ಬಸ್ಸಿನಲ್ಲಿ ಬಾಲಕಿಗೆ ಕಿರುಕುಳ: ಮಹಿಳೆಯರಿಂದ ತಪರಾಕಿ

Picture of RB NEWS

RB NEWS

Bureau Report

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮುಂದಿನ ಸೀಟಿನಲ್ಲಿ ಕುಳಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಟೋಪಿವಾಲನಿಗೆ ಮಹಿಳಾ ಪ್ರಯಾಣಿಕರು ಹಣ್ಣುಕಾಯಿ- ನೀರುಕಾಯಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರುಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

   ಬಸ್ಸಿನ  ಮುಂದಿನ ಸೀಟಿನಲ್ಲಿ ಕುಳಿತ  ಅಪ್ರಾಪ್ತ ಯುವತಿಗೆ ಕಿರುಕುಳ ಕೊಟ್ಟಿದ್ದಾನೆಂದು ಆರೋಪಿಸಿ ಮಹಿಳಾ ಪ್ರಯಾಣಿಕ ಥಳಿಸಿದ ಘಟನೆ ನಡೆದಿದೆ. 

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಹಾಸನದಿಂದ ಹತ್ತಿದ್ದ  ವ್ಯಕ್ತಿ ಮುಂದಿನ ಸೀಟಿನಲ್ಲಿ ಅಮ್ಮ ಹಾಗೂ ಇಬ್ಬರು ಮಕ್ಕಳು ಕುಳಿತಿದ್ದರು. ಬಸ್ ಹೋಗುತ್ತಿರುವಾಗ ಮುಂಬದಿ ಸೀಟಿನಲ್ಲಿ ಕುಳಿತಿದ್ದ ಅಪ್ರಾಪ್ತ ಬಾಲಕಿಗೆ ಸೀಟಿನ ಕೆಳಭಾಗದಿಂದ ಕೈ ಹಾಕಿ ಕಿರುಕುಳ ನೀಡಿದ್ದಾನೆ. ಇದರಿಂದ ಮೂರ್ನಾಲ್ಕು ಬಾರಿ ಅಸಹವಾಗಿ ಆಗಿರಬಹುದು ಎಂದು ಸುಮ್ಮನಿದ್ದಾಳೆ. ನಂತರ ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ. ಬಾಲಕಿಯ ತಾಯಿ ಒಮ್ಮೆ ಗುರಾಯಿಸಿ ನೋಡಿ ಸುಮ್ಮನಾಗಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಆ ವ್ಯಕ್ತಿ ಪುನಃ ಸೀಟಿನ ಸಂದಿಯಲ್ಲಿ ಕೈ ತೂರಿಸಿ ಕಿರುಕುಳ ನೀಡಿದ್ದಾನೆ. ಇದನ್ನು ಸಹೊಸದ ಬಾಲಕಿಯ ತಾಯಿ ಬಂದು ಬೈದು ನೀನ್ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾಳೆ.

ಆಗ ನನ್ನಿಂದ ತಪ್ಪಾಯ್ತು, ಇನ್ಮೇಲೆ ಹೀಗೆ ಮಾಡೊಲ್ಲ ಎಂದು ಹೇಳಿ ಕೈಮುಗಿದು ಬೇಡಿಕೊಂಡಿದ್ದಾನೆ.  ಆಗ ಅಕ್ಕಪಕ್ಕದಲ್ಲಿದ್ದವರೆಲ್ಲಾ ಎದ್ದು ಬಂದು ತಕ್ಕಶಾಸ್ತ್ರಿ ಮಾಡಿರುವ ದೃಶ್ಯಾವಳಿ ವಿಡಿಯೋದಲ್ಲಿ ಕಂಡು ಬರುತ್ತಿದೆ.

ಕಿರುಕುಳಕ್ಕೆ ಒಳಗಾದ ಬಾಲಕಿಯು ಆ ಘನವ್ಯಕ್ತಿಗೆ  ಬಾರಿಸಿದ್ದಾಳೆ.

ಇಷ್ಟೆಲ್ಲಾ ಅವಾಂತರ ನಡೆದಿದ್ದರೂ ಬಸ್ಸು ಚಾಲಕ ಮಾತ್ರ ಬಸ್ಸನ್ನು ಎಲ್ಲಿಯೂ ನಿಲ್ಲಿಸಲೇ ಇಲ್ಲ. ಕಿಡಿಗೇಡಿಯನ್ನು ಪೊಲೀಸರಿಗೆ ಒಪ್ಪಿಸುವ ಕಾರ್ಯವೂ ನಡೆಸಿಲ್ಲ. ಪ್ರಯಾಣಿಕರ ಸುರಕ್ಷಿತ ಕ್ರಮಕ್ಕೂ ನಿರ್ವಾಹಕ ಮುಂದಾಗಲಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top