


ಪುತ್ತೂರು V/S ಬಿಜೆಪಿ

ತನ್ನ ಪೂರ್ವಾಶ್ರಮದ ಗುರುಗಳು, ಹಿರಿಯ ನೇತಾರ, ಮಾಜಿ ಶಾಸಕ ಡಾ.ಉರಿಮಜಲು ರಾಮ ಭಟ್ಟ ಅವರ ಮನೆಯ ದಾರಿ ರಿಪೇರಿ ಹಾಗೂ ಡಾಮರೀಕರಣಕ್ಕೆ ಐದು ಲಕ್ಷ ಅನುದಾನವನ್ನು ಪುತ್ತೂರಿನ ಕಾಂಗ್ರೆಸ್ ಶಾಸಕ ಕೆ.ಅಶೋಕ್ ರೈ ಎತ್ತಿಟ್ಟದ್ದೇ ಅಲ್ಲಿನ ಬಿಜೆಪಿಗೆ ಗಂಟಲಲ್ಲಿ ನೀರು ಸಿಕ್ಕಿಕೊಂಡಂತಾಗಿದ್ದು.!
ಡಾ.ಉರಿಮಜಲು ರಾಮ ಭಟ್ಟರು ಜನಸಂಘ,ಬಿಜೆಪಿಯವರೇ ಆಗಿದ್ದರೂ ಸಾರ್ವಜನಿಕ ಜೀವನದಲ್ಲಿ ಭೇದ ಎಣಿಸಿದವರಲ್ಲ. ಅವರ ಫಿಯೆಟ್ ಕಾರಲ್ಲಿ ಯಾರನ್ನೂ ಕೂರಿಸಿಕೊಳ್ಳುತ್ತಿದ್ದರು.
ಪುತ್ತೂರಿನ ಬಿಜೆಪಿಗೆ ಪುರುಷನಕಟ್ಟೆ ಘಟನೆಯು ಶಕುನವಾಗಿ ದಕ್ಕಿದ್ದು #ಕಾರ್ಕೋಟಕ ದೆಸೆ ! ಪುತ್ತೂರು ಬಿಜೆಪಿಯ ಕಾಲಿನ ಮೀನಖಂಡವನ್ನು ಕಚ್ಚಿಕೊಳ್ಳಲು #ಶನಿ ಹೊಂಚುಹಾಕಿ ಕೂತದ್ದೇ ಪುರುಷನಕಟ್ಟೆಯಲ್ಲಿ ಅನ್ನಬೇಕು.!
ಪುತ್ತೂರು ಪ್ರಶಾಂತ
ಅನೇಕ ವರ್ಷಗಳಿಂದ ತಕ್ಕಮಟ್ಟಿಗೆ,ಕಳೆದೆರಡು ವರ್ಷಗಳಿಂದ ಕಡ್ಡಾಯವಾಗಿ ಗಲಾಟೆ,ಇರಿತ ಇತರೇ ಅನೈತಿಕ ,ಸಮಾಜ ವಿರೋಧಿ ಕೆಲಸವಿಲ್ಲದೆ ಒಂದು ರೀತಿಯ ಪ್ರಶಾಂತ ವಾತಾವರಣದಲ್ಲಿ ಪುತ್ತೂರು ತೇಲಿಕೊಳ್ಳುತ್ತಲಿತ್ತು. ಪುತ್ತೂರಿನ ಅತಿ ಸೂಕ್ಷ್ಮ ಕತೆಗಳನ್ನು ಹತ್ತೂರಿಗೆ ಹರಡಿಸಿದರೆನೆ ನಮ್ಮ ಮತಬ್ಯಾಂಕು ತುಂಬಿ ಸುಮುಲುತ್ತದೆ ಅಂತ ಬಿಜೆಪಿಯ ಬದಲಾಗದ ಸೈದ್ಧಾಂತಿಕ ಲೆಕ್ಕಾಚಾರ .
ಪುತ್ತೂರಿನ ಬಿಜೆಪಿಯು ತನ್ನ ರಾಜಕೀಯ ಪ್ರಾಬಲ್ಯವನ್ನು ವಿಸ್ತರಿಸಿ ಬಲಪಡಿಸಿಕೊಳ್ಳಲಿಕ್ಕೆ ಪುರುಷನಕಟ್ಟೆಯಂತಹ ಕ್ರೈಮ್ ಸ್ಟೋರಿಯನ್ನೇ ಬರೆಯಬೇಕಾಗಿರಲಿಲ್ಲ. ಪುತ್ತೂರಿನಲ್ಲಿ ಮುಂದೆ ಆಗಬೇಕಾದುದು ಬಿಜೆಪಿ ಅಭ್ಯರ್ಥಿ ಗೆಲ್ಲುವ ಪ್ರಯತ್ನಕ್ಕಿಂತಲೂ #ರನ್ನರ್ಸಪ್ ಆಗುವುದು!

