ಮಳೆಗಾಲದ ಗಿಫ್ಟ್…!
ಮಾರುಕಟ್ಟೆಗೆ ಪ್ರವೇಶಿಸಿದ ಕಲ್ಲಣಬೆ:
ಸುರಿಯುತ್ತಿರುವ ಮಳೆಯ ಅಬ್ಬರ…! ಒಂದಷ್ಟು
ಗುಡುಗಿನ ಸದ್ದು…! ಮುಂಗಾರು ಮಳೆಯ
ಸಿಂಚನವಾಗುತ್ತಿದ್ದoತೆ…. ಕಾರ್ಕಳ ಪೇಟೆಯ
ಮಾರುಕಟ್ಟೆಗೆ ಬಂದಿದೆ ಕಲ್ಲಣಬೆ…!
ಬಾನೆತ್ತರದ ಗುಡುಗಿನ ಸದ್ದಿಗೆ ಭೂತಳದಲ್ಲಿ ಹುಟ್ಟಿಕೊಳ್ಳುತ್ತದೆ ಗುಂಡು ಕಲ್ಲಿನ ಆಕಾರದಲ್ಲಿ ಇರುವ ಇವುಗಳನ್ನು ಕಲ್ಲಲಾಂಬು ಯಾ ಕಲ್ಲಣಬೆ ಎಂದು ಹೆಸರಿಸುತ್ತಾರೆ.
ಸಸ್ಯಹಾರಿ ಹಾಗೂ ಮಾಂಸಹಾರಿಗಳಿಗೆ ಇದರ ಖಾದ್ಯ ಬಲು ಇಷ್ಟ. ಮಳೆಗಾಲದ ಆರಂಭದಲ್ಲಿ ಪ್ರಾಕೃತಿಕವಾಗಿ ಬೆಳೆಯುವ
ಕಲ್ಲಲಾಂಬು ಯಾ ಕಲ್ಲಣಬೆ ವಿರಳವಾಗಿದ್ದರೂ ಅದರ ಬೆಲೆ ಮಾತ್ರ ಕೊಂಚ ಜಾಸ್ತಿಯೂ ಆಗಿದೆ.
ವಾಡಿಕೆ ಪ್ರಕಾರ ಸಿಡಿಲು ಸಹಿತ ಮಳೆಗಾಲ ಆರಂಭವಾಗಿ
ತರಗೆಲೆಗಳು ಕೊಳೆಯುವ ಸ್ಥಿತಿ ತಲುಪುತ್ತಿದ್ದಂತೆ ಈ
ಕಲ್ಲಣಬೆ ತಲೆಯೆತ್ತಲಾರಂಭಿಸುತ್ತದೆ. ಆದರೆ ಈ ಬಾರಿ ಅತೀ
ಬೇಗನೇ….ಮಳೆಯ ಸೀಸನ್ ಮುನ್ನವೇ ಕಾರ್ಕಳ
ತಾಲೂಕಿನ ರೆಂಜಾಳ ಭಾಗದಿಂದ ಈ ಕಲ್ಲಣಬೆ ಕಾರ್ಕಳ
ಪೇಟೆಯನ್ನು ಪ್ರವೇಶಿಸಲಾರಂಭಿಸಿದೆ. ಪ್ರಪ್ರಥಮವಾಗಿ
ಮಂಗಳವಾರ ಬಂದ ಈ ಕಲ್ಲಣಬೆಗೆ ದರವೇ ನಿಗದಿಯಾಗಿಲ್ಲ.
ಬಲು ಅಪರೂಪದ ಈ ರುಚಿಕರವಾದ ಕಲ್ಲಣಬೆಯನ್ನು
ಖರೀದಿಸಲು ಜನತೆ ಮುಗಿ ಬಿದ್ದಿರುವುದು ಕಂಡು ಬಂದಿತ್ತು.
ಕೊನೆಗೆ ಕೆ.ಜಿ.ಗೆ ೩೦೦ರಂತೆ ಆರಂಭಿಕ ದರ ನಿಗದಿಯಾಗಿತ್ತು.
