ಪರ್ಪಲೆಗಿರಿ ಕಲ್ಕುಡ ದೈವಸ್ಥಾನ ಧಾರ್ಮಿಕ ಸಭೆಹಿಂದೂ ಭಾಂಧವರ ಕುಟುಂಬ ಸಂಗಮ: ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ

Picture of RB NEWS

RB NEWS

Bureau Report


ಕಾರ್ಕಳ :ಪರ್ಪಲೆಗಿರಿಯ ಕಲ್ಕುಡ ಸಾನಿಧ್ಯದಲ್ಲಿ ಸಮಸ್ತ ಹಿಂದೂಗಳು ಭಾಗವಹಿರುವುದು ಹಿಂದೂ ಭಾಂಧವರ ಕುಟುಂಬ ಸಂಗಮವಾಗಿದೆ ಎಂದು ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಆನಂತಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಹೇಳಿದರು.
ಹಿಂದೂ ಸಮಾಜದ ಐಕ್ಯತೆಗಾಗಿ ಸುಮಾರು ೫೦೦ ವರ್ಷಗಳಿಂದ ಕಾರ್ಕಳದ ಪರ್ಪಲೆಗಿರಿಯಲ್ಲಿ ನೆಲೆಸಿರುವ ಶ್ರೀ ಕಲ್ಕುಡ – ಕಲ್ಲುರ್ಟಿ – ತೂಕತ್ತರೀ ಧರ್ಮದೈವಗಳ ಶಿಲಾಮಯ ಗರ್ಭಗೃಹದಲ್ಲಿ ದೈವಬಿಂಬ ಪುನಃಪ್ರತಿಷ್ಠೆ – ಸಾನಿಧ್ಯ ಕಲಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಗವಹಿಸಿ ಆಶೀರ್ವಚನ ನೀಡಿದರು.
ದೈವಸ್ಥಾನವು ಅತ್ಯಂತ ಸುಂದರವಾಗಿ ನಿರ್ಮಾಣವಾಗಿದೆ. ಇಲ್ಲಿಯ ಕಾಷ್ಠ ಶಿಲ್ಪದ ವೈಭವವು ಬೇಲೂರು ಶಿಲ್ಪದ ತುಣುಕನ್ನು ಕಾಣುವಂತಾಗುತ್ತಿದೆ ಎಂದರು. ದಾನಿಗಳ ಸಹಕಾರದಿಂದ ದೈವಸ್ಥಾನವು ವೈಭಯುತವಾಗಿ ಮೂಡಿ ಬಂದಿದೆ ಇದರೊಂದಿಗೆ ಮುಂದಿನ ಯೊಜನೆಗಳು ಸಾಕರಗೊಳ್ಳಲಿ ಎಂದರು. ರಾಮ ಮಂದಿರದ ನಿರ್ಮಾಣ, ಕುಂಭ ಮೇಳ ನೋಡುವ ಭಾಗ್ಯ, ಇದರೊಂದಿಗೆ ಕಲ್ಕುಡ ಗುಡಿ ನಿರ್ಮಾಣ ಇವೆಲ್ಲವೂ ನಮ್ಮ ಜೀವಿತದ ಅವಧಿಯಲ್ಲಿ ನಡೆಯುತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲ ಎಂದರು.
ಧಾರ್ಮಿಕ ಸಭೆಯ ಅಧ್ಯಕ್ಷತೆ ಯನ್ನು ಉದ್ಯಮಿ ಬೋಳ ಪ್ರಭಾಕರ ಕಾಮತ್ ವಹಿಸಿ ಮಾತನಾಡಿ ಹಿಂದೂ ಧರ್ಮದ ಸಂಘಟಿತ ಹೋರಾಟದಿಂದ ಇಂದು ಪರ್ಪಲೆಗಿರಿಯಲ್ಲಿ ವೈಭವಯುತವಾದ ದೈವಸ್ಥಾನ ನಿರ್ಮಾಣವಾಗಿದೆ. ಭಕ್ತಿ, ನಿಷ್ಠೆ, ಶ್ರದ್ಧೆಯಿಂದ ಈ ಕ್ಷೇತ್ರದಲ್ಲಿ ಬಜಿಸುವಂತಾಗಲಿ ಆ ಮೂಲಕ ಮುಂದಿನ ಪೀಳಿಗೆಗೆ ಒಲಿತಾಗಲಿ ಎಂದರು.
ಸಭಾ ಕಾರ್ಯಕ್ರಮವನ್ನು ಬೆಂಗಳೂರು ಎಮ್. ಆರ್. ಜಿ. ಗ್ರೂಪ್‌ನ ಚಯರ್ ಮ್ಯಾನ್ ಡಾ| ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಅನ್ನ, ನೀರು, ಇಲ್ಲದೆ ಕೆಲವು ದಿನ ಬದುಕಬಹುದಾದರೂ, ದೇವರ ದಯೆ ಇಲ್ಲದೆ ಬದುಕು ಅಸಾಧ್ಯ. ಪ್ರತಿಯೊಬ್ಬರಿಗೂ ದೇವರ ಅನುಗ್ರಹ ಬೇಕು . ಜನ್ಮ ನೀಡಿದ ತಾಯಿಯನ್ನು, ಭೂಮಿಯನ್ನು ಎಂದು ಮರೆಯಬಾರದು ನಮ್ಮ ದುಡಿಮೆಯ ಒಂದಂಶವನ್ನು ದಾನ ಮಾಡಿದಾಗ ನಾವು ಋಣ ಮುಕ್ತರಾಗಲು ಸಾಧ್ಯವೆಂದರು.
