ಕೋಟ: 10 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ 380 ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೋಟ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ದಿನೇಶ್ ಮೊಗವೀರ ಎಂದು ಗುರುತಿಸಲಾಗಿದೆ. ದಿನೇಶ್ ನ್ಯಾಯಾಲಯಕ್ಕೆ ಹಾಜರಾಗದೆ ಪೊಲೀಸರಿಗೂ ಸಿಗದೇ ತಲೆ ಮರೆಸಿಕೊಂಡಿದ್ದ. ನ್ಯಾಯಾಲಯವು LPC (long pending case) ಪ್ರಕರಣ ಎಂದು ವಾರೆಂಟ್ ಹೊರಡಿಸಿತ್ತು.
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತೇಜಸ್ವಿ ಟಿ ರವರ ಮಾರ್ಗದರ್ಶನದಲ್ಲಿ ಕೋಟಾ ಪೊಲೀಸ್ ಠಾಣೆ HC ಕೃಷ್ಣ ಹಾಗೂ ಸಿಬ್ಬಂದಿಗಳಾದ ರಾಜೇಶ್ ನಾಯ್ಕ ಮಂಜುನಾಥ್ ಮೇಟಿ ರವರು ಕಾರ್ಯಾಚರಣೆಯಿಂದ ಬಂಧಿಸಿ ಮಾನ್ಯ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಆರೋಪಿ ಜಿಲ್ಲಾ ಕಾರಾಗೃಹ ಹಿರಿಯಡ್ಕದಲ್ಲಿದ್ದಾನೆ.






