ಪಶ್ಚಿಮಘಟ್ಟ ತಪ್ಪಲು ಪ್ರದೇಶದ ಗ್ರಾಮಗಳಲ್ಲಿನ
ಹಾಡಿಗಳಲ್ಲಿ ಅಣಬೆ ದೊರೆಯುವುದು ವಿಶೇಷವಾಗಿರುವುದರಿಂದ
ಬೇಡಿಕೆ ಹೆಚ್ಚಿದೆ. ಪ್ರಕೃತಿಯ ಸಹಜ ಪ್ರಕ್ರಿಯೆಯಿಂದ
ಉದಯಿಸುವ ಈ ಅಣಬೆ, ರುಚಿಕರವಾಗಿದ್ದು, ಅಂತರರಾಜ್ಯ ಮತ್ತು
ವಿದೇಶದಲ್ಲಿ ನೆಲೆಸಿರುವ ಈ ಭಾಗದ ಜನತೆಯ ಮನೆಗಳಿಗೂ
ಈ ಅಣಬೆ ರವಾನೆಯಾಗುವುದುಂಟು. ಆದರೆ ಅತೀ ಕಡಿಮೆ ದಿ
ನಗಳ ಕಾಲ ಬಾಳುವ ಈ ಅಣಬೆ ಮಾಂಸ ಮತ್ತು ಸಸ್ಯಹಾರಕ್ಕೆ
ಪರ್ಯಾಯವಾದ ಆಹಾರ ಎಂಬುವುದು ಕೂಡಾ ಇನ್ನೊಂದು
ವೈಶಿಷ್ಟö್ಯ
ಕಿಲೋ..ಗೆ ೮೦೦…!
ಮಾರಾಟಕ್ಕೆ ಬಂದದ್ದೆ ಬರೇ ೩ ಕೆ.ಜಿ. ಕಳೆದ ವರ್ಷದ ಆರಂಭದ
ದರದಂತೆ ಈ ಬಾರಿಯೂ ೮೦೦ರೂ. ದರ ನಿಗದಿಯಾಗಿದೆ.
ಆದರೂ ಬೇಕೆಂದಾಗೆ ಸಿಗದ ಈ ಕಲ್ಲಣಬೆಗೆ ಬೇಡಿಕೆಯಂತು
ಅಷ್ಟಿಯಿಷ್ಟಲ್ಲ. ಮುಂಗಡವಾಗಿ ಬುಕ್ಕಿಂಗ್ ಮಾಡಿದರೂ ಕಳೆದ
ವರ್ಷವೇ ನಿರೀಕ್ಷಿತವಾದ ಕಲ್ಲಣಬೆ ಪೇಟೆಗೆ ಬಂದಿಲ್ಲ. ಆದರೆ ಈ
ವರ್ಷ ಏನು ? ಎಂಬುವುದು ಮುಂದಿನ ದಿನಗಳಲ್ಲಿ
ತಿಳಿದುಕೊಳ್ಳಬೇಕಾಗಿದೆ.
