ಪಾವೂರು- ಉಳಿಯ ಕುದ್ರು ಉಳಿವಿಗಾಗಿ ಹೋರಾಟ ಯಶಸ್ವಿ : ಜಿಲ್ಲಾಡಳಿತದಿಂದ ಸಮಿತಿ ರಚನೆ
ಮಂಗಳೂರು : ಪಾವೂರು-ಉಳಿಯ ಕುದ್ರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೊನೆಗೂ ಜಿಲ್ಲಾಧಿಕಾರಿಯರಿಂದ ಸಮಿತಿಯೊಂದು ರಚನೆಯಾಗಿದೆ.

ದ್ವೀಪದಲ್ಲಿ ಮರಳುಗಾರಿಕೆಯನ್ನು ನಿಲ್ಲಿಸುವಂತಾದದ್ದು ಹೋರಾಟದಲ್ಲಿ ನಾವು ಪಡೆದ ಮೊದಲ ಸಫಲತೆಯಾಗಿದ್ದರೆ, ಗಣಿ ಹಾಗೂ ಭೂವಿಜ್ಞಾನ ಇಲಾಖೆ ಹಾಗೂ ಮರಳು ಮಾಫಿಯಾದ ಅನ್ನೋನ್ಯತೆಯನ್ನು ಜನರ ಮುಂದೆ ತೆರೆದಿಟ್ಟದ್ದು ನಮ್ಮ ಎರಡನೇ ಜಯವಾಗಿತ್ತು. ಇದೀಗ ಜಿಲ್ಲಾಧಿಕಾರಿಯವರು ರಚಿಸಿದ ಸಮಿತಿಯನ್ನು ನಮ್ಮ ಸತ್ಯಾಸತ್ಯತೆಗೆ ದೊರಕಿದ ಜಯವೆಂದೇ ಪರಿಗಣಿಸಬಹುದಾಗಿದೆ.
ಉಳಿಯ ನಿವಾಸಿಗಳನ್ನು ರಕ್ಷಿಸುವ ಹಾಗೂ ಪರಿಸರ ಸಂರಕ್ಷಿಸುವ ಈ ಯಜ್ಞದಲ್ಲಿ ಸಮಾನ ಮನಸ್ಕ ಸಂಘಟನೆಗಳ ನೇತಾರರಾದ ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಮಂಗಳೂರು ಧರ್ಮಪ್ರಾಂತ್ಯ ಪಿಆರ್ ಓ ರೋಯ್ ಕಾಸ್ತೆಲಿನೋ, ಕಥೋಲಿಕ್ ಸಭಾ ಮಾಜಿ ಅಧ್ಯಕ್ಷ ಸ್ಪ್ಯಾನಿ ಲೋಬೊ ಬಂಟ್ವಾಳ, ಪ್ರಸ್ತುತ ಅಧ್ಯಕ್ಷ ಆಲ್ವಿನ್ ಪಾನೀರ್ ನೇತೃತ್ವದಲ್ಲಿ ಹೋರಾಟ ನಡೆಯುತ್ತಾ ಬಂದಿದೆ.

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದು, ಸಕರಾತ್ಮಕವಾಗಿ ಸ್ವಂದನೆ ದೊರೆತ್ತಿದೆ.





































