*ಆರ್.ಬಿ.ಜಗದೀಶ್
2024 ಮಾಚ್೯ 23ರ ರಾತ್ರಿ ಸುಮಾರು 8.30ರ ವೇಳೆ ಅದಾಗಿತ್ತು.
ಹತ್ತೂರಿನ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಾನದ ಎದುರುಗಡೆಯಲ್ಲಿ ದೇವರ ಗದ್ದೆಯ ಮೂಲಕವಾಗಿ ಸ್ಕೂಟರ್ ವೊಂದು ಬರುತ್ತಿತ್ತು. ಅದನ್ನು ಹಿ ಹಲವು ಶ್ವಾನಗಳು ಹಿಂಬಾಲಿಸುತ್ತಿದ್ದವು.
ಆ -ದೃಶ್ಯಾವಳಿ ಕಂಡು ಏನೋ ಕುತೂಹಲ ಮೂಡಿತು.
ಸ್ಕೂಟರ್ ನಿಲ್ಲಿಸಿದ ಕಡೆಗೆ ನಾನು ಹೆಜ್ಜೆ ಹಾಕಿದೆ. ಗಮನಿಸಿದೆ. ಬಕೇಟ್ ನಲ್ಲಿ ತಂದ ಮಸಾಲೆ ಮಿಶ್ರಿತ ಅನ್ನವನ್ನು ಪ್ಲಾಸ್ಟಿಕ್ ಶೀಟ್ ನಲ್ಲಿ ಹಾಕಿ ಶ್ವಾನಗಳಿಗೆ ಆ ವ್ಯಕ್ತಿ ಯೊಬ್ಬರು ಬಡಿಸುತ್ತಿದ್ದರು.
ಪ್ರಸಕ್ತ ಕಾಲಘಟ್ಟದಲ್ಲಿ ಹಿರಿಯ-ಕಿರಿಯರನ್ನು ಕಡೆಗಣಿಸಿ, ಅನ್ನ-ಆಹಾರ ಸಮರ್ಪಕವಾಗಿ ನೀಡದೇ ಮೃಗೀಯ ರೀತಿಯಲ್ಲಿ ವರ್ತಿಸುತ್ತಿರುವುದು ಸಮಾಜದಲ್ಲಿ ಸುದ್ದಿಯಾಗುತ್ತಿದ್ದರೆ, ಅದೇ ಸಮಾಜದಲ್ಲಿ ಅಲೆಮಾರಿ ಶ್ವಾನಗಳಿಗೆ ಬಿಸಿ ಅನ್ನ ಪದಾರ್ಥ ಸಿದ್ಧಪಡಿಸಿ ಬಡಿಸುವ ವ್ಯಕ್ತಿಗಳು ಕಾಣಬಹುದು.
ಅಂತವರಲ್ಲಿ ಪುತ್ತೂರಿನ ರಾಜೇಶ್ ಬನ್ನೂರು ಕೂಡಾ ಒಬ್ಬರು. ಪುತ್ತೂರು ನಗರಸಭೆಯ ಮಾಜಿ ಅಧ್ಯಕ್ಷ ಅವರಾಗಿದ್ದರು.

ಅವರಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿದಾಗ…..
ಎಳೆವೆಯಲ್ಲಿ ರಾಜೇಶ್ ಬನ್ನೂರಿಗೆ ಪ್ರಾಣಿಗಳ ಎಲ್ಲಿಲ್ಲದ ಹಚ್ಚುಮೆಚ್ಚು.
ಅಲೆಮಾರಿ ಶ್ವಾನಗಳಿಗೆ ಯಾವುದಾದರೂ ರೀತಿಯಲ್ಲಿ ನೆರವು ನೀಡಬೇಕೆಂಬ ಮನಸ್ಸು ಕನಸ್ಸು ಅವರದಾಗಿತ್ತು.
2008ರಲ್ಲಿ ಅವರು ಕಂಡು ಕನಸ್ಸು ನನಸಾಗಿತು. ತನ್ನ ಮನೆಮಂದಿಯ ಸಹಕಾರದೊಂದಿಗೆ ಅನ್ನ ಬಡಿಸುವ ಮಹಾತ್ಕಾರ್ಯ ಅವರು ಶುರು ಮಾಡಿದರು.
ನಿತ್ಯ ನಿರಂತರ ಪ್ರತಿದಿನ ಒಂದು ಹೊತ್ತು ಅನ್ನ ಬಡಿಸುತ್ತಿರುವ ರಾಜೇಶ್ ಬನ್ನೂರು ದಿನವೊಂದಕ್ಕೆ 22 ಕೆ.ಜಿ ಅಕ್ಕಿ ಬೇಯಿಸುತ್ತಿದ್ದಾರೆ ಎಂದರೆ ಅದು ದೊಡ್ಡ ಸಾಧನೆಯೂ ಆಗಿದೆ.
ಬೆಳ್ತಿಗೆ, ಕುಚ್ಚಲು ಅಕ್ಕಿಗಳನ್ನು ಅದಕ್ಕಾಗಿ ಬಳಸುತ್ತಾರೆ. ಹೆಚ್ಚಿನ ದಿನಗಳಲ್ಲಿ ಸಸ್ಯಹಾರಿ ಹಾಗೂ ಕೆಲ ದಿನ ಮಾತ್ರ ಮಾಂಸಹಾರಿ ಪದಾರ್ಥವನ್ನು ಸಿದ್ಧಪಡಿಸುತ್ತಾ, ನಗರ ಸಭಾ ವ್ಯಾಪ್ತಿ ಪ್ರದೇಶಗಳಲ್ಲಿರುವ ಕನಿಷ್ಠ 180ರಷ್ಟು ಶ್ವಾನಗಳಿಗೆ ಬಡಿಸಿದ ಆತ್ಮ ತೃಪ್ತಿ ಅವರದಾಗಿದೆ.
