[t4b-ticker]

ಬಿ.ಕೆ.ಹರಿಪ್ರಸಾದ್ ಗೆ ಸ್ಪಂದಿಸದ ತವರು ಜಿಲ್ಲೆ

Picture of RB NEWS

RB NEWS

Bureau Report

ಬಿ.ಕೆ.ಹರಿಪ್ರಸಾದ್ ಗೆ ಸ್ಪಂದಿಸದ ತವರು ಜಿಲ್ಲೆ

ಬಿ. ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷನಾಗಿ ಆಯ್ಕೆಗೊಂಡಾಗಿಂದಲೂ ದ. ಕ. ,ಉಡುಪಿ ಜಿಲ್ಲಾ ಕಾಂಗ್ರೆಸ್ಸ್ ಕಾರ್ಯಕರ್ತರುಗಳಲ್ಲಿ ,ನಾಯಕರಗಳಲ್ಲಿ ಅಂಥದ್ದೇನು ವಿಶೇಷವಾದ ಸಂತಸ,ಉತ್ಸಾಹ ಹಾಗೂ ನಿರೀಕ್ಷೆಯ ವಾತಾವರಣ ಕಂಡುಬರಲಿಲ್ಲ. ಇನ್ನು ಬಿಲ್ಲವ ಸಮುದಾಯವೂ ಕೂಡ ಹುಚ್ಚೆದ್ದು ಕುಣಿದಾಡಲಿಲ್ಲ.
ಬಿ. ಜನಾರ್ದನ ಪೂಜಾರಿ ಕೆಪಿಸಿಸಿ ಅಧ್ಯಕ್ಷರಾದಾಗ ಖುಷಿಪಟ್ಟ ಕಾಂಗ್ರೆಸ್ಸಿಗರು ಹರಿಪ್ರಸಾದ್ ಆಗುವಾಗ ವಿಚಾರವೇ ಗೊತ್ತಿಲ್ಲದವರಂತೆ ನಡೆದುಕೊಂಡಿದ್ದಾರೆ.

