ಬೆಲೆ ಏರಿಕೆ ಅನುಗುಣವಾಗಿ ಹೆಚ್ಚಳ ಕೂಲಿ ಸಿಗುತ್ತಿಲ್ಲ

Picture of RB NEWS

RB NEWS

Bureau Report

ಬ್ರಹ್ಮಾವರ: ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಉಡುಪಿ ವಲಯ ಸಮ್ಮೇಳನ(ಉಡುಪಿ, ಕಾಪು,ಬ್ರಹ್ಮವಾರ) ಇಂದು ಬ್ರಹ್ಮವಾರದ ಸಿಐಟಿಯು ಕಛೇರಿ ಸಭಾಂಗಣದಲ್ಲಿ ವೆಂಕಟೇಶ ಕೋಣಿಯವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಮ್ಮೇಳನವನ್ನು ಕರ್ನಾಟಕ ರಾಜ್ಯ ಕೃಷಿಕೂಲಿಕಾರರ ಸಂಘ ( AIAWU) ನ ರಾಜ್ಯ ಅಧ್ಯಕ್ಷ ಪುಟ್ಟುಮಾದು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಸರಕಾರಗಳು ಕೂಲಿಕಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಪ್ರತಿ ವರ್ಷ ಬಜೆಟ್ ಮಂಡನೆ ಮಾಡುತ್ತಾರೆ. ಅದರೆ ಕೂಲಿಕಾರರಿಗೆ ಇವತ್ತು ಯಾವುದೇ ಸವಲತ್ತುಗಳು ಸಿಗುತ್ತಿಲ್ಲ .ಶಾಸಕರು, ಸಂಸದರು,ಅಧಿಕಾರಿಗಳು ಬಜೆಟ್ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ.


ಬೆಲೆ ಏರಿಕೆ ಅನುಗುಣವಾಗಿ ಹೆಚ್ಚಳ ಕೂಲಿ ಸಿಗುತ್ತಿಲ್ಲ.ಅದ್ದರಿಂದ ಕೂಲಿಕಾರರಿಗೆ ರಾಜಕೀಯ ಪ್ರಜ್ಞೆ ಮೂಡಿಸಬೇಕಾಗಿದೆ ಎಂದರು. ನಮ್ಮ ದೇಶದಲ್ಲಿ ಇಂದು ಶೇ. 47ಕಚ್ಚಾಮನೆಗಳು ಹಾಗೂ ಶೇ. 21 ವಸತಿ ರಹಿತರು ಇದ್ದಾರೆ. ಸರಕಾರವು ಜೋಪಾಡಿ ಮನೆಯಲ್ಲಿ, ಬಾಡಿಗೆ ಮನೆಯಲ್ಲಿ ಇರುವ ಕೂಲಿಕಾರರಿಗೆ ಎಲ್ಲರಿಗೂ ರೇಷನ್ ಕಾರ್ಡ್, ಭದ್ರತೆ ಸರಕಾರ ಕೊಡಬೇಕು ಎಂದು ಸಮ್ಮೇಳನದಲ್ಲಿ ಒತ್ತಾಯಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಜೀವ ಬಳ್ಕೂರ್ ಮಾತಾನಾಡಿ, ಇವತ್ತಿನ ಪರಿಸ್ಥಿತಿಯಲ್ಲಿ ಕೂಲಿಕಾರರಿಗೆ ಉಚಿತ ಶಿಕ್ಷಣ, ಆರೋಗ್ಯ ವನ್ನು ಇವತ್ತು ನಮ್ಮನ್ನು ಅಳುವ ಸರಕಾರಗಳು ನೀಡಬೇಕು ಎಂದರು.ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಉಪಾಧ್ಯಕ್ಷ ರಾದ ಸುಭಾಷ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಗೊಲ್ಲ ,ಉಡುಪಿ ಜಿಲ್ಲಾ ಕೃಷಿಕೂಲಿಕಾರರ ಸಂಘ ಕಾರ್ಯದರ್ಶಿ ವೆಂಕಟೇಶ್ ಕೋಣಿ ಪ್ರಾಸ್ತಾವಿಕ ವಾಗಿ ಮಾತಾನಾಡಿದರು. ಕೃಷಿ ಕೂಲಿಕಾರರ ಸಂಘದ ಉಡುಪಿ ವಲಯ ಸಂಚಾಲಕ ಕವಿರಾಜ್. ಎಸ್.ಕಾಂಚನ್,ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top