ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧ ಪ್ರತಿಭಟಿಸುವ ಯೋಗ ಬಿಜೆಪಿ ಪಾಲಿಗೆ

Picture of RB NEWS

RB NEWS

Bureau Report

ಬಸ್ ನಿಲ್ದಾಣ ಪರಿಸರದಲ್ಲಿ ಪ್ರತಿಭಟನೆ

ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಕಾಂಗ್ರೆಸ್ ಸರಕಾರ ಕೈ ಜೋಡಿಸುತ್ತಿಲ್ಲ. ಪರಿಣಾಮವಾಗಿ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಹಲವು ಜನಪರ ಕಾರ್ಯಕ್ರಮಗಳು ನೆನೆಗುದ್ದಿಗೆ ಬೀಳಲು ಕಾರಣವಾಗಿದೆ. ಈ ನಡುವೆ ಗ್ಯಾರೆಂಟಿ ಹೆಸರಿನಲ್ಲಿ ಜನ ಸಾಮಾನ್ಯರಿಗೆ ಮಂಕುಬೂದಿ ಎರಚಿ ಕಳೆದ ಚುನಾವಣೆಯಲ್ಲಿ ತಕ್ಕಶಾಸ್ತ್ರಿಗೊಳಗಾದ ಕಾಂಗ್ರೆಸ್ ಸರಕಾರ ನಷ್ಟವನ್ನು ಭರ್ತಿ ಮಾಡಲು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಿದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಚೆಲ್ಲಾಟ ವಾಡುತ್ತಿದೆ ಎಂದು ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ  ನವೀನ್ ನಾಯಕ್  ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಉಡುಪಿ ಜಿಲ್ಲೆಯ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ರೇಶ್ಮಾ ಶೆಟ್ಟಿ ಮಾತನಾಡಿದರು.

ಮಾಜಿ ಕೌನ್ಸಿಲರ್ ಪ್ರಕಾಶ್ ರಾವ್ ತಳ್ಳುಗಾಡಿಗೆ ಬ್ಯಾನರ್ ಕಟ್ಟಿ ಪ್ರತಿಭಟಿಸಿದರೆ ಹೆಬ್ರಿಯ ಬಿಜೆಪಿ ಪಕ್ಷದ ಪದಾಧಿಕಾರಿಗಳು ಲಾರಿಗೆ ಹಗ್ಗಕಟ್ಟಿ ಎಳೆದು ಪ್ರತಿಭಟನೆ ನಡೆಸಿದರು. ಬಿಜೆಪಿ ಪಕ್ಷದ ಮಹಿಳೆಯರು ಚೆಂಬು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಚೆಂಬು….ಚೆಂಬು…ಚೆಂಬು… ಎಂದು ಘೋಷಣೆ ಕೂಗಿದರು.

ಕಾರ್ಕಳ ಬಿಜೆಪಿ ಮುಖಂಡರಾದ ಶಿವಪುರ ಸುರೇಶ್ ಶೆಟ್ಟಿ, ಮಣಿರಾಜ ಶೆಟ್ಟಿ, ಮಹಾವೀರ್ ಹೆಗ್ಡೆ, ಅಂತೋನಿ ನಕ್ರೆ, ಮುಟ್ಲುಪ್ಪಾಡಿ ಸತೀಶ್ ಶೆಟ್ಟಿ, ಸೊಜನ್ ಜೇಮ್ಸ್ , ಇರ್ವತ್ತೂರು ಉದಯ ಎಸ್.ಕೋಟ್ಯಾನ್ , ಹರೀಶ್ ನಾಯಕ್ ಅಜೆಕಾರು, ಸುಮೀತ್ ಶೆಟ್ಟಿ ಕೌಡೂರು, ಕೆ.ಪಿ.ಶೆಣೈ, ರವೀಂದ್ರ ಮೊಯಿಲಿ, ನಿಟ್ಟೆ ಪ್ರವೀಣ್ ಸಾಲಿಯಾನ್, ಶ್ರೀನಿವಾಸ ಕಾರ್ಲ, ಜಯರಾಂ ಸಾಲಿಯಾನ್ , ಗಿರಿಧರ್ ನಾಯಕ್ , ನಿತ್ಯಾನಂದ ಪೈ , ಹರೀಶ್ ನಾಯಕ್ ,ಅನಂತಕೃಷ್ಣ ಶೆಣೈ, ಪಕ್ಷದ ವಿವಿಧ ಪದಾಧಿಕಾರಿಗಳು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ ಜಿಲ್ಲೆಯ ಎಡಿಶನಲ್  ಎಸ್ಪಿ ಕ್ರೈಂ ಪರಮೇಶ್ವರ  ಹೆಗ್ಡೆ ಮಾರ್ಗದರ್ಶನ ದಲ್ಲಿ ಕಾರ್ಕಳ ಡಿ ವೈ ಎಸ್ಪಿ ಅರವಿಂದ ಕಾಲಗುಜ್ಜಿ ನೇತೃತ್ವದಲ್ಲಿ
ಕಾರ್ಕಳ ನಗರ ಠಾಣಾದಿಕಾರಿ ನಾಗೇಶ್,ನಗರ ಠಾಣೆ ಯ ಠಾಣಾಧಿಕಾರಿ ನಾಗೇಶ್  ಕದ್ರಿ   , ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಬಿ ,ಕಾರ್ಕಳ ಗ್ರಾಮಾಂತರ ಠಾಣೆ ಯ ದಿಲೀಪ್, ಪಡುಬಿದ್ರೆ ಠಾಣೆ ಠಾಣಾಧಿಕಾರಿ ಪ್ರಸನ್ನ,ಅಜೆಕಾರು ಠಾಣೆಯ ಠಾಣಾಧಿಕಾರಿ ಬಿಕೆ ರವಿ ಬಂದೋಬಸ್ತ್ ವ್ಯವಸ್ಥೆ ಗೊಳಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top