ಭಾರತೀಯ ಸೇನೆಗೆ ಒಂದು ಲಕ್ಷ ರೂಪಾಯಿ ಹಸ್ತಾಂತರಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆ
RB NEWS
Bureau Report
ಭಾರತೀಯ ಸೇನೆಗೆ ಒಂದು ಲಕ್ಷ ರೂಪಾಯಿ ಹಸ್ತಾಂತರಿಸಿದ ಜ್ಞಾನಸುಧಾ ಶಿಕ್ಷಣ ಸಂಸ್ಥೆ
ಅಜೆಕಾರ್ ಜ್ಞಾನಸುಧಾ : ಪ್ರಥಮ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಅಜೆಕಾರ್ ಪದಗೋಪಾಲ್ ಸಭಾಂಗಣ ಲೋಕಾರ್ಪಣೆ
ಭಾರತೀಯ ಸೇನೆಗೆ ಒಂದು ಲಕ್ಷ ರೂಪಾಯಿ ಹಸ್ತಾಂತರ ಮಾಡುವುದರ ಮೂಲಕ ದೇಶಸುಧಾ ಉದ್ಘಾಟನೆ
ಅಜೆಕಾರು : ಸುಧಾಕರರು ಶೈಕ್ಷಣಿಕ ಕ್ಷೇತ್ರ ಕಂಡ ನಿಜವಾದ ಸುಧಾರಕ : ಕೃಷ್ಣಾಪುರ ಶ್ರೀ ಜನ್ಮ ಭೂಮಿಯನ್ನು ಶ್ರೇಷ್ಠವಾಗಿ ಪರಿಗಣಿಸಿ, ಇಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಿ ತನ್ನ ಹುಟ್ಟೂರಿನ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಬೇಕೆಂಬ ಸಂಕಲ್ಪ ತೊಟ್ಟ ಸುಧಾಕರರು ಶೈಕ್ಷಣಿಕ ಕ್ಷೇತ್ರ ಕಂಡ ನಿಜವಾದ ಸುಧಾರಕ ಎಂದು ಉಡುಪಿಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಅವರು ಅಜೆಕಾರಿನ ಪದ್ಮನಗರದಲ್ಲಿ ನೂತನವಾಗಿ ಆರಂಭಗೊಂಡ ಅಜೆಕಾರ್ ಜ್ಞಾನಸುಧಾ ಅಂಗಮಾಧ್ಯಮ ಪ್ರೌಢಶಾಲೆ ಮತ್ತು ಅಜೆಕಾರ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವನ್ನು ಹಾಗೂ ಅಜೆಕಾರ್ ಪದ್ಮಗೋಪಾಲ್ ಸಭಾಂಗಣವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಆಶೀರ್ವಚನ ನೀಡಿ ಮಾತನಾಡಿದರು. ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು, ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುತ್ತಿರುವುದೇ ಜ್ಞಾನಸುಧಾದ ಹೆಗ್ಗಳಿಕೆಯಾಗಿದೆ. ಈ ಸಂಸ್ಥೆ ರಾಷ್ಟ್ರ ನಿರ್ಮಾಣದ ಬಹುದೊಡ್ಡ ಕಾರ್ಯವನ್ನು ಮಾಡುತ್ತಿದೆ. ಮನುಷ್ಯ ತನ್ನ ಬದುಕಿಗೋಸ್ಕರ ಅನೇಕ ವೃತ್ತಿಗಳನ್ನು ಮಾಡುತ್ತಾನೆ. ಯಾವ ವೃತ್ತಿಯಿಂದ ತಾನು ಬದುಕುತ್ತಾನೋ ಅವನು ಉಳಿದವರನ್ನು ಬದುಕಿಸುತ್ತಾನೆ. ಜೀವನದ ಶ್ರೇಯಸ್ಸಿಗೆ ಸ್ಥಾನವೇ ಮೆಟ್ಟಿಲು. ಜ್ಞಾನ ಅಜ್ಞಾನವನ್ನು ತೊಲಗಿಸಿ ಸರಿಯಾದ ದಾರಿಯನ್ನು ತೋರುಸುತ್ತದೆ. ಇಂದಿನ ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಬದುಕಿಗೆ ಬೇಕಾದ ವಿದ್ಯೆಯನ್ನು ಕಟ್ಟಿಕೊಡುತ್ತಿರುವ ಜ್ಞಾನಸುಧಾದಂತಹ ಶಿಕ್ಷಣ ಸಂಸ್ಥೆಗಳ ಕಾರ್ಯ ಶ್ಲಾಘನೀಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು, ಟ್ರಸ್ಟಿನ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡುವುದರ ಮೂಲಕ ದೇಶಸುಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಒಂದನೇ ಸರಣಿಯಲ್ಲಿ ಬಾಗಲಕೋಟೆಯ ರಂಗಪ್ಪ ಆಲೂರರ ದೇಶಪ್ರೇಮದ ಕುರಿತಾಗಿ ಮಾತನಾಡುತ್ತಾ, ಶಿಕ್ಷಣದ ಜೊತೆಗೆ ದೇಶಭಕ್ತಿಯನ್ನು ನಮ್ಮ ವ್ಯಕ್ತಿತ್ವದೊಂದಿಗೆ ಜೋಡಿಸಿಕೊಂಡಾಗ ರಾಷ್ಟ್ರಮೊದಲು ಎಂಬ ಭಾವ ನಮ್ಮೊಳಗೆ ಮೊಳಗಲು ಸಾಧ್ಯವಿದೆ ಎಂದರು. ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪನಿರ್ದೇಶಕ ಮಾರುತಿಯವರನ್ನು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪರವಾಗಿ ಗುರುತಿಸಿ ಗೌರವಿಸಲಾಯಿತು. ಗೌರವವನ್ನು ಸ್ವೀಕರಿಸಿದ ಮಾತನಾಡಿದ ಮಾರುತಿಯವರು, ಇಡೀ ರಾಜ್ಯಮಟ್ಟದಲ್ಲಿ ಉಡುಪಿ ಜಿಲ್ಲೆಯು ಫಲಿತಾಂಶದಲ್ಲಿ ಅಗ್ರ ಸ್ಥಾನಿಯಾಗಲು ಜ್ಞಾನಸುಧಾದಂತಹ ಶಿಕ್ಷಣ ಸಂಸ್ಥೆಗಳ ಕೊಡುಗೆ ಗಣನೀಯ ಅಂದು ಇಡೀ ನಾಡೇ ಜ್ಞಾನಸುಧಾವನ್ನು ದಾಖಲಾತಿ ಹೊಂದಲು ಹಾತೊರೆಯುತ್ತಿರುವುದಕ್ಕೆ ಕಾರಣ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಒಮ್ಮನಸ್ಸಿನಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಶದ್ಧೆಯಿಂದ ಕೂಡಿದ ಬದ್ಧತೆಯಾಗಿದೆ ಎಂದರು. ಇನ್ನೋರ್ವ ಅತಿಥಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಮಾತನಾಡಿ, ತಂದೆ ತಾಯಿಯವರ ಋಣವನ್ನು ಹೇಗೆ ತೀರಿಸ ಬಹುದು ಎಂಬುದಕ್ಕೆ ಡಾ.ಸುಧಾಕರ್ ಶೆಟ್ಟಿಯವರು ಸಮಾಜಕ್ಕೊಂದು ಮಾದರಿ. ಸಕಾರಾತ್ಮಕ ಆಲೋಚನೆ, ಸಮಾಜಮುಖಿ ಚಿಂತನೆ, ಶಿಕ್ಷಣದಿಂದ ಸಮಾಜಕ್ಕೆ ಸೇವೆ ಗಮನಾರ್ಹವೆಂದರು.
ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ಅನಿಲ್ ಕುಮಾರ್ ಜೈನ್, ಸಿ.ಎ ನಿತ್ಯಾನಂದ ಪ್ರಭು ಹಾಗೂ ಗಗನ್ ಎಸ್ ಶೆಟ್ಟಿ ಆಡಳಿತ ಮಂಡಳಿ ಸದಸ್ಯರಾಸ ಶ್ರೀ ಶಾಂತಿರಾಜ್ ಹೆಗ್ಡೆ, ಮತ್ತು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರುಗಳು ಸಹಿತ ಬೊಧಕ ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಅಂಗ್ಲಭಾಷಾ ಉಪನ್ಯಾಸಕಿ ದರ್ಶಿನಿ ನಿರೂಪಿಸಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಸಂಸ್ಥೆಯ ಹಿನ್ನೋಟದ ಜೊತೆಗೆ ಹಾಗೂ ಅತಿಥಿ ಅಭ್ಯಾಗತರನ್ನು ಪರಿಚಯಿಸಿದರು. ಯಾವುದೇ ಸಾಧನೆಯಾಗ ಬೇಕಾದರೆ ಜ್ಞಾನದ ಮೂಲಕವೇ ಸಾಧ್ಯ ಸ್ನಾನವೇ ಶ್ರೇಷ್ಠವಾನದು ವಿಜಯರನ್ನು ಕೃಷ್ಣ ಭಗವದ್ಗೀತೆಯಲ್ಲಿ ತಿಳಿಸುತ್ತಾನೆ. ಜ್ಞಾನಕ್ಕೆ ಸಮಾನವಾದ ವಸ್ತು ಯಾವುದು ಇಲ್ಲ, ಜೀವನದ ಶ್ರೇಯಸ್ಸಿಗೆ ಜ್ಞಾನವೇ ಮೆಟ್ಟಿಲು. ಆಚ್ಚಾನವನ್ನು ತೊಲಗಿಸಿ ಸರಿಯಾದ ದಾರಿಯನ್ನು ತೋರಿಸುತ್ತದೆ. ಇಂದಿನ ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಬದುಕಿಗೆ ಬೇಕಾದ ವಿದ್ಯೆಯನ್ನು ಕಟ್ಟಿಕೊಡುತ್ತಿರುವ ಜ್ಞಾನಸುಧಾದಂತಹ ಸಂಸ್ಥೆಗಳು ಆದರ್ಶನೀಯ.