ಬಿಜೆಪಿಯು ವಶಪಡಿಸಿಕೊಂಡು ಮನಪರಿವರ್ತನೆ ಮಾಡುವವರೆಗೆ ಕರಾವಳಿಯ ಕಾಂಗ್ರೆಸ್ಸಿನ ಶಕ್ತಿ ಮತ್ತು ನಾಯಕತ್ವ,ಶಾಸಕ ಸಂಖ್ಯೆ ಎಲ್ಲದರಲ್ಲೂ ಬಿಲ್ಲವರೇ ಕಾಣುತ್ತಿದ್ದರು . ಇತ್ತೀಚಿನ ದಶಕಗಳಲ್ಲಷ್ಟೆ ಬಿಜೆಪಿಯು ಭಜನೆಯನ್ನು ಹಿಂದುತ್ವದ ಟ್ರಂಪ್ ಕಾರ್ಡನ್ನಾಗಿಸಿ ಬಿಲ್ಲವರು,ದಲಿತರುಗಳ ಮನೆಮನೆಗೆ ಭೇಟಿ ನೀಡಿ ಅವರ ಕೈಗೆ ತಾಳ ಮತ್ತು ಹೆಗಲಿಗೆ ಶಾಲು ಕೊಟ್ಟು ರಸ್ತೆಗಿಳಿಸಿ ಇಡೀ ಸಮುದಾಯವೇ ಕಾಂಗ್ರೆಸ್ಸಿಗೆ ಬೆನ್ನು ಹಾಕಿ ಜೈ ಶ್ರೀರಾಮ್ ಉಧ್ಘೋಷಿಸುವಂತೆ ಮಾಡಿತು. ಆ ಕಾರ್ಯಕ್ರಮದಿಂದ ಉಭಯ ಜಿಲ್ಲೆಯಲ್ಲಿನ ಕಾಂಗ್ರೆಸ್ ಉಮೇದುವಾರರನ್ನು ಚಾಪೆ ಸಮೇತ ಮಡಚಿ ಅಟ್ಟಕ್ಕೇರಿಸುವಲ್ಲಿ ಬಿಜೆಪಿಗೆ ಸಾಧ್ಯವಾಯಿತು.
ಬಿಕೆಹರಿಪ್ರಸಾದ್ ಅವರು ಎಐಸಿಸಿಗೆ ಅಷ್ಟೊಂದು ನಿಕಟವರ್ತಿಯಾಗಿದ್ದವರಾಗಿಯೂ ದ. ಕ. ಮತ್ತು ಉಡುಪಿ ಜಿಲ್ಲೆಯ ಯುವಕರನ್ನು,ನಾಯಕರನ್ನು ಪಕ್ಷದ ಮುಖೇನ ಯಾರನ್ನೂ ಬಿಕೆ ಹೆಚ್ ಪ್ರಸಾದ್ ಮೇಲೆತ್ತಿಲ್ಲ. ಆಸ್ಕರ್ ಫೆರ್ನಾಂಡಿಸ್ ಕಾರಣದಿಂದಷ್ಟೇ ಅನೇಕರು ಪಕ್ಷದಲ್ಲಿ ಬೆಳೆದಿದ್ದಾರೆ, ಸ್ಥಾನಮಾನ ಪಡೆದಿದ್ದಾರೆ ನಿರೀಕ್ಷೆಗೂ ಮೀರಿದ ಬಗೆಗಳಲ್ಲಿ ಅನುಕೂಲಸ್ತರಾಗಿದ್ದಾರೆ. ಆ ವಿಚಾರದಲ್ಲಿ ಹರಿಪ್ರಸಾದರಿಂದ ಒಬ್ಬನೂ ಪಕ್ಷದ ಹುದ್ದೆಯಲಾಭ ಪಡೆಯುವುದಕ್ಕೆ ಸಾಧ್ಯವಾಗಲಿಲ್ಲ.ಅವರು ದ. ಕ. ಜಿಲ್ಲೆಯ ಬಂಟವಾಳದವರು ಎನ್ನುವ ಪರಿಚಯ ಬಹುಶಃ ಜಿಲ್ಲೆಯವರಿಗೆ ಗೊತ್ತಾಗಿರುವುದೇ ಕಳೆದ ಸಿದ್ಧರಾಮಯ್ಯ ಸರಕಾರದಲ್ಲಿ ತರಹೇವಾರಿ ಮಾತು ಸುದ್ದಿಗೆ ಬಂದಾಗಲಷ್ಟೆ.
ವೀರಪ್ಪ ಮೈೂಲಿಯವರು ಕೂಡ ಅನೇಕರಿಗೆ ಬೆಂಬಲ ಕೊಟ್ಟಿದ್ದಾರೆ. ಕೆ. ಅಭಯಚಂದ್ರ ಜೈನ್ ಅವರನ್ನು ಪರಿಷತ್ತಿಗೆ ನೇಮಿಸಿದ್ದಾರೆ. ಜನಾರ್ದನ ಪೂಜಾರಿ,ರಮಾನಾಥ ರೈಗಳೂ ಸಹ ಅನೇಕರನ್ನು ಬೆಂಬಲಿಸಿದ್ದಾರೆ. ತನ್ನ ಸಹೋದರನ ಮಗ ರಕ್ಷಿತ್ ಶಿವರಾಮಗೆ ಬೆಳ್ತಂಗಡಿಯಲ್ಲಿ ವಿಧಾನಸಭೆಗೆ ಸ್ಪರ್ಧಿಸುವುದಕ್ಕೆ ಪಕ್ಷದ ಟಿಕೆಟ್ ಕೊಡಿಸಿದ್ದೇ ಒಂದು ಹರಿಪ್ರಸಾದಾ ಸಾಧನೆ ಬಿಟ್ಟರೆ ಬೇರೇನೂ ಇಲ್ಲ,ನಥಿಂಗ್! ಆತನನ್ನು ಗೆಲ್ಲಿಸುವ ಪ್ರಯತ್ನವೂ ಹರಿಪ್ರಸಾದರಿಂದ ಆಗದ್ದು ದೊಡ್ಡ ವೈಫಲ್ಯ ಮತ್ತು ತಾಕತ್ತಿನ ಹಿನ್ನಡೆ. ಮಂದಿನ ಚುನಾವಣೆಯಲ್ಲಿ ಯು. ಟಿ. ಖಾದರ್ ಅವರು ಗಳಿಸು ಮತಗಳಲ್ಲಿ ಭಾರೀ ಹಿನ್ನಡೆಯಾಗುತ್ತದೆ.ಅದಕ್ಕೆ ಕಾರಣ ಬಿಕೆ ಹರಿಪ್ರಸಾದ್ ಆಗುತ್ತಾರೆ. ಖಾದರ್ ಅವರು ಕೋಲ ,ಬಲಿ,ಅಂಕ,ಆಯನ,ದರ್ಶನ,ರಥೋತ್ಸವ ಎಲ್ಲ ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಭಕ್ತನಾಗಿತ್ತಿರುವಾಗ ಬಿಕೆ ಹರಿಪ್ರಸಾದ್ ಅವರ ಶಾಲು ಬೇಡ ಕುಂಕುಮ ಬೇಡ ಮಾತುಗಳ ಪರಿಣಾಮವೇನಾಗಬಹುದು?

