ಕಲ್ಲಡ್ಕ : ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಜನೆಗೆ ಸಹಾಯ ಮಾಡುವುದು ದೇವರು ಮೆಚ್ಚುವ ಸತ್ಕಾರ್ಯವಾಗಿದೆ. ಕಲಿಕೆಯಿಂದ ಸ್ವಾವಲಂಬಿ ಬದುಕಿಗೆ ಬುನಾದಿಯಾಗಿದೆ. ಸಮಾಜದಲ್ಲಿ ಇಂತಹ ಸತ್ಕಾರ್ಯಗಳನ್ನು ಅದೆಷ್ಟೋ ಮಂದಿ ಮಾಡಿದ್ದರೂ, ತೆರೆಮರೆಯಲ್ಲಿ ಇದ್ದು ಗುರುತಿಸಿಕೊಳ್ಳದವರು ವಿರಳವಾಗಿದ್ದಾರೆ. ಅಂತಹವರಲ್ಲಿ ಕಲ್ಲಡ್ಕ ಮ್ಯೂಸಿಯಂ ಮಾಲಕ ಯಾಶೀರ್ ಕಲ್ಲಡ್ಕ ಒಬ್ಬರಾಗಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್ ಜಿ ಹೇಳಿದರು.
ಬಂಟ್ವಾಳ ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಮಜಿ, ವೀರಕಂಭ ಇಲ್ಲಿ ಕಲ್ಕಡ್ಕ ಮ್ಯೂಸಿಯಂ ನ ಯಾಶೀರ್ ಕಲ್ಲಡ್ಕ ಅವರಿಂದ ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಟಿ ವಿ ಯನ್ನು ಶಾಲೆಗೆ ಹಸ್ತಾಂತರ ಮಾಡಿ, ಶಾಲೆಯ ಪರವಾಗಿ ಯಾಶೀರ್ ಅವರನ್ನು ಅಭಿನಂದಿಸಿದ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಶಾಲಾಭಿವೃಡಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್, ವಿಟ್ಲ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪಕಲಾ, ಕಲ್ಲಡ್ಕ ಕ್ಲೇಸ್ಟರ್ ಸಿ ಅರ್ ಪಿ ಜ್ಯೋತಿ, ಗೋಳ್ತಮಜಲು ಸರಕಾರಿ ಪ್ರೌಢಶಾಲಾ ಶಿಕ್ಷಕ ಸತ್ಯಶಂಕರ್ ಸರ್, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿದರು.


