ಅಷ್ಟಕ್ಕೂ ಕಾಂಗ್ರೆಸ್ ಶಾಸಕ ಕೆ. ಅಶೋಕ್ ರೈ ವಿವಾದಕ್ಕೆ ಸಿಲುಕುವುದು ಮಾತನಾಡಲು ಅರ್ಥಾತ್ ಬಿಜೆಪಿಯ ನಾಯಕರ ಬುಡವನ್ನೇ ಕತ್ತರಿಸುವಂಥ ಹೇಳಿಕೆ ಕೊಡಲು ಅವರಿಂದಾಗದಿರುವುದು. ಪದೇ ಪದೇ ಮಹಾಲಿಂಗೇಶ್ವರನ ಮೇಲೆ ಆಣೆ ,ಪ್ರಮಾಣ ,ಪ್ರಾರ್ಥನೆ ಅದು ಸಾರ್ವಜನಿಕ ಜೀವನದಲ್ಲಿ ತೋರಿಸಿಕೊಳ್ಳುವ ಪಾರದರ್ಶಕ ನಡೆಯಾಗುವುದಿಲ್ಲ. ಅಶೋಕ್ ರೈಗಳು ಕೆಲವು ಹೇಳುವುದು ಬರೇ ಬೀದಿ ಮಾತಿನಂತಾಗುತ್ತಿರುವುದು ಒಂದು ಬಗೆಯಲ್ಲಿ ಅಸಹ್ಯ ತರಿಸುವಂತಿದೆ. ಊರೊಳಗೆ ನಡೆಯುವ ಹೆಚ್ಚಿನ ಘಟನೆಗಳನ್ನು ತನಗಿಂತ ಹೆಚ್ಚು ನಿಖರವಾಗಿ ಸಾರ್ವಜನಿಕರು (Public people) ತಿಳಿದುಕೊಂಡಿರುತ್ತಾರೆ ಎಂಬ ತಿಳುವಳಿಕೆ ಯಾವನೇ ಒಬ್ಬ ಪ್ರಾಮಾಣಿಕ ಹಾಗೂ ಪಾರದರ್ಶಕ ನಡೆಯ ನಾಯಕನು ತಿಳಿದುಕೊಂಡಿರಬೇಕು. ಅಲ್ಲಸಲ್ಲದ ಉತ್ತರ ಕೊಡುವುದು,ದೇವರು,ದೇವಸ್ಥಾನದ ಹರಕೆಯಮಾತುಗಳು ತೀರ ಅಸಂಬದ್ಧವೆನಿಸುತ್ತದೆ ಜೊತೆಗೆ ,ಜನರಲ್ಲಿನ ನಂಬಿಕೆ,ವಿಶ್ವಾಸಾರ್ಹತೆಯೂ ಕರಗಿಹೋಗುತ್ತದೆ .ಅದನ್ನು ಅಶೋಕ ರೈ ತಿಳಿದುಕೊಂಡಿರಬೇಕು.
ಆರ್. ಎಸ್. ಎಸ್. ಮತ್ತು ಜನಸಂಘದ ಹುಟ್ಟು ಮತ್ತು ಅಡಗುತಾಣವೇ ಆಗಿದ್ದ #ಪುತ್ತೂರು ಇಂದು ಒಬ್ಬ ಸಮರ್ಥನೆನ್ನಬಹುದಾದ ರಾಜಕೀಯ ನಾಯಕನನ್ನು ರೂಪಿಸಿಕೊಳ್ಳಲಾಗದ ದಯನೀಯ ಸ್ಥಿತಿಗೆ ಬಂದಿರುವುದು ವಿಷಾದಕರ.
ಹಾವಾಡಿಗನು ನಾಗರಹಾವನ್ನು ತನ್ನ ಬುಟ್ಟಿಯೊಳಗೆ ಮಲಗಿಸಿಟ್ಟು ಸಂತೆಯಲ್ಲಿ ಹಣ ಮಾಡುವಂತೆ ರಾಜ್ಯ ಬಿಜೆಪಿಯು ಅರುಣ ಕುಮಾರ್ ಪುತ್ತಿಲರನ್ನು ಪಕ್ಷ ವಿರೋಧಿ ಕಾಳಿಂಗ ಸರ್ಪ ಅಂತ ನಚ್ಚಿಸುವುದಕ್ಕೆ ಗೂಡಲ್ಲಿಟ್ಚುಕೊಂಡರೂ ಸಹ ಅದಕ್ಕೆ ಪಕ್ಷವೇ ಹೆದರುತ್ತಿದೆ! ಪುತ್ತಿಲ ನಚ್ಚುತ್ತಿಲ್ಲ! ಬಿಜೆಪಿಗೆ ಯಾವುದೇ ಲಾಭ ಬರುತ್ತಿಲ್ಲ.! ಈಗೇನೋ ಸಂಸದ ಬೃಜೇಶ್ ಚೌಟ ಋಣ ಸಂದಾಯಕ್ಕಾಗಿ ಮಾತ್ರ ಕದ್ದು ಮುಚ್ಚಿ ಬೆಂಬಲಿಸುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ತನ್ನ ರಾಜಕೀಯ ಬದುಕಿನಲ್ಲಿ ಜಾತಿ ಕೆಡಿಸಿಕೊಂಡದ್ದು ಅದು ಅವರ ದೂರದೃಷ್ಠಿಯ ಕೊರತೆಯಿಂದ ಅಷ್ಟೆ ಹೊರತು ಬಿಜೆಪಿಯು ನೇರ ಹೊಣೆಯಾಗುವುದಿಲ್ಲ.
ಪುತ್ತಿಲ ಸಂಪತ್ತು






