ಇನ್ನು ದ. ಕ. ,ಉಡುಪಿ ಜಿಲ್ಲೆಯ ಕಾಂಗ್ರೆಸ್ಸಿಗರು ಕಾಂಗ್ರೆಸ್ ಬಗ್ಗೆ ಭ್ರಮನಿರಸನರಾಗಿದ್ದಾರೆ. ಉಡುಪಿ ಜಿಲ್ಲೆಯವರನ್ನಂತೂ ಕೆಪಿಸಿಸಿ ಯು ಅಕ್ಷರಶಃ ಮೂಲೆಗೆ ದೂಡಿಟ್ಟಿದೆ. ದುಡಿಯುವವನಿಗೂ ಕಿಮ್ಮತ್ತಿಲ್ಲ,ದುಡಿದವನಿಗೂ ಗೌರವವಿಲ್ಲವಾಗಿದ್ದರಿಂದಲೇ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕೊರಗಿ ಸೊರಗಿದ್ದು. ಆಸ್ಕರ್ ಫೆರ್ನಾಂಡಿಸ್ ನಂತರದ ಉಡುಪಿಯ ಕಾಂಗ್ರೆಸ್ ಅದು ಬ್ರಹ್ಮಗಿರಿಗಷ್ಟೇ ಸೀಮಿತವಾಗಿಬಿಟ್ಟಿತು. ವಿನಯ ಕುಮಾರ್ ಸೊರಕೆ ,ಮಂಜುನಾಥ ಪೂಜಾರಿ ಮತ್ತು ಮುನಿಯಾಲು ಉದಯ ಕುಮಾರ್ ಶೆಟ್ಟಿಯಿಬ್ಬರುಗಳಿಂದಷ್ಟೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾಣುವಂತಾಗಿದೆ.
ದ. ಕ. ಜಿಲ್ಲೆಯಲ್ಲಿ ಕೆ. ಹರೀಶ್ ಕುಮಾರ್ ಅವರನ್ನೇ ಮುಂದುವರಿಸುತ್ತ,ಅವರನ್ನೇ ಪರಿಷತ್ತಿಗೆ ನೇಮಕ ಮಾಡುತ್ತ,ಅವರಿಗೇ ಸಚಿವ ಸ್ಥಾನಮಾನ ಹುದ್ದೆ ಕೊಡುತ್ತ ದಶಕಗಳ ಕಾಲ ಪಕ್ಷವನ್ನು ಹಾಳು ಮಾಡಿದ ಕೆಪಿಸಿಸಿ ಇನ್ನೇನು ಅವರನ್ನು ಅಪರ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡುವುದೊಂದೇ ಬಾಕಿಯಿರಿಸಿದೆ.

ಹೇಳಿ ಕೇಳಿ ಕರಾವಳಿ ಜಿಲ್ಲೆಗಳು ಭಕ್ತಿ ಪ್ರಧಾನ ಊರು. ಮನೆಯಂಗಳದ ತುಳಸಿ ಕಟ್ಟೆಯಿಂದ ದೂರದ ದೇವಸ್ಥಾನ,ಮಠ,ಸ್ವಾಮೀಜಿಗಳನ್ನು ಅಪಾರ ಶ್ರದ್ದೆ ಭಕ್ತಿಯಿಂದ ಗೌರವಿಸುವವರು. ಆಸ್ತಿಕನೂ ಅಲ್ಲ ನಾಸ್ತಿಕನೂ ಅಲ್ಲದವರಂತೆ ಧರ್ಮ ಮತ್ತು ಸ್ವಾಮಿಗಳ ಬಗ್ಗೆ ಖಾರವಾಗಿ ಟೀಕೆ ಮಾಡುತ್ತಿರುವ ಬಿಕೆ ಹರಿಪ್ರಸಾದರನ್ನು ಈ ಜಿಲ್ಲೆಯವರು ಸ್ವೀಕರಿಸುವುದಿಲ್ಲ.ರಾಜ್ಯದ ಹೆಚ್ಚಿನ ಮೂಲೆಗಳವರಿಗೂ ಪಥ್ಯವಾಗುವುದಿಲ್ಲ ಕೂಡ.
ವಿಧಾನಪರಿಷತ್ತಿಗೆ ಆರಿಸುವಲ್ಲಿಯೂ ಪಕ್ಷಕ್ಕೆ,ಸಮಾಜಕ್ಕೆ ದುಡಿದವರನ್ನು ಗುರುತಿಸಿದ್ದೇ ಇಲ್ಲ. ದ. ಕ ಮತ್ತು ಉಡುಪಿ ಎರಡು ಜಿಲ್ಲೆಯಲ್ಲಿ ಬಿಜೆಪಿಯ ಮತದಾರರೇ ಇರುವುದು ಎಂದು ಲೇವಡಿ ಮಾಡುತ್ತ, ಜಿಲ್ಲೆಯವರನ್ನು ಡೋಂಟ್ ಕೇರ್ ಮಾಡುತ್ತಲೇ ಕಾಂಗ್ರೆಸ್ ಬಂದಿದೆ.

