ಬುಸುಗುಟ್ಟಿದ ಕಾಳಿಂಗ ಸೆರೆ


ಹೆಬ್ರಿ: ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದ ನಾಗೇಶ್ ಎಂಬವರ ಮನೆಯಲ್ಲಿ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದೆ.
ಸಾಮಾಜಿಕ ಕಾರ್ಯಕರ್ತ ಹಾಗೂ ಕಾರ್ಕಳ ಜೆಡಿಎಸ್ ಅಧ್ಯಕ್ಷ ಶ್ರೀಕಾಂತ ಅವರಿಗೆ ಈ ಕುರಿತು ಜೂನ್ 14 ಶುಕ್ರವಾರ ಸಂಜೆ 4.30ಕ್ಕೆ ಕರೆ ಬಂದ ಹಿನ್ನಲ್ಲೆಯಲ್ಲಿ
ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ರವಾಯಿಸಿದರು.
ಆಗುಂಬೆ ಕಾಳಿಂಗ ಸರ್ಪದ ಸಂಶೋಧಕ ಅಜಯ್ ಗಿರಿ ಅವರಿಗೆ ಕಾಲ್ ಮಾಡಿ ಸಂಪರ್ಕಿಸಿದಾಗ ಕೂಡಲೇ ಅವರ ತಂಡದೊಂದಿಗೆ ಸಂಜೆ 6:00ಗೆ ಕೂಚ್ಚೂರಿಗೆ ಆಗಮಿಸಿದರು.
ಸೌದೆ ಕೊಟ್ಟಿಗೆಯೊಳಗೆ ಅವಿತುಕೊಂಡಿದ್ದ ಕಾಳಿಂಗ ಸರ್ಪವನ್ನು ರಾತ್ರಿ 8:30 ಕ್ಕೆ ಕಾಳಿಂಗ ಸರ್ಪವನ್ನು ಜೋಪಾನವಾಗಿ ಸೆರೆ ಹಿಡಿದ ಬಳಿಕ ಸಂಶೋಧಕ ಅಜಯ್ ಗಿರಿ ಕಾಳಿಂಗ ಸರ್ಪಕ್ಕೆ GPSಚಿಪ್ಪನ್ನು ಅಳವಡಿಸಿದ್ದಾರೆ.






































