ಪರ್ಪಲೆಗಿರಿ ಬ್ರಹ್ಮಕಲಶೋತ್ಸವ ಹಸಿರು ಹೊರೆಕಾಣಿಕೆಗೆ ಚಾಲನೆ

Picture of RB NEWS

RB NEWS

Bureau Report

ಕಾರ್ಕಳ : ಅತ್ತೂರು ಪರ್ಪಲೆಯ ಕೃಷ್ಣಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್‌ ವತಿಯಿಂದ ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿ ಆಶ್ರಯದಲ್ಲಿ ಕಲ್ಕುಡ ಕಲ್ಲುರ್ಟಿ-ತೂಕತ್ತರಿ ಧರ್ಮದೈವಗಳ ಶಿಲಾಮಯ ಗರ್ಭಗೃಹ ಸಮರ್ಪಣೆ ಮತ್ತು ದೈವ ಬಿಂಬಪ್ರತಿಷ್ಠೆ ಸಾನಿಧ್ಯ ಕಲಶೋತ್ಸವ ಹಾಗೂ ವೈಭವದ ಸಿರಿ ಸಿಂಗಾರ ನೇಮೋತ್ಸವ ಮೇ 17 ರಿಂದ ಮೂರು ದಿನಗಳ ಕಾಲ ನಡೆಯಲಿದೆ.
ಅದರ ಅಂಗವಾಗಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಕಾರ್ಕಳ ಬಂಡೀಮಠದಲ್ಲಿ ಶನಿವಾರ ಚಾಲನೆ ನೀಡ ಲಾಯಿತು.

ಸಮಿತಿ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ, ಕಾರ್ಯಾಧ್ಯಕ್ಷ ಪ್ರಶಾಂತ್ ಕಾಮತ್ ಬೋಳ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್‌, ಟ್ರಸ್ಟ್ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ, ಪ್ರಮುಖ ರಾದ ಸತ್ಯೇಂದ್ರ ಕಿಣಿ, ಸಿರಿಯಣ್ಣ ಶೆಟ್ಟಿ ಅಜಿತ್ ಕಾಮತ್ ಮತ್ತಿತರರು ಭಾಗವಹಿಸಿ ಭಾರತ ಮಾತೆಯ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ವಾಹನಗಳ ಮೂಲಕ ಭಕ್ತರು ನೀಡಿದ ಹೊರೆಕಾಣಿಕೆಯು ಕ್ಷೇತ್ರಕ್ಕೆ ಸಮರ್ಪಣೆ ಗೊಂಡಿತ್ತು. ಊರ- ಪರವೂರ ಭಕ್ತಾದಿ ಗಳು ಭಾಗವಹಿಸಿ ಹೊರೆಕಾಣಿಕೆ ಸಮರ್ಪಿ ಸಿದರು. ಬಂಡೀಮಠ ಮೂಡುಗಣಪತಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಅತ್ತೂರು ಪರ್ಪಲೆಗಿರಿಗೆ ವೈಭವದಿಂದ ಸಾಗಿ ಬಂತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top