ದೈವಸ್ಥಾನದ ಕೊಡಿ ಅಡಿ ಮಹಡಿ ನಿರ್ಮಿಸಿಕೊಟ್ಟ ಬೆಂಗಳೂರು ಉದ್ಯಮಿ ಚೇತನ ಹೆಗ್ಡೆಯವರ ತಾಯಿ ಯಶೋದ ಹೆಗ್ಡೆ, ಬ್ರಹ್ಮಶ್ರೀ ಕುತ್ಯಾರು ಕೇಂಜ ಶ್ರೀ ಶ್ರೀಧರ ತಂತ್ರಿ, ಪರ್ಪಲೆಗಿರಿ ಕಲ್ಕುಡ ಕ್ಷೇತ್ರದ ವಾಸ್ತು ತಜ್ಞ ಪ್ರಮಲ್ ಕುಮಾರ್, ಧಾರವಾಡ ವಿಠಲ ಮಂದಿರದ ಪ್ರಧಾನ ಆರ್ಚಕರಾದ ವೇದಮೂರ್ತಿ ಸೋಮದೇವ ನಾರಾಯಣ ಮರಾಠೆ, ಅತ್ತೂರು ನಿಟ್ಟೆ ಬಲಿಪಗುತ್ತು ವಿಠಲ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು, ಉಡುಪಿ ಮಾಜಿ ಶಾಸಕರಾದ ರಘುಪತಿ ಭಟ್, ಭಾರತ ಸರಕಾರದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್, ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವೇಂದ್ರ ಹೆಗ್ಡೆ, ನಲ್ಲೂರು ನಡ್ಡೋಡಿಗುತ್ತು ಪೂನಾ ಉದ್ಯಮಿ ಭಾಸ್ಕರ ಶೆಟ್ಟಿ, ಶ್ರೀ ಕಲ್ಕುಡ ದೈವಸ್ಥಾನ ಪರ್ಪಲೆಗಿರಿ ಪ್ರಧಾನ ಶಿಲ್ಪಿಗಳಾದ ಜಗದೀಶ್, ಕಾಷ್ಠ ಶಿಲ್ಪಿ ಕಾರ್ತಿಕ್ ಆಚಾರ್ಯ, ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕು| ಶೋಭಾ, ಪ್ರಗತಿಪರ ಕೃಷಿಕರಾದ ನಿಟ್ಟೆ ಮೈಲಾಜೆಯ ಮಹಾಬಲ ಸುವರ್ಣ, ಕಾರ್ಕಳ ಕುಲಾಲ ಸುಧಾರಕ ಸಂಘದ ಗೌರವಾಧ್ಯಕ್ಷ ಭೋಜ ಕುಲಾಲ್, ಸುಂದರ ಬಿ. ಈದು, ಹೊಸ್ಮಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ, ಕಾರ್ಯಾಧ್ಯಕ್ಷರಾದ ಬೋಳ ಪ್ರಶಾಂತ್ ಕಾಮತ್, ಅತ್ತೂರು ಕೃಷ್ಣ ಗಿರಿ ಶ್ರೀ ಕಲ್ಕುಡ ದೈವಸ್ಥಾನ ಟ್ರಸ್ಟ್ (ರಿ.) ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ, ಕಾರ್ಯದರ್ಶಿ ಎನ್. ಸತ್ಯೇಂದ್ರ ಭಟ್ ಉಪಸ್ಥಿತರಿದ್ದರು.
ಶ್ರೀಮತಿ ನಿನಾದ ಭಟ್ ಪ್ರಾರ್ಥಿಸಿದರು. ಅತ್ತೂರು ಪರ್ಪಲೆಗಿರಿ ಪುನರುತ್ಥಾನ ಸಮಿತಿಯ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಪ್ರಾಸ್ತಾವನೆಗೈದು ಸ್ವಾಗತಿಸಿದರು. ಸತೀಶ್ ಕುಲಾಲ್ ನಿರೂಪಿಸಿದರು ರಂಜಿತ್ ಶಿರ್ಲಾಲು ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top