau Report

ಮಂಗಳೂರು: ಕೊಂಕಣ ರೈಲು ಮಾರ್ಗದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಮುಂದಿನ 14 ಗಂಟೆಗಳ ಕಾಲ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ರತ್ನಗಿರಿ ಸಹಿತ ಹಲವು ಕಡೆಗಳಲ್ಲಿ ಮಣ್ಣು ಕುಸಿತವಾದ್ದರಿಂದ ರೈಲು ಸಂಚಾರ ರದ್ದುಗೊಂಡಿದೆ. ಮಂಗಳೂರು ಎಕ್ಸ್‌ಪ್ರೆಸ್, ಕೊಂಕಣ ಕನ್ಯಾ ಎಕ್ಸ್‌ಪ್ರೆಸ್, ಟ್ಯಟರಿ ಎಕ್ಸ್‌ಪ್ರೆಸ್, ಜನಶತಾಬಿ ಎಕ್ಸ್‌ಪ್ರೆಸ್, ದಿವಾ ಸಾವಂತವಾಡಿ ಎಕ್ಸ್‌ಪ್ರೆಸ್‌, ಸಾವಂತವಾಡಿ ಮಡಗಾಂವ್ ಪ್ಯಾಸೆಂಜ‌ರ್ ರೈಲು ಸೇವೆ ನಿಂತಿದೆ.

ಕರಾವಳಿ ಭಾಗದ 12134 ಸೂಪರ್ ಎಕ್ಸ್‌ಪ್ರೆಸ್ ಛತ್ರಪತಿ ಶಿವಾಜಿ ಮುಂಬೈ ಟರ್ಮಿನಲ್ ರೈಲು ಸಂಚಾರ ಹಾಗೂ 12620 ಮತ್ಯಗಂಧ ಮಂಗಳೂರು ಟು ಮುಂಬೈ ರೈಲು ಸಂಚಾರ ರದ್ದಾಗಿದೆ ಎಂದು ತಿಳಿದು ಬಂದಿದೆ.

ಗೋವಾದ ಕೊಂಕಣ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದ ಪರಿಣಾಮ ಜುಲೈ 10ರಂದು ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿತ್ತು.

ಹಳಿಗಳ ಮೇಲೆ ಗುಡ್ಡ ಕುಸಿತ

ಬೋಗ್ದಾದಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ರೈಲ್ವೆ ಪ್ಲಾಟ್ ಫಾರ್ಮ್‌ನಲ್ಲೇ ರಾತ್ರಿ ಕಳೆಯುವಂತಾಗಿತ್ತು ಎಂದು ಹೇಳಲಾಗಿದೆ. ನೂರಾರು ಪ್ರಯಾಣಿಕರು ಕೊಂಕಣ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವುದಾಗಿ ಯಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top