ಕೆಲ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಅಪರೂಪಕ್ಕೊಮ್ಮೆ ಇವರೊಂದಿಗೆ ಕೈ ಜೋಡಿಸುತ್ತದೆ. ಮಿಕ್ಕೆಲ್ಲ ದಿನಗಳಲ್ಲಿ ಸ್ವಂತ ಖರ್ಚು ಭರಿಸುತ್ತಿದ್ದಾರೆ.

ಪರ-ವಿರೋಧಗಳು
ಶ್ವಾನಗಳಿಗೆ ಉಪಚರಿಸಿ ಅನ್ನಬಡಿಸುವ ಕಾರ್ಯಕ್ಕೆ ಸಮಾಜದಿಂದ ಪರ-ವಿರೋಧಗಳು ಕಂಡು ಬರುತ್ತಿರುವುದು ಸಹಜ.
ಪ್ರಾಣಿಸ್ನೇಹವನ್ನು ಬೆಳೆಸುವಂತೆ ಸರಕಾರವೇ ಒಂದು ರೀತಿಯಲ್ಲಿ ಘೋಷಿಸಿಕೊಂಡಿದೆ.ಆದರೂ ಇಷ್ಟೊಂದು ಸಂಖ್ಯೆಯಲ್ಲಿ ಶ್ವಾನಗಳು ಬೀದಿಗಳಲ್ಲಿ ಅಲೆಮಾರಿಗಳಾಗಿ ಅಲೆದಾಡುತ್ತಿರಲಿಲ್ಲ.
ಹೆಣ್ಣು ಹಾಗೂ ಹುಣ್ಣು ( ಅನಾರೋಗ) ಎಂಬ ಕಾರಣದಿಂದ ಶ್ವಾನವನ್ನು ಮನೆಯಿಂದ ಹೊರದಬ್ಬುವವರಿಂದಾಗಿ ಅಲೆಮಾರಿ ಶ್ವಾನಗಳು ಹೆಚ್ಚಾಗಲು ಕಾರಣ.
ಶ್ವಾನಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ, ಆರೋಗ್ಯದ ಕಡೆ ಗಮನ ಕೊಡುವುದರಿಂದ ಈ ಸಮಸ್ಸೆಗೆ ಒಂದಿಷ್ಟು ಕಡಿವಾಣ ಹಾಕಬಹುದು. ರೋಗ ರುಜಿನಾಗಳಿಂದ ಬಳಲುತ್ತಿರುವ ಶ್ವಾನಗಳ ಹೆಚ್ಚಿನ ಚಿಕಿತ್ಸೆಯನ್ನು ಮಂಗಳೂರಿನ ಶಕ್ತಿ ನಗರದಲ್ಲಿರುವ ಎನಿಮಕ್ ಕ್ಯಾರ್ ನಲ್ಲಿ ನೀಡಲಾಗುತ್ತದೆ ಎಂದು ರಾಜೇಶ್ ಬನ್ನೂರು ವಿವರಿಸಿದ್ದಾರೆ.
ಶ್ವಾನಗಳು ವಿಶ್ವಾಸಕ್ಕೆ ಅಘಾತ ಮಾಡಲ್ಲ
ಶ್ವಾನಗಳು ಇತರ ಎಲ್ಲ ಪ್ರಾಣಿಗಳಿಗಿಂತ ಮನುಷ್ಯನೊಂದಿಗೆ ಉತ್ತಮ ರೀತಿಯಲ್ಲಿ ಬೆರೆಯುತ್ತದೆ. ಎಂದಿಗೂ ಅದು ವಿಶ್ವಾಸ ಅಘಾತ ಉಂಟು ಮಾಡುವುದಿಲ್ಲ.
ಅಹಾರ ಹಾಕಿದವರ ಗುರುತು ಅದರ ಜೀವಿತಾವಧಿಯ ವರೆಗೂ ಮರೆಯುವುದಿಲ್ಲ ಎಂಬ ಅಚಲ ವಿಶ್ವಾಸವೊಂದಿರುವ ರಾಜೇಶ್ ಬನ್ನೂರು ಅವರು ಆಯ್ದುಕೊಂಡ ಶ್ವಾನಗಳಿಗೆ ಹೆಸರಿಟ್ಟು ಕರೆಯುತ್ತಾರೆ. ಅದು ಬಾಲ ಅಲ್ಲಾಡಿಸಿ ಬರುತ್ತದೆ.
ಹೂವಿನ ಬುಟ್ಟಿಯಲ್ಲಿ ಬಂದ ಕಟ್ಲಿಸ್ !
ಹೌದು.. ಕಟ್ಲಿಸ್ ಹೆಸರುಳ್ಳ ಆ ಹೆಣ್ಣು ಶ್ವಾನ ರಾಜೇಶ್ ಬನ್ನೂರಿಗೆ ಅಚ್ಚುಮೆಚ್ಚು.
ಚಿಕ್ಕಮರಿ ಇದ್ದಾಗ ಹೂವಿನ ಬಟ್ಟಿಯಲ್ಲಿ ಮೈಸೂರಿನಿಂದ ಪುತ್ತೂರಿಗೆ ಬಂದ ಶ್ವಾನ ಅದಾಗಿದೆ.






