ವಿನಯಕುಮಾರ_ಸೊರಕೆ ಕೆಪಿಸಿಸಿ ಅಧ್ಯಕ್ಷನಾಗಿದ್ದರೆ ಎಲ್ಲ ಕಾರ್ಯಕರ್ತರಲ್ಲಿ, ಒಟ್ಟಾರೆಯಾಗಿ ರಾಜ್ಯ ಮಟ್ಟದಲ್ಲಿ ಮಂದಹಾಸ ಬೀರುತ್ತಿತ್ತು ,ಉತ್ಸಾಹ ಉಲ್ಬಣಿಸುತ್ತಿತ್ತು ಅನ್ನುವುದಂತೂ ಸತ್ಯ. ಯಾರೊಡನೆಯೂ,ಯಾವ ಮಂದಿರ ಮಠ ಸ್ವಾಮೀಜಿಯವರೊಡನೆಯೂ ನೋಯಿಸುವ ಮಾತಾಗಲಿ,ಧರ್ಮಕ್ಕೆ ಅಪಚಾರವಾಗುವ ಮಾತನ್ನಾಗಲಿ ಬಹುಶಃ ಎಂದಿಗೂ ಆಡಿರದ ಕಾಂಗ್ರೆಸ್ಸಲ್ಲಿದ್ದೂ ಹಿಂದೂ ಸಮಾಜ,ಧಾರ್ಮಿಕ ನಂಬಿಕೆ , ಕಟ್ಟುಕಟ್ಟಳೆ ,ಸಂಪ್ರದಾಯಗಳನ್ನು ಸಾರ್ವಜನಿಕರ ಅಭಿಪ್ರಾಯದಂತೆಯೇ, ಅನುಕರಣೆಗೆ ಅಡ್ಡಿಯಾಗದಂತೆಯೇ ಬೆಳೆದು ಬಂದ ಒಬ್ಬ ಸಾತ್ವಿಕ ರಾಜಕಾರಣಿಯಾಗಿದ್ದಾರೆ. ವಯಸ್ಸು ಅರ್ವತ್ತೈದು ದಾಟಿದವರಾಗಿದ್ದರೂ ಯುವಕನಂತೆಯೆ ಕಾಣುವ,ಪಾದರಸದಂತೆಯೇ ಓಡಾಡುವ ಜನಾದರಣೀಯ ರಾಜಕಾರಣಿಯಾಗಿದ್ದಾರೆ.

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಲ್ಲಿನ ಹಿಂದೂ ಶ್ರದ್ಧೆ ಭಕ್ತಿ ಇತ್ಯಾದಿಗಳಿಗೆ ಸರಿ ದಿಕ್ಕಿನಲ್ಲಿ ಹೋಗಲನುಕೂಲವಾಗುವ ಪಕ್ಷಾಧ್ಯಕ್ಷನಾಗುತ್ತಿದ್ದರು. ಕರಾವಳಿ ಜಿಲ್ಲೆಯಲ್ಲಂತೂ ಹೊಸ ಗಾಳಿ ಬೀಸುವುದು ಖಂಡಿತವಾಗುತ್ತಿತ್ತು.

ಮಾಜಿ ಮುಖ್ಯಮಂತ್ರಿ ಕೆಪಿಸಿಸಿ ಅಧ್ಯಕ್ಷನ ಆಯ್ಕೆ ಹಿಂದೆ ಸಿದ್ಧರಾಮಯ್ಯನವರು ಬಹಳ ದೊಡ್ಡ ತಪ್ಪು ಮಾಡಿದ್ದಾರೆ ಅನ್ನುವುದನ್ನು ಬೇರೆ ಬರೆಯಬೇಕಾಗಿಲ್ಲ.

-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top