ಬೆಳಗಿದ ದೀಪ : ಹೊಸ ಶೈಕ್ಷಣಿಕ ವರ್ಷ ಕಾರ್ಯರಂಭ
ಶಿರ್ತಾಡಿ (ಮೂಡುಬಿದಿರೆ) : ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯು ಮೇ 29 ರಂದು ಹೊಸ ಶೈಕ್ಷಣಿಕ ವರ್ಷವನ್ನು ಹರ್ಷ ಭರಿತವಾಗಿ ಆರಂಭಿಸಿತು.





ಶಾಲಾ ಜಂಟಿ ಕಾರ್ಯದರ್ಶಿ ವಂದನೀಯ ಫಾದರ್ ಹೆರಾಲ್ಡ್ ಮಸ್ಕರೇನಸ್, ಶಾಲಾ ಮುಖ್ಯೋಪಾಧ್ಯಾಯಿನಿ ಬಿಂದು ಮ್ಯಾಕ್ಸಿಂ ಡಿಸೋಜಾ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಗಮಿಸಿದಂತಹ ಅತಿಥಿಗಳು ಮತ್ತು ವಿದ್ಯಾರ್ಥಿಗಳು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಮುಖ್ಯದ್ವಾರವನ್ನು ಹಾಗೂ ತರಗತಿಗಳನ್ನು ಬಣ್ಣ ಬಣ್ಣದ ಬಲೂನ್ ಗಳಿಂದ ಅಲಂಕರಿಸಲಾಗಿತ್ತು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊಸ ಶೈಕ್ಷಣಿಕ ವರ್ಷವನ್ನು ಹೊಸ ಉತ್ಸಾಹದಿಂದ ಸ್ವಾಗತಿಸಿದರು.
ಶಾಲಿನಿ ಡಿಸೋಜಾ ನಿರೂಪಿಸಿದರು. ವಂದನೀಯ ಫಾ. ಹೆರಾಲ್ಡ್ ಮಸ್ಕರೇನಸ್ ಎಲ್ಲರಿಗೂ ಶುಭ ಹಾರೈಸಿ ಆಶೀರ್ವದಿಸಿದರು.
ಮಧುರ ಜೈನ್ ಧನ್ಯವಾದವಿತ್ತರು.





