ಹೆಕ್ಕುವವರೇ ಇಲ್ಲ :
ಗುಡ್ಡ ಕಾಡು ಪ್ರದೇಶದಲ್ಲಿ ತರಗೆಲೆಗಳು ಕೊಳೆತ
ಸ್ಥಳಗಳಲ್ಲಿ, ಅದರಲ್ಲೂ ಬೋಗಿ ಮರಗಳ ಬುಡಭಾಗದಲ್ಲಿ,
ಜತೆಗೆ ಒಂದು ರೀತಿಯ ಮರಳು ವಿಧದ ಮಣ್ಣಿನಲ್ಲಿ ಈ
ಕಲ್ಲಣಬೆ ತಲೆ ಎತ್ತುತ್ತದೆ. ಅದನ್ನು ಹುಡುಕುವುದೂ
ಕೂಡಾ ಒಂದು ಕಲೆಯ ಹೌದು. ಈ ಕಲ್ಲಣಬೆಗಳು ಎಲ್ಲಿ
ಹುಟ್ಟುತ್ತದೆ ಎನ್ನುವ ಬಗ್ಗೆ ಮಾಹಿತಿಯಿರುವವರು ಮಾತ್ರ,
ಹೆಕ್ಕ ಬಲ್ಲರು. ಹಳೆಯ ತಲೆ ಮಾರಿನ ಹಿರಿಯರು ಅದನ್ನು
ಗುರುತಿಸಿ ಹೆಕ್ಕಿ ವ್ಯಾಪಾರ ನಿರ್ವಹಿಸುತ್ತಿದ್ದಾರೆ ಹೊರತು,
ಹೊಸಬರು ಅತ್ತಾ ಆಸಕ್ತಿ ವಹಿಸುತ್ತಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಹಲವೆಡೆ ಧಾರಳ ಕಲ್ಲಣಬೆ
ಸಿಗುತ್ತಿದ್ದರೂ, ಅದನ್ನು ಹೆಕ್ಕಿ ಶುಚಿಗೊಳಿಸಿ ಪೇಟೆಗೆ
ತರುವವರ ಸಂಖ್ಯೆಯೂ ಕಡಿಮೆಯಾಗುತ್ತಿರುವ ಹಿನ್ನೆಲೆ
ಕೂಡಾ ಕಲ್ಲಣಬೆಯನ್ನು ಅಪರೂಪದತ್ತಾ ಕೊಂಡೊಯ್ದಿದೆ.
ಕಳೆದ ವರ್ಷ ದರ ಕುಸಿದಿಲ್ಲ:
ಕಳೆದ ಸಾಲಿನಲ್ಲಿ ಆರಂಭದಲ್ಲಿ ಕೆ.ಜಿ.ಗೆ ೩೦೦ರೂ. ದರವಿತ್ತು. ಆ
ದರವೇ ನಿರಂತರ ಮುಂದುವರೆದಿತ್ತು. ಸಾಧಾರಣ
ಪ್ರಮಾಣದ ಕಲ್ಲಣಬೆ ಬಂದಿದ್ದರೂ, ಕೊಂಡೊಯ್ಯುವವರ
ಸಂಖ್ಯೆ ಮಾತ್ರ ಇಳಿಮುಖವಾಗದ ಹಿನ್ನೆಲೆಯಲ್ಲೇ ಅದೇ
ದರವನ್ನು ಕೊನೆಯವರೆಗೂ ಉಳಿಸಿಕೊಂಡಿತ್ತು. ಆದರೆ ಈ
ವರ್ಷ.. ಮಾತ್ರ ಆರಂಭಿಕ ದರಕ್ಕಿಂತಲೂ ದುಪ್ಪಟ್ಟುವಾಗುವ
ಸಾಧ್ಯತೆಗಳು ದಟ್ಟವಾಗಿದೆ.
ಈ ಬಾರಿ ಸೀಸನ್ ಮುನ್ನವೇ ಕಲ್ಲಣಬೆ ಬೇಕು ಎಂಬ ಬೇಡಿಕೆ ಫೋನ್
ಕರೆಗಳ ಮೂಲಕ ಬರುತ್ತಿದೆ. ಆದರೆ ಅಂಗಡಿಗೆ ಬಂದರೆ
ನೀಡುತ್ತೇವೆ ಎನ್ನುವ ಉತ್ತರ ನನ್ನದ್ದು. ಗ್ರಾಮೀಣ
ಪ್ರದೇಶದಿಂದ ಯಥೇಚ್ಛವಾಗಿ ಬಂದರೆ ಮಾತ್ರ ಬೇಡಿಕೆ
ಪೂರೈಸಬಹುವುದು ಎನ್ನುತ್ತಾರೆ ಹಣ್ಣುಹಂಪಲು ವ್ಯಾಪಾರಿ ವಿವೇಕಾನಂದ ಶೆಣೈ ಕಾರ್ಕಳ.






































